ಮೈಸೂರು,ಅ,25,2019(www.justkannada.in0: ನಂಜನಗೂಡು ತಾಲ್ಲೂಕಿನಲ್ಲಿ ನಡೆದ ವಾಲ್ಮೀಕಿ ಜಯಂತಿ ಮೆರವಣಿಗೆ ವೇಳೆ ಕ್ಷುಲಕ ಕಾರಣಕ್ಕೆ ಸಮುದಾಯದ ಯುವಕರ ಮೇಲಿನ ಲಾಠಿಚಾರ್ಜ್ ನಡೆಸಿದ್ದನ್ನ ಖಂಡಿಸಿ ಹಾಗೂ ಅಮಾಯಕರ ಮೇಲೆ ಕೇಸ್ ದಾಖಲಿಸಿರುವುದನ್ನು ಹಿಂಪಡೆಯುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ನಾಯಕರ ಯುವಸೇನೆ ಪ್ರತಿಭಟನೆ ನಡೆಸಿತು.
ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕರ್ನಾಟಕ ರಾಜ್ಯ ನಾಯಕರ ಯುವಸೇನೆ ಪ್ರತಿಭಟನೆ ನಡೆಸಿ, ಸಮುದಾಯದ ಅಮಾಯಕ ಯುವಕರ ಮೇಲೆ ನಡೆದಿರುವ ಲಾಠಿ ಚಾರ್ಜ್ ಖಂಡನೀಯ. ಯುವಕರ ಮೇಲೆ ಕೇಸ್ ದಾಖಲಿಸಿರುವ ತಾಲ್ಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ದೌರ್ಜನ್ಯದ ನಡೆಯಾಗಿದೆ. ವಾಲ್ಮೀಕಿ ಜಯಂತಿ ಯಲ್ಲಿ ಇಂತಹದೊಂದು ದುರ್ಘಟನೆ ನಡೆದಿರುವುದು ದುರದೃಷ್ಟಕರ. ತಾಲೂಕು ಆಡಳಿತದ ವೈಪಲ್ಯ ಹಾಗೂ ಪೊಲೀಸರ ವೈಪಲ್ಯದ ಜತೆಗೆ ಪಟ್ಟಭದ್ರ ಹಿತಾಸಕ್ತಿಗಳ ಕುಮ್ಮಕ್ಕಿನಿಂದ ಈ ಘಟನೆ ನಡೆದಿದೆ ಎಂದು ಆರೋಪಿಸಿದರು.
ಅಲ್ಲದೆ ಕೂಡಲೇ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಯುವಕರ ಮೇಲೆ ದಾಖಲಾಗಿರುವ ಹಿಂಪಡೆಯಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ಮಾಡುವುದಾಗಿ ಪ್ರತಿಭಟನಾಕಾರಾರು ಎಚ್ಚರಿಕೆ ನೀಡಿದರು.
Key words: mysore- Protest -demanding -withdrawal –case-valmiki jayanthi-lathicharge