ಮೈಸೂರು, ಮೇ 23, 2021 : (www.justkannada.in news ) ಇತ್ತೀಚೆಗೆ ಅಕಾಲಿಕ ನಿಧನ ಹೊಂದಿದ ಮೈಸೂರಿನ ಹಿರಿಯ ಪತ್ರಿಕಾ ಛಾಯಾಗ್ರಾಹಕ ನೇತ್ರ ರಾಜು ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಮೈಸೂರಿನ ಇನ್ ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಸಭಾಂಗಣದಲ್ಲಿ ಭಾನುವಾರ ನಡೆಸಲಾಯಿತು.
ಫೋಟೋ ಜರ್ನಲಿಸ್ಟ್ ಹಾಗೂ ವಿಡಿಯೊ ಜರ್ನಲಿಸ್ಟ್ ಹಾಗೂ ಪತ್ರಕರ್ತರ ಸ್ನೇಹಿತರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಮೃತರ ಆತ್ಮಕ್ಕೆ ಶಾಂತಿ ಕೋರಲಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಲಾ ಗೈಡ್ ಕಾನೂನು ಪತ್ರಿಕೆಯ ಸಂಪಾದಕ ವೆಂಕಟೇಶ್ ಮಾತನಾಡಿ , ನೇತ್ರ ರಾಜು ಅವರ ನೆನಪಿಗಾಗಿ ಪ್ರತಿ ವರ್ಷ ಪತ್ರಿಕಾ ಛಾಯಾಗ್ರಾಹಕರು ಹಾಗೂ ವಿಡಿಯೊ ಜರ್ನಲಿಸ್ಟ್ ಕುಟುಂಬದ ಮಕ್ಕಳು ಹತ್ತನೇ ತರಗತಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ 10 ಸಾವಿರ ರೂ. ನಗದು ಹಾಗೂ ಪ್ರಮಾಣ ಪತ್ರ ನೀಡುವುದಾಗಿ ಹೇಳಿದರು.
ಎಸಿಐಸಿಎಂ ಸಂಚಾಲಕ ಎಂ ಲಕ್ಷ್ಮಣ್ ಮಾತನಾಡಿ , ನೇತ್ರ ರಾಜು ಅವರ ಬದ್ಧತೆ ಎಲ್ಲರಿಗೂ ಮಾದರಿ. ಅವರ ಅಕಾಲಿಕ ನಿಧನ ಪತ್ರಿಕಾರಂಗಕ್ಕೆ ನಷ್ಟವನ್ನುಂಟು ಮಾಡಿದೆ ಎಂದು ವಿಷಾದಿಸಿದರು.
ಪತ್ರಿಕಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಪ್ರಗತಿ ಗೋಪಾಲಕೃಷ್ಣ ಮಾತನಾಡಿ, ನೇತ್ರ ರಾಜು ಅವರ ಬದ್ಧತೆ ಕಾರ್ಯವೈಖರಿ ಕಿರಿಯ ಛಾಯಾಗ್ರಹಣಕ್ಕೆ ಮಾರ್ಗದರ್ಶನವಾಗಿದೆ. ವೃತ್ತಿ ಪರತೆ, ಕ್ರಿಯೇಟಿವಿಟಿ ಎಲ್ಲಾ ಛಾಯಾಗ್ರಾಹಕರಿಗೂ ಅನುಸರಿಸಬೇಕಾದ ಮಾರ್ಗವನ್ನು ಅವರು ತಿಳಿ ಹೇಳಿ ಕೊಟ್ಟಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಂ .ಎಸ್. ಬಸವಣ್ಣ , ಪತ್ರಿಕಾ ಛಾಯಾಗ್ರಾಹಕರಾದ ಎಂ.ಎ. ಶ್ರೀರಾಮ್, ಹಂಪಾ ನಾಗರಾಜ್ ಎಂ. ಎನ್. ಲಕ್ಷ್ಮಿನಾರಾಯಣ ಯಾದವ್, ಎಸ್. ಉದಯಶಂಕರ್, ಟಿವಿ ವರದಿಗಾರರಾದ ರಾಮ್, ಕೆ. ಪಿ. ನಾಗರಾಜ್ , ನವೀನ್, ಕಾರ್ತಿಕ್, ವಾಟಾಳ್ ಆನಂದ್, ಎಂ.ಟಿ.ಯೋಗೇಶ್ ಕುಮಾರ್ ಹಾಗೂ ಇನ್ನಿತರರು ಪಾಲ್ಗೊಂಡು ಮೃತರ ಆತ್ಮಕ್ಕೆ ಶಾಂತಿ ಕೋರಿದರು.
key words : mysore-photo-journalist-nethra.raju