ಮೈಸೂರು,ನವೆಂಬರ್,8,2023(www.justkannada.in): ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಅಧ್ಯಕ್ಷ ಎಸ್ ಟಿ ರವಿಕುಮಾರ್ ರವರ ನೇತೃತ್ವದಲ್ಲಿ ದತ್ತಿ ಪ್ರಶಸ್ತಿ ಪ್ರಧಾನ, ಗೌರವ ಡಾಕ್ಟರೇಟ್ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಲಿ ಶಾಸಕ ಎಸ್ ಟಿ ಸೋಮಶೇಖರ್, ಮಾಜಿ ಮೂಡಾ ಅಧ್ಯಕ್ಷರಾದ ಹೆಚ್ ವಿ ರಾಜೀವ್,ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕರಾದ ಐತಿಚಂಡ ರಮೇಶ್ ಉತ್ತಪ್ಪ ಅವರು ಹಾಗೂ ಇತರ ಪತ್ರಕರ್ತರು ಸೇರಿದಂತೆ 60-70 ಜನರು ಹಾಜರಿದ್ದರು.
ಮೈಸೂರು ವಿವಿಯ ಗೌರವ ಡಾಕ್ಟರೇಟ್ ಪದವಿ ಪುರಸ್ಕೃತರಾದ ಮೈಸೂರು ಮಿತ್ರ ಪತ್ರಿಕೆಯ ಸಂಸ್ಥಾಪಕ ಸಂಪಾದಕರಾದ ಡಾ ಕೆ.ಬಿ ಗಣಪತಿ,ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಪತ್ರಿಕಾ ವಿತರಕರಾದ ಜವರಪ್ಪ ರವರಿಗೆ ಅಭಿನಂದಿಸಲಾಯಿತು.
ನಿರಂಜನ್ ನಿಕ್ಕಂ ದತ್ತಿ ಪ್ರಶಸ್ತಿಯನ್ನು ಮೈಸೂರು ಮಿತ್ರ ಪತ್ರಿಕೆಯ ಹಿರಿಯ ವರದಿಗಾರರಾದ ರಾಜಕುಮಾರ್ ಭಾವಸಾರ, ನೇತ್ರರಾಜು ದತ್ತಿ ಪ್ರಶಸ್ತಿಯನ್ನು ಮೈಸೂರು ಮಿತ್ರ ಪತ್ರಿಕೆಯ ಹಿರಿಯ ಛಾಯಾಗ್ರಾಹಕರಾದ ಎಂ ಎನ್ ಲಕ್ಷ್ಮಿ ನಾರಾಯಣ ಯಾದವ್ ರವರಿಗೆ ಪ್ರದಾನ ಮಾಡಲಾಯಿತು. ಶಾಸಕ ಎಸ್ ಟಿ ಸೋಮಶೇಖರ್ ಅವರು ಪ್ರಧಾನ ಮಾಡಿದರು.
ಮೈಸೂರು ಮಿತ್ರ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಡಾ ಕೆ ಬಿ ಗಣಪತಿ ಮಾತನಾಡಿ, ಪತ್ರಕರ್ತರದು ಸವಾಲಿನ ಕೆಲಸ. ಸಮಾಜಮುಖಿಯೂ ಇರಬೇಕು. ಪತ್ರಿಕೆಯ ಮಾಲೀಕನ ಕಡೆ ಗಮನ ಹರಿಸಬೇಕು. ಕಣ್ಣು ನೋಡಿದ್ದೇ ಬೇರೆ, ಕಿವಿ ಕೇಳಿದ್ದೆ ಬೇರೆ ಆದರೆ ಬರೆಯುವುದೇ ಬೇರೆ. ಆದ್ರೆ ವಿನಾಕಾರಣ ಮನಸ್ಸಿಗೆ ನೋವು ಆಗುತ್ತದೆ. ಪತ್ರಿಕಾ ಧರ್ಮ ಎನ್ನುವುದು ಒಂದು ಇದೆ. ಕೆಲವೊಂದು ಸಲ ನೋಡಿದ್ದು ನಿಜವಾದ್ರೂ ಅದನ್ನು ಬರೆದರೆ ಸಮಾಜದಲ್ಲಿ ಗೊಂದಲ ಉಂಟಾಗುವುದಿದ್ದರೆ ಅದನ್ನು ಬರೆಯದೆ ಇರುವುದೇ ಒಳ್ಳೆಯದು ಎಂದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವಿಜಯ ಕರ್ನಾಟಕ ಪತ್ರಿಕೆಯ ಛಾಯಾಗ್ರಾಹಕರಾದ ನಾಗೇಶ್ ಬಾಣತ್ತಲೆ, ವಿಜಯವಾಣಿಯ ಉಪಸಂಪಾದಕರಾದ ದೊಡ್ಡನ ಹುಂಡಿ ರಾಜಣ್ಣ, ಇಂಡಿಯನ್ ಎಕ್ಸ್ ಪ್ರೆಸ್ ಛಾಯಾಗ್ರಾಹಕರಾದ ಉದಯ್ ಶಂಕರ್, ಹಿರಿಯ ಛಾಯಾಗ್ರಾಹಕರಾದ ಸುತ್ತೂರು ನಂಜುಂಡ ನಾಯಕ, ಇಂಡಿಯನ್ ಟಿವಿಯ ವರದಿಗಾರರಾದ ಮಹೇಶ್ ಕೆಬ್ಬೇಪುರ ರವರಿಗೆ ಅಭಿನಂದಿಸಲಾಯಿತು.
ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪುರಸ್ಕೃತರಾದ ಆಂದೋಲನ ಪತ್ರಿಕೆಯ ಹಿರಿಯ ವರದಿಗಾರರಾದ ಕೆ.ಬಿ ರಮೇಶ್ ನಾಯಕ್, ಪತ್ರಕರ್ತರು ಹಾಗೂ ಹಿರಿಯ ಹೋರಾಟಗಾರರಾದ ಮೂಗುರು ನಂಜಂಡಸ್ವಾಮಿ ಅವರಿಗೆ ಅಭಿನಂದಿಸಲಾಯಿತು.
Key words: mysore-press club- Congratulations – journalists –awarded- honorary doctorates – Rajyotsava awards.