ಮೈಸೂರು,ಫೆಬ್ರವರಿ,24,2022(www.justkannada.in): ಭಜರಂಗ ದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಹಿಂದೂಗಳ ಹತ್ಯೆ ಹೀಗೆ ಮುಂದುವರಿದರೆ ನಾವು ಬೀದಿ ಬೀದಿಯಲ್ಲಿ ಉತ್ತರ ಕೊಡಬೇಕಾಗುತ್ತದೆ. ಇನ್ಮೇಲೆ ಮಚ್ಚು ಹಿಡ್ಕೊಂಡು ಬಂದರೆ ನಿಮ್ಮ ಕೈ ಕತ್ತರಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಪ್ರಮೋದ್ ಮುತಾಲಿಕ್, ಹತ್ಯೆಯಾದ 24ಗಂಟೆಯೊಳಗೆ ಕೊಲೆಗಡುಕರನ್ನ ಬಂಧಿಸಿದಕ್ಕೆ ಸರ್ಕಾರಕ್ಕೆ ಅಭಿನಂದನೆಗಳು. ನಿರಂತರವಾಗಿ ನಡೆಯುತ್ತಿರುವ ಹಿಂದೂಗಳ ಹತ್ಯೆ ಕೊನೆಯಾಗಬೇಕು. ಮುಂದೆ ಈ ರೀತಿ ಹತ್ಯೆ ಮುಂದುವರಿದರೆ ಸರ್ಕಾರ ಅಥವಾ ಕಾನೂನು ಇಲ್ಲದೆ ಹಿಂದೂ ಸಮಾಜ ಸಿಡಿದು ನಿಲ್ಲಬೇಕಾಗುತ್ತದೆ. ನಾವು ಬೀದಿ ಬೀದಿಯಲ್ಲಿ ಉತ್ತರ ಕೊಡಬೇಕಾಗುತ್ತದೆ. ಬಂಧನವಾಗಿರುವವರು ಕ್ರಿಮಿನಲ್ಸ್ ಇದ್ದಾರೆ. ಅಂತವರನ್ನ ಎನ್ ಕೌಂಟರ್ ಮಾಡಿಯೇ ಉತ್ತರ ಕೊಡಬೇಕು. ಈ ಘಟನೆಯ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯ ರಚನೆ ಮಾಡಿ. ತುರ್ತಾಗಿ ಸಂಬಂಧಪಟ್ಟ ಪ್ರಕ್ರಿಯೆ ನಡೆಯಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ರಾಜ್ಯದಲ್ಲಿ ಗುಪ್ತಚರ ಇಲಾಖೆಯ ನಿರ್ಲಕ್ಷ್ಯವಹಿಸಿದೆ. ಕ್ರಿಮಿನಲ್ಸ್ ಮೇಲೆ ಕಣ್ಣಿಟ್ಟಿಲ್ಲ. ಹರ್ಷನ ಮೇಲೆ ನಾಲ್ಕು ವರ್ಷಗಳಿಂದ ಕಣ್ಣಿಟ್ಟಿದ್ದರೂ ಘಟನೆ ತಡೆಯುವಲ್ಲಿ ವಿಫಲವಾಗಿದೆ. ಈ ವಿಷಯದಲ್ಲಿ ಸರ್ಕಾರವು ಫೇಲ್ ಆಗಿದೆ. ಹಿಂದೂ ಯುವಕನನ್ನು ಪ್ಲಾನ್ ಮಾಡಿ ಹೊಡೆದಿದ್ದಾರೆ. ಇಸ್ಲಾಮಿ ಶಕ್ತಿಗಳು ಬಾಲ ಬಿಚ್ಚಿದರೆ ಇನ್ನು ನಾವು ಸಹನೆಯಿಂದ ಇರಲು ಸಾಧ್ಯವಿಲ್ಲ. ಘಟನೆಯಲ್ಲಿ ಹೊಡೆದಿರುವುದನ್ನ ನೋಡಿದರೆ ಒಂದು ತರಬೇತಿ ಹೊಂದಿರುವ ಗುಂಪು ಷಡ್ಯಂತ್ರ ಇದೆ. ಇದರ ಹಿಂದೆ ಸಂಘಟನೆಯೇ ಇದೆ. ಎಸ್ಡಿಪಿಐ, ಪಿಎಫ್.ಐ, ಸಂಘಟನೆಗಳನ್ನ ಬ್ಯಾನ್ ಮಾಡಲೇಬೇಕು ಎಂದು ಒತ್ತಾಯಿಸಿದರು.
ಇನ್ಮೇಲೆ ಮಚ್ಚು ಹಿಡ್ಕೊಂಡು ಬಂದರೆ ನಿಮ್ಮ ಕೈ ಕತ್ತರಿಸುತ್ತೇವೆ.
ಇನ್ಮೇಲೆ ಮಚ್ಚು ಹಿಡ್ಕೊಂಡು ಬಂದರೆ ನಿಮ್ಮ ಕೈ ಕತ್ತರಿಸುತ್ತೇವೆ ಎಂದು ಎಚ್ಚರಿಕೆ ನೀಡಿದ ಪ್ರಮೋದ್ ಮುತಾಲಿಕ್, ಮಚ್ಚು ಲಾಂಗು ಹಿಡ್ಕೊಂಡು ಹೊಡೆದಾಡುತ್ತೇವೆ ಎಂದರೆ ಇದು ಅಫ್ಘಾನಿಸ್ತಾನವಲ್ಲ. ಈ ದೇಶದ ಅನ್ನ ತಿನ್ನುವ ನೀವು ಸಂವಿಧಾನದ ಅಡಿಯಲ್ಲಿರಬೇಕು. ದೇಶದಲ್ಲಿ ಸಂವಿಧಾನವಿದೆ, ನ್ಯಾಯಾಲಯವಿದೆ. ನಿಮಗೆ ತೊಂದರೆಯಾದರೆ ನ್ಯಾಯಾಲಯಕ್ಕೆ ಹೋಗಿ. ಅದನ್ನ ಬಿಟ್ಟು ಲಾಂಗು ಮಚ್ಚು ಹಿಡ್ಕೊಂಡು ಬಂದರೆ ನಾವು ಸುಮ್ಮನಿರುವುದಿಲ್ಲ. ನಿಮ್ಮ ಕೈ ಕತ್ತರಿಸುತ್ತೇವೆ ಎಂದರು.
Key words: mysore-pramod muthalik-warn