ಮೈಸೂರು,ಮಾ,14,2020(www.justkannada.in): ನವೀಕರಣ ಕಾರ್ಯಕ್ಕಾಗಿ ಮುಚ್ಚಲ್ಪಟ್ಟಿದ್ದ ಮೈಸೂರು ರೈಲ್ವೇ ಮ್ಯೂಸಿಯಂ ಅನ್ನ ಪುನರಾರಂಭ ಮಾಡಲಾಗಿದೆ.
ನಗರದ ಕೆ ಆರ್ ಎಸ್ ರಸ್ತೆಯ ಸಿಎಫ್ ಟಿ ಆರ್ ಐ ಮುಖ್ಯದ್ವಾರದ ಮುಂಭಾಗವಿರುವ ಭಾರತೀಯ ರೈಲ್ವೇ ಇತಿಹಾಸವನ್ನು ಸಾರುವ ರೈಲ್ವೆ ಮ್ಯೂಸಿಯಂ ಅನ್ನ ಪುನಾರಂಭಿಸಲಾಗಿದೆ. ನೈರುತ್ಯ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ನವೀಕೃತ ರೈಲ್ವೇ ಮ್ಯೂಸಿಯಂ ಉದ್ಘಾಟಿಸಿದರು.
ರೈಲ್ವೆ ಮ್ಯೂಸಿಯಂ ನವೀಕರಣ ಹಿನ್ನೆಲೆ ಮಾರ್ಚ್ 2019 ರಿಂದ ಮುಚ್ಚಲಾಗಿತ್ತು. ಇದೀಗ ಪ್ರವಾಸೋದ್ಯಮ ಉತ್ತೇಜಿಸಲು ರೈಲ್ವೆ ಇಲಾಖೆ ಮ್ಯೂಸಿಯಂ ಅನ್ನ ಇನ್ನಷ್ಟು ಸುಂದರಗೊಳಿಸಿದ್ದು, ರೈಲ್ವೆ ಇಲಾಖೆಯ ಪಯಣ ಹಾದಿ ಮ್ಯೂಸಿಯಂನಲ್ಲಿ ಅನಾವರಣ ಮಾಡಲಾಗಿದೆ. ವಯಸ್ಕರಿಗೆ 50 ರೂ ಮಕ್ಕಳಿಗೆ 20 ರೂ ಶುಲ್ಕ ನಿಗದಿ ಮಾಡಲಾಗಿದೆ.
Key words:Mysore -Railway Museum- Start -again