ಮೈಸೂರು, ನ.14, 2021 : (www.justkannada.in news) : ನಗರದ ವಿವಿಧೆಡೆ ದ್ವಿಚಕ್ರ ವಾಹನ ಕಳ್ಳತನ ನಡೆಸುತ್ತಿದ್ದ ಆರೋಪಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆತನಿಂದ ಒಟ್ಟು 1.35 ಲಕ್ಷ ರೂ. ಮೌಲ್ಯದ ಮೂರು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ನ. 10 ರಂದು ರಾತ್ರಿ ವೇಳೆ, ಕುವೆಂಪುನಗರ 3 ನೇ ಹಂತ ಎಲ್ಐಜಿ 119 ರ ಮನೆಯ ಮುಂಭಾಗ ಬೀಗ ಹಾಕಿ ನಿಲ್ಲಿಸಿದ್ದ ಹೀರೊ ಪ್ಲೆಷರ್ ಸ್ಕೂಟರ್ ಕಳ್ಳತನವಾಗಿತ್ತು. ಈ ಸಂಬಂಧ ಕುವೆಂಪನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಠಾಣಾ ಅಪರಾಧ ವಿಭಾಗದ ಸಿಬ್ಬಂದಿಯವರು ಪ್ರಕರಣದ ಮಾಲು ಮತ್ತು ಆರೋಪಿ ಪತ್ತೆ ಕಾರ್ಯದಲ್ಲಿದ್ದಾಗ ಬಾತ್ಮೀದಾರರ ಮಾಹಿತಿ ಮೇರೆಗೆ, ಉದಯಗಿರಿ ಮಹದೇವಪುರ ಮುಖ್ಯರಸ್ತೆಯಲ್ಲಿ ಸ್ಕೂಟರ್ ಮೇಲೆ ವೀಲಿಂಗ್ ಮಾಡಿಕೊಂಡು ಬರುತ್ತಿದ್ದ ಆರೋಪಿ ಗೌಸ್ ಆಹಮ್ಮದ್ ನನ್ನು ( ಬಿನ್ ಲೇಟ್ ನಾಸಿರ್ ಅಹಮ್ಮದ್ , 19 ವರ್ಷ , ಮನೆ ನಂ 2007 , 5 ನೇ ಕ್ರಾಸ್ , ಅಬುಜಾರ್ ಮಸೀದಿ ಬಳಿ , ರಾಜೀವ್‌ನಗರ 1 ನೇ ಹಂತ , ಮೈಸೂರುನಗರ) ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕಳ್ಳತನಮಾಡಿರುವ ಸ್ಕೂಟರ್ ಎಂದು ತಿಳಿದು ಬಂದು. ಈ ಮೇರೆಗೆ ಆತನನ್ನು ದಸ್ತಗಿರಿಮಾಡಿ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಕುವೆಂಪುನಗರ ಠಾಣೆಯ ಎರಡು ಪ್ರಕರಣಗಳು ಮತ್ತು ಜಯಪುರ ಠಾಣೆಯ ಒಂದು ಪ್ರಕರಣ ಸೇರಿ ಒಟ್ಟು ಮೂರು ಪ್ರಕರಣಗಳು ಪತ್ತೆಯಾದವು.
ಡಿಸಿಪಿ ಗೀತಾ ರವರ ಮಾರ್ಗದರ್ಶನದಲ್ಲಿ, ಕೃಷ್ಣರಾಜ ವಿಭಾಗದ ಸಹಾಯಕ ಪೊಲೀಸ್ ಆಯಕ್ತ ಎಂ ಎಸ್ ಪೂರ್ಣಚಂದ್ರ ತೇಜಸ್ವಿ ರವರ ಉಸ್ತುವಾರಿಯಲ್ಲಿ , ಕುವೆಂಪುನಗರ ಪೊಲೀಸ್ ಠಾಣೆಯ ಪಿ.ಐ ಷಣ್ಮುಗ ವರ್ಮ ಕೆ , ಪಿಎಸ್‌ಐ ಇರ್ಷಾದ್ ಸಿ , CEN ಪಿಎಸ್‌ಐ ಅನಿಲ್ ಕುಮಾರ್ , ಪ್ರೊ ಪಿಎಸ್‌ಐ ಗಂಗಾಧರ್ , ಜ್ಯೋತ್ಸಾ ರಾಜ್ , ಎಎಸ್‌ಐ ಮಹದೇವ ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳಾದ ಮಂಜುನಾಥ , ಯೋಗೇಶ , ಹಜರತ್ , ಪುಟ್ಟಪ್ಪ , ನಾಗೇಶ ರವರು ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.
ಈ ಪತ್ತೆ ಕಾರ್ಯಕ್ಕೆ ಪೊಲೀಸ್ ಆಯುಕ್ತ ಡಾ . ಚಂದ್ರಗುಪ್ತ ಹಾಗೂ ಡಿಸಿಪಿ ಪ್ರದೀಪ್ ಗುಂಟಿ ಅವರು ಪ್ರಶಂಸಿಸಿದ್ದಾರೆ.
key words : mysore-police-scooter-theft-arrested