ಸಮಾಜದ ಉನ್ನತಿಗೆ ವಿವೇಕಾನಂದರ ಕೊಡುಗೆ ಅಪಾರ: ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು, ಜ.04, 2022 : (www.justkannada.in news ) ಸ್ವಾಮಿ ವಿವೇಕಾನಂದರು ಆತ್ಮದ ದೈವತ್ವ, ಧರ್ಮಗಳ ನಡುವೆ ಸಾಮರಸ್ಯ, ಭ್ರಾತೃತ್ಚ- ಏಕತೆ, ಕಾಯಕ, ನಾಯಕತ್ವದ ಬಗ್ಗೆ ಬೋಧಿಸಿದರು. ಆ ಮೂಲಕ ಸಮಾಜದ ಉನ್ನತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.
ನಗರದ ಯಾದವಗಿರಿಯ ರಾಮಕೃಷ್ಣ ಆಶ್ರಮದಲ್ಲಿ ಯೂತ್ ಫಾರ್ ಸೇವಾ ಮತ್ತು ಜಿಎಸ್ ಎಸ್ ಯೋಗ ಸಹಯೋಗದಲ್ಲಿ ಮಂಗಳವಾರ ನಡೆದ ವಿವೇಕ ಉತ್ಸವದಲ್ಲಿ ಅವರು ಹೇಳಿದಿಷ್ಟು.
ಸ್ವಾಮಿ ವಿವೇಕಾನಂದರು ಶ್ರೀರಾಮಕೃಷ್ಣ ಅವರ ಭಕ್ತರಾಗಿದ್ದರು. ಆಗಾಗ್ಗೆ ತಮ್ಮ ಗುರುಗಳನ್ನು ಅನೇಕ ಸಂದೇಹಗಳೊಂದಿಗೆ ಸಂಪರ್ಕಿಸುತ್ತಿದ್ದರು. ಇವರ ಎಲ್ಲಾ ಅನುಮಾನಗಳನ್ನು ರಾಮಕೃಷ್ಣರು ಪರಿಹರಿಸುತ್ತಿದ್ದರು. ವಿವೇಕಾನಂದರು ಸಮಕಾಲೀನ ಭಾರತದ ವಿದ್ವಾಂಸರು, ಸಂತರು, ಚಿಂತಕರು, ತತ್ವಜ್ಞಾನಿ ಮತ್ತು ಬರಹಗಾರರಾಗಿದ್ದರು. ಸ್ವಾಮಿ ವಿವೇಕಾನಂದರು ಅಮೆರಿಕಕ್ಕೆ ಭೇಟಿ ನೀಡಿದ ಮೊದಲ ಭಾರತೀಯ. 1893 ರಲ್ಲಿ ಚಿಕಾಗೋ ಸಂಸತ್ತನ್ನು ಉದ್ದೇಶಿ ಸ್ಪೂರ್ತಿದಾಯಕ ಭಾಷಣ ಮಾಡಿದ್ದರು ಎಂದರು.
ಸ್ವಾಮಿ ವಿವೇಕಾನಂದರಿಂದ 1ನೇ ಮೇ 1987 ರಂದು ತಮ್ಮ ಗುರುಗಳ ಹೆಸರಿನ ರಾಮಕೃಷ್ಣ ಮಿಷನ್ ಅನ್ನು ಸ್ಥಾಪಿಸಿದರು. ಇದು ಇಲ್ಲಿಯವರೆಗೆ ಅತ್ಯಂತ ಮಹೋನ್ನತ ಧಾರ್ಮಿಕ ಸಂಸ್ಥೆ ಎಂದು ಪರಿಗಣಿಸಲಾಗಿದೆ. ಈ ಸಂಸ್ಥೆಯ ಏಕೈಕ ಧ್ಯೇಯವೆಂದರೆ ಬಡವರಿಗೆ ಮತ್ತು ಅಗತ್ಯವಿರುವವರಿಗೆ ಸ್ವಯಂಪ್ರೇರಿತ ಕೆಲಸವನ್ನು ಒದಗಿಸುವುದು ಎಂದು ಹೇಳಿದರು.
ಸ್ವಾಮಿ ವಿವೇಕಾನಂದರು ನಾಲ್ಕು ಶ್ರೇಷ್ಠ ಕೃತಿಗಳನ್ನು ಬರೆದಿದ್ದಾರೆ. ಕರ್ಮ ಯೋಗ, ಜ್ಞಾನ ಯೋಗ, ರಾಜ. ಯೋಗ ಮತ್ತು ಭಕ್ತಿ ಯೋಗ.‌ ಇವುಗಳು ಹಿಂದೂ ತತ್ವಶಾಸ್ತ್ರವನ್ನು ವಿವರಿಸುವ ಅತ್ಯುತ್ತಮ ಗ್ರಂಥಗಳೆಂದು ಪರಿಗಣಿಸಲಾಗಿದೆ. ಸ್ವಾಮಿ ವಿವೇಕಾನಂದರ ಭಾಷಣ ಸದಾ ಸೂಜಿಗಲ್ಲಿನಂತೆ ಸೆಖೆಯುತ್ತಿತ್ತು. ಆ ಮೂಲಕ ಯುವಕರಲ್ಲಿ ರಾಷ್ಟ್ರೀಯ ಪ್ರಜ್ಞೆಯ ಬಗ್ಗೆ ಬೋಧಿಸಿದರು ಎಂದರು.
ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಮುಕ್ತಿದಾನಂದಾಜೀ ಮಹಾರಾಜ್, ಸ್ವಾಮಿ ಶಿವಕಾಂತನಂದಾಜೀ ಮಹಾರಾಜ್, ಜಿಎಸ್ ಎಸ್ ಸಂಸ್ಥೆ ಸಂಸ್ಥಾಪಕ ಶ್ರೀಹರಿ, ಲಕ್ಷ್ಮೀನಾರಾಯಣ ಶೆಣೈ ಸೇರಿದಂತೆ ಇತರರು ಹಾಜರಿದ್ದರು.

key words : mysore-ramakrishna-ashrama-swamy-vevekananda-birth-celebration

ENGLISH SUMMARY….

Contribution of Swami Vivekananda for the upliftiment of the society is immense: Prof. G. Hemanthkumar
Mysuru, January 04, 2022 (www.justkannada.in): “Swami Vivekananda preached the divinity of the soul, religious harmony, universal brotherhood, integrity, devotion towards work, and importance of leadership qualities. He devoted his entire life for the upliftment of the society through his preaching,” opined Prof. G. Hemanthkumar, Vice-Chancellor, University of Mysore.
He participated in the ‘Viveka Utsava’ organized by the Youth for Seva, in association with the GSS Yoga, held at the Ramakrishna Ashrama in Yadavagiri, Mysuru. In his address, he opined that Swami Vivekananda was a disciple of Sri Ramakrishna Paramahamsa. “He used to contact his guru to get solutions to his several doubts. Ramakrishna Paramahamsa used to answer all his doubts. Vivekananda was a scholar, saint, thinker, philosopher, and writer in contemporary India. Swami Vivekananda was the first saint to visit America. His speech at Chicago in 1893 is remembered even today,” he opined.
Sri Muktidanandaji Maharaj, President, Ramakrishna Ashrama, Swami Shivakantanandaji Maharaj, Srihari, Founder, GSS, Institution, Lakshminarayana Shenoy, and others were present.
Keywords: Swami Vivekananda/ Viveka Utsava/ Ramakrishna Ashrama/ Prof. G. Hemanthkumar