‘ಬಾಡಿಗೆ ‘ ಗೂಂಡಾ ಗಳಿಂದ ಬೆದರಿಕೆ : ಪೊಲೀಸರ ಮೊರೆ ಹೋದ ಸಾಕ್ಷಿದಾರ…!

 

ಮೈಸೂರು, ಆ.08, 2019 : (www.justkannada.in news) : ಮನೆ ಬಾಡಿಗೆಗೆ ಸಂಬಂಧಿಸಿದ ವ್ಯಾಜ್ಯದಲ್ಲಿ ಕೋರ್ಟ್ ನಲ್ಲಿ ಹೇಳಿಕೆ ನೀಡಿದ್ದನ್ನು ಪ್ರಶ್ನಿಸಿ ಅಪರಿಚಿತ ವ್ಯಕ್ತಿಗಳು ಸಾಕ್ಷಿದಾರರಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಲಾಗಿದೆ.

ವಿಜಯನಗರ 2 ನೇ ಹಂತದ ಹೈ-ಟೆನ್ಷನ್ ಡಬ್ಬಲ್ ರೋಡ್ ನಿವಾಸಿ ಡಿ.ಎಸ್.ಸತೀಶ್ ಎಂಬುವವರೇ ವಿಜಯನಗರ ಠಾಣಾ ಪೊಲೀಸರಿಗೆ ದೂರು ನೀಡಿರುವವರು.
ಆ. 3ರ ಶನಿವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಕೆಲ ಅಪರಿಚಿತ ವ್ಯಕ್ತಿಗಳು ವಿಜಯನಗರದ 2 ನೇ ಹಂತದಲ್ಲಿರುವ ನನ್ನ ನಿವಾಸಕ್ಕೆ ಬಂದು ಬೆದರಿಕೆ ಹಾಕಿದರು. ಶ್ರೀಮತಿ ಪಾರ್ವತಿ ರಾಮಕೃಷ್ಣ ಹಾಗೂ ಮಹಾಂತೇಶ್ ಎಂಬುವವರ ನಡುವೆ ಮನೆ ಬಾಡಿಗೆಗೆ ಸಂಬಂಧಿಸಿದಂತೆ ವ್ಯಾಜ್ಯ ನಡೆಯುತ್ತಿದ್ದು, ನಾನು ಮಹಾಂತೇಶ್ ಪರವಾಗಿ ಸಾಕ್ಷಿ ಹೇಳುವಂತೆ ಹಾಗೂ ಈ ವಿಚಾರದಲ್ಲಿ ಇನ್ನು ಮುಂದೆ ಮಧ್ಯೆ ಪ್ರವೇಶಿಸದಂತೆ ಬೆದರಿಕೆ ಹಾಕಿದರು. ಜತೆಗೆ ಮುಂದೆ ಅವರು ಕರೆದ ಕಡೆಗೆ ನಾನು ಬರಬೇಕು ಎಂದು ತಾಕೀತು ಮಾಡಿದರು. ಆಗ ನಾನು ನನ್ನ ಮೊಬೈಲ್ ತರಲು ಒಳಗಡೆ ಹೋದಾಗ ಅಪರಿಚಿತ ವ್ಯಕ್ತಿಗಳು ಅಲ್ಲಿಂದ ಪರಾರಿಯಾದರು. ಆದ್ದರಿಂದ ಈ ಅಪರಿಚಿತ ವ್ಯಕ್ತಿಗಳಿಂದ ನನಗೆ ಹಾಗೂ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಸತೀಶ್ ಪೊಲೀಸರಿಗೆ ದೂರಿನಲ್ಲಿ ವಿನಂತಿಸಿದ್ದಾರೆ.

key words : mysore-police-crime-news