EXCLUSIVE NEWS: ವಿವಾದಿತ ಪೋಸ್ಟ್  : ಸತೀಶ್ @ ಪಾಂಡುರಂಗನನ್ನ ಗಡಿಪಾರು ಮಾಡಲು ಸಿದ್ಧತೆ..!

Controversial post: Satish @Pandurang to be deported, Mysore police issue notice 

ಮೈಸೂರು, ಫೆ.೨೦, ೨೦೨೫: ಸತೀಶ್ ಗೆ ಶಾಕ್ ಮೇಲೆ ಶಾಕ್ ನೀಡುತ್ತಿರುವ ಪೊಲೀಸರು, ಬಂಧನ , ಬಿಡುಗಡೆ ಬಳಿಕ ಗಡಿಪಾರಿಗೆ ಸಿದ್ಧತೆ ಮಾಡಿಕೊಂಡ ಪೊಲೀಸರು.

ಉದಯಗಿರಿ ಗಲಭೆಗೆ ಕಾರಣವಾದ ವಿವಾದಿತ ಪೋಸ್ಟ್ ಹಾಕಿದ್ದ ಆರೋಪ, ಜಸ್ಟ್‌ ಕನ್ನಡಗೆ ಗಡಿಪಾರು‌ ಕುರಿತ ಪ್ರತಿ ಲಭ್ಯ.

ಸತೀಶ@ಪಾಂಡುರಂಗ ಬಿನ್ ಬಿ.ಆರ್.ಸುಬ್ಬೇಗೌಡ ಗೆ ನೋಟಿಸ್ ಜಾರಿ, ಉದಯಗಿರಿ ಠಾಣಾ ಇನ್ಸ್ ಪೆಕ್ಟರ್ ಅವರಿಂದ ನೋಟಿಸ್‌ಜಾರಿ. ಇನ್ಸ್ ಪೆಕ್ಟರ್ ಸುಧಾಕರ್ ಅವರಿಂದ ಕಾರಣ‌ಕೇಳಿ‌ ನೋಟಿಸ್. ಕರ್ನಾಟಕ‌ ಪೊಲೀಸ್ ಆಕ್ಟ್ ಅಧಿನಿಯಮ ಕಲಂ 55ರ ಅಡಿ, ಮೊ.ನಂ.18/2025 ಕಲಂ 299 ಬಿ.ಎನ್.ಎಸ್ ರೀತ್ಯಾ ಪ್ರಕರಣ ದಾಖಲು.

ನಿರ್ದಿಷ್ಟ ಅವಧಿಯವರಗೆ ಗಡಿಪಾರು‌ ಮಾಡಲು ಪೊಲೀಸರ ಚಿಂತನೆ, ಪುನಃ ಗಲಭೆ ಸೃಷ್ಠಿಯಾಗುತ್ತದೆ ಎಂಬ ಕಾರಣ‌ ನೀಡುತ್ತಿರುವ ಪೊಲೀಸರು. ಸತೀಶ್ ಹಾಗು ಅವರ ಕುಟುಂಬದ ಹಿತದೃಷ್ಠಿ. ಸತೀಶ್ ಅವರ ಆಸ್ತಿ- ಪಾಸ್ತಿ ರಕ್ಷಣೆ ಉದ್ದೇಶದಿಂದ‌ ಗಡಿಪಾರು ಮಾಡಲು ಚಿಂತನೆ ಎಂಬ ಉಲ್ಲೇಖ.

ಈ ಕುರಿತು ನೇರವಾಗಿ ಡಿಸಿಪಿ‌ ಭೇಟಿ ಮಾಡುವಂತೆ ಸೂಚನೆ, ಖುದ್ದು ಹಾಜರಾಗಿ ಕಾರಣಕ್ಕೆ ಉತ್ತರ ನೀಡುವಂತೆ ಸೂಚನೆ. ತಪ್ಪಿದ್ದಲ್ಲಿ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವ ವಾರ್ನಿಂಗ್ ನೀಡಿದ ಪೊಲೀಸರು.

ಪೊಲೀಸರು ನೀಡಿರುವ ನೋಟಿಸ್‌ ನ ಪ್ರತಿ “ ಜಸ್ಟ್‌ ಕನ್ನಡ” ಗೆ ಲಭಿಸಿದ್ದು ಅದರ ಸಂಪೂರ್ಣ ವಿವರ ಹೀಗಿದೆ.

ಈ ಮೂಲಕ ನಿಮಗೆ ಕೊಡುವ ಕಾರಣ ಕೇಳುವ ನೋಟೀಸ್ ಏನೆಂದರೆ, ಮೈಸೂರು ನಗರ ಉದಯಗಿರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ರವರಾದ ಶ್ರೀ ಕೆ.ಎನ್.ಸುಧಾಕರ್‌ರವರು ಕರ್ನಾಟಕ ಪೊಲೀಸ್ ಆಕ್ಟ್ ಅಧಿನಿಯಮ ಕಲಂ 55ರಡಿಯಲ್ಲಿ ನಿಮ್ಮನ್ನು ಗಡಿಪಾರು ಮಾಡಲು ಅರ್ಜಿ ಸಲ್ಲಿಸಿದ್ದು, ಸದರಿ ಅರ್ಜಿಯಲ್ಲಿ ನಿಮ್ಮ ಮೇಲಿನ ಆಪಾದನೆಗಳು ಈ ಕೆಳಗಿನಂತಿವೆ.

ದಿನಾಂಕ:10/02/2025 ರಂದು ಠಾಣಾ ಸಿಬ್ಬಂದಿ ಪಿಸಿ-320 ಶ್ರೀ ಸಂತೋಷ್ ಪವಾರ್‌ರವರು ಠಾಣಾ ಸರಹದ್ದು ಗಸ್ತಿನಲ್ಲಿದ್ದಾಗ ಮೋಸಿನ್ ಎಂಬಾತನು ಬಂದು ದಿನಾಂಕ:09/02/2025 ರಂದು ಕಲ್ಯಾಣಗಿರಿಯ ನಿವಾಸಿ ಸತೀಶ್‌  ಎಂಬಾತನು ತನ್ನ ಸ್ಟೇಟಸ್‌ ನಲ್ಲಿ ಮುಸ್ಲಿಂ ಧರ್ಮದ ಬರಹಗಳನ್ನು ರಾಜಕಾರಣಿಗಳ ಮೈಮೇಲೆ ಬರೆದು ಪೋಸ್ಟ್‌ ಮಾಡಿ ಮುಸ್ಲಿಂ ಧರ್ಮದ ಅವಹೇಳನ ಮಾಡಿರುತ್ತಾರೆ ಎಂದು ತಿಳಿಸಿದ್ದು, ಸದರಿಯಾತನ  ಮೊಬೈಲ್‌ ವಾಟ್ಸ್‌ ಅಪ್‌ ಮೂಲಕ ನನಗೆ ಕಳುಹಿಸಿ ಶೇರ್‌ ಮಾಡಲು ಹೇಳಿದರು.

ಠಾಣೆ ಬಳಿ ಗಲಭೆ:

ಸತೀಸ್‌ ಬಂಧನ ನಂತರ ವಾಹನಗಳ ಸಂಚಾರಕ್ಕೆ ಅಡಚಣೆಮಾಡಿ ರಸ್ತೆ ತಡೆ ಕಾನುವಾರು ಸಂತರ ಮೊಲೀಸ್ ಬಂದೋಬಸ್ಸೇಲೆ ಕಲ್ಲು ಕೊರಾಟಮಾಡಿ ಠಾಣೆಯ ಕಿಟಕಿಯ ಗಾಜುಗಳೂ ರಸ್ತೆ ತಡೆ ನಡೆಸಿರುತ್ತಾರೆ. ಹಾಗೂ ಬಂದೋಬಸ್ ಕರ್ತವ್ಯಕ್ಕೆ ಬಂದಿದ್ದ ಅಧಿಕಾರಿಗಳ ಪೊಲೀಸ್ ಗಾಡಿಗಳನ್ನು ಕೂಡ ಜಖಂಗೊಳಿಸಿರುತ್ತಾರೆ. ಹಾಗೂ ಕರ್ತವ್ಯದಲ್ಲಿದ್ದ ಅಧಿಕಾರಿ ಮತ್ತು ಸಿಬ್ಬಂದಿಗಳನ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಗಾಯಗಳಾಗಿವೆ.

ಈ ಸಂಬಂಧ ಮೊ.ನಂ/19/2025 ಕಲಂ, 126(2), 189(2). 159(4). 189(3), 191(1). 191(2)(3). 132. 118(1), 110, 121(1), 324(4)(5) 8/2 190 2.2.2 3 ಪ್ರಿವೆನ್ಸನ್ ಆಫ್ ಡ್ಯಾಮೇಜ್ ಟು ಪಬ್ಲಿಕ್ ಪ್ರಾಪರ್ಟಿ ಆಕ್ಟ್-1984 ರೀತ್ಯಾ ಪ್ರಕರಣ ದಾಖಲಿಸಲಾಗಿರುತ್ತದೆ.

ಗುಪ್ತ ಮಾಹಿತಿ ಸಿಬ್ಬಂದಿ ಹಾಗೂ ಪೊಲೀಸ್ ಬಾತ್ಮಿದಾರರಿಂದ ಮಾಹಿತಿ ಕಲೆ ಹಾಕಲಾಗಿ ಸದರಿ ಆರೋಪಿಗೆ ಘನ ನ್ಯಾಯಾಲಯವು ಜಾಮೀನು ನೀಡುವ ಸಂಭವವಿದ್ದು, ಆರೋಪಿಯು ಜಾಮೀನಿನ ಮೇಲೆ ಬಿಡುಗಡೆಯಾದರೆ ಆತನಿಗೆ ಜೀವಹಾನಿ ಹಾಗೂ ಆತನ ಆಸ್ತಿ-ಆಸ್ತಿಗಳಿಗೆ ನಷ್ಟ ಉಂಟಾಗುವ ಸಂಭವ ಇರುವುದಾಗಿ ತಿಳಿದು ಬಂದಿರುತ್ತದೆ. ಕಿಡಿಗೇಡಿಗಳು ಸದರಿ ವಿಷಯವನ್ನು ಮುಂದಿಟ್ಟುಕೊಂಡು ಮತ್ತೆ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಸುವ್ಯಸ್ಥೆಯನ್ನು ಹದಗೆಡಿಸುವ ಸಾಧ್ಯತೆಗಳಿರುತ್ತದೆ. ಹಾಗೆಯೇ ಠಾಣಾ ಸರಹದ್ದಿನ ವಾತಾವರಣ ಇದುವರೆವಿಗೂ ತಿಳಿಯಾಗದೇ ಇರುವುದರಿಂದ ಯಥಾಸ್ಥಿತಿ ಮರಳುವತನಕ ಮತ್ತು ಸಾರ್ವಜನಿಕ ಹಿತಾದೃಷ್ಟಿಯಿಂದ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸದರಿ ಆರೋಪಿತನು ಜಾಮೀನಿನ ಮೇಲೆ ಬಿಡುಗಡೆಗೊಂಡ ನಂತರ ಮುಂಜಾಗೃತ ಕ್ರಮವಾಗಿ ಆತನನ್ನು ಮೈಸೂರು ನಗರದಿಂದ ಬೇರೆಡೆಗೆ ಗಡಿಪಾರು ಮಾಡಲು ಆದೇಶಿಸಬೇಕಾಗಿ ಕೋರಿರುತ್ತಾರೆ.

ಈ ಮೇಲಿನ ಪ್ರಕರಣಗಳನ್ನು ಪರಿಶೀಲಿಸಲಾಗಿ ನೀವು ಅಪರಾಧಿಕ ಹಿನ್ನಲೆಯುಳ್ಳ ವ್ಯಕ್ತಿತ್ವ ಹೊಂದಿದವರೆಂದು ಕಂಡು ಬರುತ್ತದೆ.

ಈ ಮೇಲ್ಕಾಣಿಸಿದ ಆಪಾದನೆಗಳ ಆಧಾರದ ಮೇಲೆ ನಿಮ್ಮನ್ನು ಮೈಸೂರು ನಗರ ವ್ಯಾಪ್ತಿಯಿಂದ ನಿರ್ಧಿಷ್ಟ ಅವಧಿಗೆ ಗಡಿಪಾರು ಮಾಡಬೇಕೆಂದು ಪೊಲೀಸ್ ನಿರೀಕ್ಷಕರು, ಉದಯಗಿರಿ ಪೊಲೀಸ್ ಠಾಣೆಯ ಠಾಣಾಧಿಕಾರಿಯವರು ಕೋರಿರುತ್ತಾರೆ.

ಕಾರಣ ನಿಮ್ಮ ಮೇಲೆ ಹೇಳಿದ ಆಪಾದನೆಗಳ ಕುರಿತಂತೆ ನಿಮ್ಮನ್ನು ಮೈಸೂರು ನಗರ ವ್ಯಾಪ್ತಿಯಿಂದ ನಿರ್ಧಿಷ್ಟ ಅವಧಿಗೆ ಏಕೆ ಗಡಿಪಾರು ಮಾಡಬಾರದೆಂಬುದಕ್ಕೆ ನಿಮ್ಮ ವಿವರಣೆಗಳೇನಾದರು ಇದ್ದಲ್ಲಿ ನೀವು ದಿನಾಂಕ:-20-02-2025 ರಂದು ಬೆಳಿಗ್ಗೆ 11:00 ಗಂಟೆಗೆ ಈ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಿ ಸಲ್ಲಿಸಬೇಕು. ತಪ್ಪಿದ್ದಲ್ಲಿ ನಿಮ್ಮ ವಿರುದ್ಧ ಏಕಪಕ್ಷೀಯವಾಗಿ ಮುಂದಿನ ಕ್ರಮ ಜರುಗಿಸಲಾಗುವುದು.

key words: Controversial post, Satish @Pandurang, deported, Mysore police issue notice

Controversial post: Satish @Pandurang to be deported, Mysore police issue notice