ಮೈಸೂರು, ಮೇ 11, 2022 : (www.justkannada.in news ) ವಸ್ತು ವಿಜ್ಞಾನ (ಮೆಟೀರಿಯಲ್ ಸೈನ್ಸ್) ಪ್ರಸ್ತುತ ಸಂಶೋಧನಾ ಕ್ಷೇತ್ರದಲ್ಲಿ ಅತಿ ಹೆಚ್ಚು ಅಧ್ಯಯನದ ವ್ಯಾಪ್ತಿ ಮತ್ತು ಸ್ವರೂಪ ಪಡೆದುಕೊಂಡಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಹೇಳಿದರು.
ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಕೆಎಸ್ ಟಿಎ ಮತ್ತು ಸ್ನಾತಕ , ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗಗಳಿಂದ ಆಯೋಜಿಸಿದ್ದ ಎರಡು ದಿನದ ವಸ್ತು ವಿಜ್ಞಾನ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಪ್ರೊ.ರಂಗಪ್ಪ ಅವರು ಹೇಳಿದಿಷ್ಟು..
‘‘ಪದಾರ್ಥ ಜ್ಞಾನ ಮತ್ತು ತಂತ್ರಜ್ಞಾನ ಇಂದಿನ ಆಧುನಿಕ ಜೀವನ ಶೈಲಿಯನ್ನು ಪ್ರಭಾವಿಸಿ ರೂಪಿಸುತ್ತಾ ಬಂದಿದೆ. ಹಾಗಾಗಿ ಈ ಅಧ್ಯಯನವು ಇಂದಿನ ಸಮಾಜಕ್ಕೆ ನೀಡುತ್ತಿರುವ ಕೊಡುಗೆಗಳ ಸ್ವರೂಪವನ್ನು ಊಹಿಸಿಕೊಳ್ಳುವುದು ಅಸಾಧ್ಯ. ಆ ಕಾರಣಕ್ಕೆ ವಸ್ತು ವಿಜ್ಞಾನ ಅಧ್ಯಯನವು ಸಂಶೋಧನೆಯ ಪ್ರಮುಖ ಭಾಗವಾಗಿದೆ. ಇದನ್ನು ವಿದ್ಯಾರ್ಥಿಗಳು ಗ್ರಹಿಸಬೇಕು.
‘‘ಸಮಾಜಕ್ಕೆ ಉಪಯೋಗವಾಗುವ ಮೂಲ ಸಂಶೋಧನೆಯ ಒಟ್ಟಾರೆ ಅಭಿವೃದ್ಧಿಯಲ್ಲಿ ಲೋಹಗಳು, ಸೆರಾಮಿಕ್ಸ್ ಮತ್ತು ಪಾಲಿಮರ್ ಗಳ ಪಾತ್ರ ದೊಡ್ಡದು. ಸಿರಾಮಿಕ್ ಉತ್ಪನ್ನಗಳು ಮತ್ತು ಪಾಲಿಮರ್ ಗಳಿಂದ ಮಾಡಿದ ಸಿಲಿಕೋನ್ ಸ್ತನ ಇಂಪ್ಲಾಂಟ್ ಗಳನ್ನು ತಯಾರಿಸುವಲ್ಲಿ ಮೆಟೀರಿಯಲ್ ಸೈನ್ಸ್ ಪ್ರಮುಖ ಪಾತ್ರವಹಿಸುತ್ತಿದೆ,
ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ಸಾಂಬಶಿವಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಂ.ಪಿ.ವಿಜಯೇಂದ್ರ ಕುಮಾರ್, ಸಿಬ್ಬಂದಿ ಡಾ.ಎನ್.ವಿಜೇಂದ್ರ ಕುಮಾರ್, ಡಾ.ಎಂ.ಮಹದೇವಸ್ವಾಮಿ, ಸಂಚಾಲಕರಾದ ಡಾ.ಮಲ್ಲೇಶ. ಎಲ್ ಮತ್ತು ಐಕ್ಯೂಎಸಿ ಸಂಯೋಜಕ ಡಾ.ಎನ್.ರಾಜೇಂದ್ರಪ್ರಸಾದ್ ಹಾಜರಿದ್ದರು.
key words : mysore-prof.rangappa-jss-material-science