ಮೈಸೂರು, ಜು,16,2024: (www.justkannada.in news) ಎರಡು ತಿಂಗಳ ಹಿಂದೆ ನಡೆದಿದ್ದ ರಸ್ತೆ ಅಪಘಾತ ಪ್ರಕರಣವನ್ನು ಪೊಲೀಸರುʼ ಹತ್ಯೆ ʼ ಎಂದು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಈ ಬಗ್ಗೆ ಖುದ್ದು ಟ್ವೀಟ್ ಮಾಡಿರುವ ಎಡಿಜಿಪಿ ಅಲೋಕ್ ಕುಮಾರ್, ಹುಂಡೈ ಕಾರು ಡಿಕ್ಕಿ ಹೊಡೆದ ಕಾರಣ ಉಲ್ಲಾಸ್ ಮತ್ತು ಶಿವಾನಿ ಎಂಬಿಬ್ಬರು ಏ. ೧೪ ರಂದು ಮೃತಪಟ್ಟಿದ್ದರು. ಇತ್ತೀಚೆಗೆ ಮೈಸೂರಿಗೆ ನಾನು ತೆರಳಿದ್ದ ವೇಳೆ ವಿವಿಪುರಂ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದೆ. ಆಗ, ಹುಂಡೈ ಕಾರು ಚಾಲಕ ಪಾನಮತ್ತನಾಗಿ ವಾಹನ ಚಲಾಯಿಸಿದ್ದ ಎಂಬುದನ್ನು ತಿಳಿದು, ಪ್ರಕರಣದ ಚಾರ್ಜ್ ಶೀಟ್ ನಲ್ಲಿ ಹತ್ಯೆ ಪ್ರಕರಣವೆಂದು ದಾಖಲಿಸಲಾಯಿತು.
ಏನಿದು ಘಟನೆ:
ಮೈಸೂರಿನ ಮಾನಸಗಂಗೋತ್ರಿಯ ಚದುರಂಗ ರಸ್ತೆಯ ಆಯಿಷ್ ಬಳಿಯಲ್ಲಿ ಕಾರು, ಸ್ಕೂಟರ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದರು.
ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿ, ಸಿದ್ದಾರ್ಥನಗರ ಬಡಾವಣೆ ನಿವಾಸಿ ಉಲ್ಲಾಸ್ ಮತ್ತು ಕೇರಳ ಮೂಲದ ಶಿವಾನಿ ಮೃತಪಟ್ಟರೆ, ಅಪಘಾತದಲ್ಲಿ ಬೈಕ್ ಸವಾರ ಮಹದೇವಸ್ವಾಮಿ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಉಲ್ಲಾಸ್ ಅವರು ಸ್ನೇಹಿತೆ ಶಿವಾನಿ ಜತೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದಿತ್ತು. ವಿವಿಪುರಂ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
key words: Mysore, Road accident, case has been, charge sheeted, for Culpable homicide
SUMMARY:
Ullas & Shivani were killed on 14 th April when their bike was hit by Hyundai Car. During my Mysore visit visited VVPuram Police Station. As the Hyundai driver had consumed alcohol,case has been charge sheeted today for Culpable homicide not amounting to murder,10yrs imprisonment.