ಮೈಸೂರು,ಸೆ,28,2019(www.justkannada.in): ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ ಹಿನ್ನೆಲೆ ನಾಡಿನ ಜನತೆಗೆ ರಾಜವಂಶಸ್ಥೆ ಪ್ರಮೋದ ದೇವಿ ಒಡೆಯರ್ ಶುಭಕೋರಿದರು.
ಜಂಬೂ ಸರ್ಕಸ್ ಗೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ದೀಪ ಬೆಳಗಿಸುವ ಮೂಲಕ ಚಾಲನೆ ಕೊಟ್ಟರು. ಈ ವೇಳೆ ಮೇಯರ್ ಪುಷ್ಪಲತಾ ಜಗನ್ನಾಥ್ ಉಪಸ್ಥಿತರಿದ್ದರು.
ಇದೇ ವೇಳೆ ನಾಡಿನ ಜನತೆಗೆ ನವರಾತ್ರಿ ಶುಭ ಕೋರಿದ ಪ್ರಮೋದಾದೇವಿ ಒಡೆಯರ್, ಈ ಬಾರಿಯ ನವರಾತ್ರಿ ಹಬ್ಬಕ್ಕೆ ಎಲ್ಲಾ ರೀತಿಯಲ್ಲೂ ನಾವು ಸಿದ್ಧಗೊಂಡಿದ್ದೇವೆ. ಪ್ರತಿವರ್ಷದಂತೆ ಈ ವರ್ಷವೂ ಅರಮನೆಯ ಕಾರ್ಯಕ್ರಮಗಳು ನಡೆಯಲಿವೆ. ಯಾವುದೇ ಬದಲಾವಣೆಗಳಿರುವುದಿಲ್ಲ. ಯಾವುದೇ ಆತಂಕಗಳು ಇಲ್ಲದೆ ರಾಜಮನೆತನದಲ್ಲಿ ಎಂದಿನಂತೆ ಖಾಸಗಿ ದರ್ಬಾರ್ ಮತ್ತು ಅರಮನೆ ಕಾರ್ಯಕ್ರಮಗಳು ನಡೆಯಲಿದೆ. ಎಂದಿನಂತೆ ಸರ್ಕಾರದಿಂದಲೂ ಅದೇ ರೀತಿಯ ಸಹಕಾರ ದೊರೆಯುತ್ತಿದೆ ಎಂದು ತಿಳಿಸಿದರು.
ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಜೊತೆ ಸೆಲ್ಫೀ ತೆಗೆದುಕೊಳ್ಳಲು ಮುಗಿಬಿದ್ದ ಮಕ್ಕಳು..
ಮೈಸೂರಿನಲ್ಲಿ ಜಂಬೋ ಸರ್ಕಸ್ ಉದ್ಘಾಟನೆ ವೇಳೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಜೊತೆ ಸೆಲ್ಫೀ ತೆಗೆದುಕೊಳ್ಳಲು ಮಕ್ಕಳು ಮುಗಿಬಿದ್ದ ಘಟನೆ ನಡೆಯಿತು. ಜಂಬೋ ಸರ್ಕಸ್ ಉದ್ಘಾಟನೆ ಬಂದಿದ್ದ ಪ್ರಮೋದಾದೇವಿ ಒಡೆಯರ್ ಬಳಿಗೆ ಧಾವಿಸಿದ ಮಕ್ಕಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು.
ಈ ಸಮಯದಲ್ಲಿ ಮಕ್ಕಳೊಂದಿಗೆ ನಗುತ್ತಲೇ ಸೆಲ್ಫೀಗೆ ಫೋಸ್ ಕೊಟ್ಟ ಪ್ರಮೋದಾದೇವಿ ಒಡೆಯರ್ ಅವರು ಮಕ್ಕಳ ಜೊತೆಗಿರುವ ಫೋಟೋ ತೆಗೆಯುವಂತೆ ತಮ್ಮ ಖಾಸಗಿ ಸಿಬ್ಬಂದಿಗೂ ಸೂಚಿಸಿದರು. ಈ ನಡುವೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಜತೆ ಮಕ್ಕಳು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
Key words: mysore- Pramoda Devi Wodeyar – Navaratri wishes- people -children – selfie.