ಸರಿಯಾಗಿ ಬಸ್ ಇಲ್ಲದೆ ಪ್ರಯಾಣಿಕರ ಪರದಾಟ: ಅಧಿಕಾರಿ, ಸಿಬ್ಬಂದಿಗಳಿಗೆ ಹಿಡಿ ಶಾಪ.

ಮೈಸೂರು, ಮೇ,30,2024 (www.justkannada.in): ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ, ಸರಗೂರಿನಿಂದ ಕಾಡಂಚಿನ ಗ್ರಾಮಗಳಿಗೆ ಸಂಜೆ ವೇಳೆ  ಸರಿಯಾದ ಬಸ್ ವ್ಯವಸ್ಥೆಇಲ್ಲದೆ  ಅಲ್ಲಿನ ಜನರು ಪರದಾಡುತ್ತಿದ್ದು ಕೆಎಸ್ ಆರ್ ಟಿಸಿ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಸಮಯಕ್ಕೆ ಸರಿಯಾಗಿ ಬಸ್ ಸಿಗದೆ ಪ್ರಯಾಣಿಕರು ಪರದಾಟ ನಡೆಸುತ್ತಿದ್ದು, ಸಂಜೆ 5 ಗಂಟೆಯಿಂದ ರಾತ್ರಿ 9 ಗಂಟೆವರಗೆ ಪ್ರಯಾಣಿಕರು ಕಾದು ನಿಂತ ದೃಶ್ಯಗಳು ಕಂಡು ಬಂದಿದೆ. ಅವಳಿ ತಾಲೂಕುಗಳಲ್ಲಿ ಸೂಕ್ತ ಬಸ್ ವ್ಯವಸ್ಥೆ ಇಲ್ಲದೆ ಜನರು ಕಂಗಾಲಾಗಿದ್ದಾರೆ.

ಕೂಲಿ, ಆಸ್ಪತ್ರೆ, ಶಾಲೆ, ಉದ್ಯೋಗಕ್ಕಾಗಿ ದೂರದ ಊರುಗಳಿಂದ ಬರುವ ಜನರಿಗೆ ವಾಪಸ್ ಮನೆ ಸೇರಲು ಬಸ್ ಇಲ್ಲದೆ ಪರದಾಟ ಸ್ಥಿತಿ ನಿರ್ಮಾಣವಾಗಿದ್ದು ರಾತ್ರಿ ಎಲ್ಲಾ ಕಾದು ಬೇಸತ್ತ ಪ್ರಯಾಣಿಕರು ಕೆಎಸ್ಆರ್ಟಿಸಿ ಅಧಿಕಾರಿ, ಸಿಬ್ಬಂದಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

Key words: mysore, passengers, wait, bus