ಮೈಸೂರು,ಮಾರ್ಚ್,23,2021(www.justkannada.in): ನಿನ್ನೆ ಸಂಚಾರಿ ಪೊಲೀಸರ ತಪಾಸಣೆ ವೇಳೆ ದ್ವಿಚಕ್ರವಾಹನ ಸವಾರ ಅಯತಪ್ಪಿ ಬಿದ್ದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಸಂಚಾರಿ ಪೊಲೀಸರ ವರ್ತನೆ ಖಂಡಿಸಿ ಜೆಡಿಎಸ್ ಮುಖಂಡರು ಹಾಗೂ ನಾಗರೀಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಬೈಕ್ ಸವಾರ ಸಾವಿನಿಂದ ಅಕ್ರೋಶಗೊಂಡು ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಮಂದಿಯನ್ನ ಬಂಧಿಸಲಾಗಿದೆ. ಮಂಜು, ಸ್ವಾಮಿನಾಯ್ಕ, ಮಾದೇಗೌಡ ಎಂಬ ಮೂವರು ಪೊಲೀಸರಿಂದ ಪ್ರತ್ಯೇಕ ದೂರು ಪಡೆದು ವಿಜಯನಗರ ಪೊಲೀಸರು ಎಂಟು ಮಂದಿಯನ್ನ ಬಂಧಿಸಿದ್ದಾರೆ. ಈ ಕುರಿತು ಸರ್ಕಾರಿ ವಾಹನ ದ್ವಂಸ, ಕರ್ತವ್ಯ ಅಡ್ಡಿ ಆರೋಪದಡಿ ಕೇಸ್ ದಾಖಲಾಗಿದೆ.
ನಿನ್ನೆ ಟ್ರಾಫಿಕ್ ಪೊಲೀಸರ ವರ್ತನೆಯ ವಿರುದ್ದ ಆಕ್ರೋಶ ಭುಗಿಲೆದ್ದಿದ್ದು ಮೈಸೂರು ಹಿನಕಲ್ ಜಂಕ್ಷನ್ ಬಳಿ ಮೈಸೂರು ಮಹಾನಗರ ಪಾಲಿಕೆ ಸದಸ್ಯ ಕೆ.ವಿ.ಶ್ರೀಧರ್, ಜೆಡಿಎಸ್ ಮುಖಂಡ ಕೆ.ವಿ.ಮಲ್ಲೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ENGLISH SUMMARY….
Citizens protest against traffic police behavior in Mysuru: Eight people held in attack on police
Mysuru, Mar. 23,2021 (www.justkannada.in): In an incident that occurred in Mysuru yesterday a two-wheeler rider slipped from his vehicle and lost his life when a traffic policeman allegedly try to stop him for verification. A protest was held against the behavior of the traffic police, under the leadership of local JDS leaders.
Enraged over the death of the bike rider the citizens of the area attacked the traffic police personnel causing tension in the area for some time. The Vijayanagar police have held eight persons in this case and three persons namely Manju, Swamynayaka and Madegowda were held following a separate complaint by three police personnel. Cases have been registered against them for damaging the government vehicle and disrupting the police personnel who were on duty.
The incident occurred near Hinkal Junction in Mysuru. The protest was held under the leadership of Corporator K.V. Sridhar and JDS leader K.V. Mallesh. The protestors shouted slogans against the State Government and the Police Department.
Keywords: Hinkal/ Mysuru/ protest against traffic police/ traffic police behavior/ traffic police attacked/ bike accident/ bike reader dead
Key words: Mysore -protests -against -traffic police-8 arrested -assaulting -police