ಮೈಸೂರು,ಜನವರಿ,31,2021(www.justkannada.in) : ರಾಷ್ಟೀಯ ಹೆದ್ದಾರಿಯೂ ಆಗಿರುವ 43.5 ಕಿ.ಮೀ. ವ್ಯಾಪ್ತಿಯ ಮೈಸೂರು ರಿಂಗ್ ರಸ್ತೆಯಲ್ಲಿ ಕೈಗೊಂಡಿರುವ ಸ್ವಚ್ಛತಾ ಕಾರ್ಯವನ್ನು ಸಂಸದ ಪ್ರತಾಪ್ ಸಿಂಹ ಮತ್ತು ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಪರಿಶೀಲನೆ ನಡೆಸಿದರು.
ಸ್ವಚ್ಛತೆ ಉದ್ದೇಶದಿಂದ ಪ್ರತಿ ಎರಡು ಕಿ.ಮೀ. ಅನ್ನು ಒಂದೊಂದು ಇಲಾಖೆಗೆ ವಹಿಸಲಾಗಿದೆ. ತದನಂತರ 161 ಕೋಟಿ ರೂ. ಕೇಂದ್ರ ಸರ್ಕಾರದ ಅನುದಾನದಲ್ಲಿ ಡಾಂಬರೀಕರಣ ಆರಂಭಿಸಲಾಗುವುದು.
ಕೆ ಆರ್ ಎಸ್ ಜಂಕ್ಷನ್ ನಿಂದ ನರಸೀಪುರ ರಸ್ತೆವರೆಗಿನವರು ಸಾತಗಳ್ಳಿ ವಿಟಿಯು ಬಳಿಯ 19 ಎಕರೆ ಜಾಗದಲ್ಲಿ ಹಾಗೂ ವಿಜಯನಗರ, ಭೋಗಾದಿ, ದಟ್ಟಗಳ್ಳಿಯಿಂದ ನಂಜನಗೂಡು ರಸ್ತೆವರೆಗಿನವರೆಗೆ ವಿದ್ಯಾರಣ್ಯಪುರದ ಸೀವೇಜ್ ಫಾರ್ಮ್ ನಲ್ಲೇ ತಾತ್ಕಾಲಿಕವಾಗಿ ಡೆಬ್ರಿಗಳನ್ನು ಹಾಕಬೇಕು ಎಂದು ಸಂಸದ ಪ್ರತಾಪ್ ಸಿಂಹ ಸೂಚಿಸಿದರು.
key words : Mysore Ring-road-Cleaning-Function-Pratap shinma-Gurudath Hegde-Inspection