ಕೋಟ್ಯಾಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಬೃಹತ್ ವಸತಿ ಸಮುಚ್ಛಯ ಹಂಚಿಕೆಯಾಗದೆ ಪಾಳು ..!

 

ಮೈಸೂರು, ಮೇ 14, 2020 : (www.justkannada.in news ) : ಸರಕಾರ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿರುವ ಬೃಹತ್ ವಸತಿ ಸಮುಚ್ಛಯವೊಂದನ್ನು ಇನ್ನು ಬಳಕೆಗೆ ನೀಡದ ಕಾರಣ ಈಗ ಅದು ಸಂಪೂರ್ಣ ನಿರುಪಯುಕ್ತವಾಗಿ ಪಾಳು ಬಿದ್ಧಿದೆ.

ನಗರದ ನ್ಯಾಯಾಲಯದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ವಾಸಕ್ಕಾಗಿ ಈ ವಸತಿ ಸಮುಚ್ಛಯ ನಿರ್ಮಿಸಲಾಗಿದೆ. ಮೈಸೂರಿನ ಆರ್.ಟಿ.ನಗರ ಬಡಾವಣೆಯ ವ್ಯಾಪ್ತಿಯಲ್ಲಿನ ರಿಂಗ್ ರಸ್ತೆಗೆ ಹೊಂದಿಕೊಂಡಂತೆ ಇರುವ ಸಿದ್ಧರಾಮಯ್ಯ ಬಡಾವಣೆ ಬಳಿ ಈ ಬೃಹತ್ ಕಟ್ಟಡ ತಲೆ ಎತ್ತಿ ವರ್ಷಗಳೇ ಕಳೆದಿದೆ.

mysore-pwd-group-hiuses-for-court-employees-not-distributed-s.t.somashekar

ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ, ಡಾ.ಎಚ್.ಸಿ.ಮಹಾದೇವಪ್ಪ ಲೋಕೋಪಯೋಗಿ ಸಚಿವರಾಗಿದ್ದಾಗ, 2016 ರಲ್ಲಿ ಈ ಯೋಜನೆ ಪ್ರಾರಂಭಗೊಂಡಿತು. ನಾಲ್ಕು ಮಹಡಿಯ ಈ ಬೃಹತ್ ಕಟ್ಟಡ ನಿರ್ಮಾಣ ಅತ್ಯಂತ ತ್ವರಿತಗತಿಯಲ್ಲೇ ನಡೆದು 2018 ಕ್ಕೆ ಪೂರ್ಣಗೊಂಡಿತು.

ಅಂದಾಜು ಒಟ್ಟು 115 ಮನೆಗಳನ್ನ ಈ ವಸತಿ ಸಮುಚ್ಛಯ ಹೊಂದಿದೆ. ಪ್ರತಿ ಮನೆಗೂ ಡಬಲ್ ಬೆಡ್ ರೂಮ್, ಸೀಲಿಂಗ್ ಫ್ಯಾನ್, ನೀರಿನ ನಲ್ಲಿ ಮುಂತಾದ ಆವಶ್ಯಕ ಉಪಕರಣಗಳನ್ನು ಅಳವಡಿಸಲಾಗಿದೆ. ಆ ಮೂಲಕ ಇದು ನೇರ ವಾಸಕ್ಕೆ ಯೋಗ್ಯವಾಗಿದೆ.
ಇಷ್ಟಾದರೂ ಇನ್ನು ಈ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ಯಾಕೆ ಹಂಚಿಕೆ ಮಾಡಿಲ್ಲ ಎಂಬುದು ಯಕ್ಷ ಪ್ರಶ್ನೆಯಾಗಿದೆ.

 

ಸಚಿವರು ಗಮನ ಹರಿಸಲಿ :

 mysore-pwd-group-hiuses-for-court-employees-not-distributed-s.t.somashekar

ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಬಹು ಉತ್ಸುಕರಾಗಿ ಕಾರ್ಯನಿರ್ವಹಿಸುತ್ತಿರುವ ಸಚಿವ ಎಸ್.ಟಿ.ಸೋಮಶೇಖರ್ ಅವರು ಈ ಬಗ್ಗೆ ಕೂಡಲೇ ಗಮನ ಹರಿಸಬೇಕಾಗಿದೆ. ಸಂಪೂರ್ಣಗೊಂಡಿರುವ ವಸತಿ ಸಮುಚ್ಛಯದ ಈ ಕಟ್ಟಡವನ್ನು ಇನ್ನು ಯಾಕೆ ಉದ್ಘಾಟಿಸಿಲ್ಲ.? ಫಲಾನುಭವಿಗಳಿಗೆ ಯಾಕೆ ವಿತರಿಸಿಲ್ಲ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಶೀಘ್ರ ಇದರ ಬಳಕೆಗೆ ಅವಕಾಶ ಕಲ್ಪಿಸಬೇಕು ಎಂಬುದು ಆಶಯ.

key words : mysore-pwd-group-hiuses-for-court-employees-not-distributed-s.t.somashekar