ಮೈಸೂರು,ಜೂ,20,2019(www.justkannada.in): ನಿನ್ನೆ ಕೊಡಗು ಹಾಗೂ ಚಾಮರಾಜ ನಗರ ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದ ಕಂದಾಯ ಸಚಿವ ಆರ್.ವಿ ದೇಶಪಾಂಡೆ ಇಂದು ಮೈಸೂರು ಜಿಲ್ಎಲಯಲ್ಲಿ ಜಿಲ್ಲಾ ಪ್ರವಾಸ ನಡೆಸುತ್ತಿದ್ದಾರೆ.
ಜಿಲ್ಲೆಯಲ್ಲಿನ ಪ್ರಕೃತಿ ವಿಕೋಪದಿಂದಾಗಿ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ಕೈಗೊಂಡ ಪರಿಹಾರ ಕ್ರಮಗಳನ್ನ ಸಚಿವ ಆರ್.ವಿ ದೇಶಪಾಂಡೆ ವೀಕ್ಷಿಸಲಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲೆಯ ಪ್ರಕೃತಿ ವಿಕೋಪ ಪರಿಹಾರ ಕ್ರಮ ಹಾಗೂ ಕಂದಾಯ ಇಲಾಖಾ ವಿಷಯಗಳ ಕುರಿತಂತೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ನಂತರ ಮಧ್ಯಾಹ್ನ 1 ಗಂಟೆಗೆ ಮೈಸೂರಿನಿಂದ ಸಚಿವ ಆರ್.ವಿ ದೇಶಪಾಂಡೆ ನಿರ್ಗಮಿಸಲಿದ್ದಾರೆ.
ತಾವರೆಕೆರೆ ಕಟ್ಟೆ ಗ್ರಾಮಕ್ಕೆ ಭೇಟಿ: ಗ್ರಾಮದ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸಚಿವ ದೇಶಪಾಂಡೆ ಸೂಚನೆ…
ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿರುವ ಸಚಿವ ಆರ್ .ವಿ ದೇಶಪಾಂಡೆ, ತಾವರೇಕೆರೆ ಕಟ್ಟೆ ಗ್ರಾಮಕ್ಕೆ ಸಾರ್ವಜನಿಕರ ಸಮಸ್ಯೆಯ ಬಗ್ಗೆ ಅಹವಾಲು ಸ್ವಿಕರಿಸಿದರು. ನೀರಿನ ಸಮಸ್ಯೆ ಪರಿಹರಿಸುವಂತೆ ಸಚಿವ ಆರ್. ವಿ ದೇಶಪಾಂಡೆ ಬಳಿ ಗ್ರಾಮಸ್ಥರು ಮನವಿ ಮಾಡಿದರು. ನೀರಿನ ಸಮಸ್ಯೆ ಹಾಗೂ ಕಂದಾಯ ಖಾತೆ ಬಗ್ಗೆ ಅಧಿಕಾರಿಗಳ ಬಳಿ ಮಾತಾನಾಡಿ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಕೂಡಲೆ ಗ್ರಾಮದ ಸಮಸ್ಯೆಯನ್ನು ಬಗ್ಗೆ ಹರಿಸಲು ಅಧಿಕಾರಿಗಳಿಗೆ ಕಂದಾಯ ಸಚಿವ ಆರ್. ವಿ ದೇಶಪಾಂಡೆ ಸೂಚಿಸಿದರು.
Key words: Mysore- Revenue Minister -RV Deshpande – instructed – solve – village problem.