ಮೈಸೂರು,ಜೂ,27,2020(www.justkannada.in): ದಿನೇ ದಿನೇ ಹೆಚ್ಚುತ್ತಿರುವ ಕೊರೋನಾ ಮಹಾಮಾರಿ ತಡೆಗಟ್ಟಲು ಸರ್ಕಾರ ಹರಸಾಹಸಪಡುತ್ತಿದ್ದು ಈ ನಡುವೆ ಇಂದು ಮೈಸೂರಿನಲ್ಲಿ ತರಕಾರಿ ಮಾರಾಟಗಾರನೋರ್ವ ಜನರಲ್ಲಿ ಗಾಬರಿ ಹುಟ್ಟಿಸಿರುವ ಘಟನೆ ನಡೆದಿದೆ.
ಚಾಮರಾಜ ಮೊಹಲ್ಲಾದ ದಿವಾನ್ ರಸ್ತೆಯಲ್ಲಿ ತರಕಾರಿ ಮಾರುತ್ತಿದ್ದ ವ್ಯಾಪಾರಿಯೋರ್ವ ಜನರಲ್ಲಿ ಭಯ ಹುಟ್ಟಿಸಿದ ಘಟನೆ ನಡೆದಿದೆ. ತನ್ನ ಬಳಿ ತರಕಾರಿ ಕೊಳ್ಳಲು ಬರುವವರಿಗೆ ಹಳೆಯ ಸೀರೆ ಕೊಡಿ ಎಂದು ತರಕಾರಿ ಮಾರಾಟಗಾರ ಕೇಳಿದ್ದಾನೆ. ಈ ವೇಳೆ ಸಾರ್ವಜನಿಕರು ಸೀರೆ ಏಕೆ ಎಂದು ಪ್ರಶ್ನಿಸಿದ್ದಕ್ಕೆ, ಹಳೇ ಸೀರೆಗೆ 500 ರೂ ನೀಡುತ್ತೇನೆಂದು ತರಕಾರಿ ಮಾರಾಟಗಾರ ಆಮಿಷ ಒಡ್ಡಿದ್ದಾನೆ.
ಇದಾದ ನಂತರ ಜನರು ಕೊಟ್ಟ ಸೀರೆಗೆ ಆತ ಎಂಜಲು ಒರೆಸಿದ್ದಾನೆ. ಎಂಜಲು ಒರೆಸಿದ್ದನ್ನು ಕಂಡು ಸ್ಥಳೀಯರು ಭಯಭೀತರಾಗಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ.
Key words: mysore- People -scared – behavior – vegetable seller