ಮೈಸೂರು ರೋಡ್ ರಾಬರಿ ಕೇಸ್: ಪೊಲೀಸರ ಅಲರ್ಟ್ , ಚೆಕ್ ಪೋಸ್ಟ್ ನಲ್ಲಿ ತೀವ್ರ ತಪಾಸಣೆ

ಮೈಸೂರು,ಜನವರಿ,22,2025 (www.justkannada.in): ಮೈಸೂರಿನಲ್ಲಿ ಕಳೆದ ಎರಡು ದಿನಗಳ ಹಿಂದೆ ನಡೆದಿದ್ದ‌ ಕಾರು ಹಣ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ಆರೋಪಿಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಕರ್ನಾಟಕ – ಕೇರಳ ಎರಡೂ ರಾಜ್ಯಗಳ ಪೊಲೀಸರ ಅಲರ್ಟ್ ಆಗಿದ್ದು ಬಾವಲಿ ಚೆಕ್ ಪೋಸ್ಟ್ ನಲ್ಲಿ ತೀವ್ರ ತಪಾಸಣೆ ನಡೆಸುತ್ತಿದ್ದಾರೆ.

ಮೈಸೂರು- ಕೇರಳ ಗಡಿ  ಬಾವಲಿ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು ಸಿಸಿಟಿವಿ ದೃಶ್ಯಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ. ಎರಡು ಮೂರು ದಿನಗಳ ವಿಡಿಯೋಗಳ ಪರಿಶೀಲನೆ ಕಾರ್ಯ ನಡೆಯುತ್ತಿದ್ದು, ನಿನ್ನೆ- ಮೊನ್ನೆ  ಆ ಭಾಗದಲ್ಲಿ ವಾಹನಗಳು ಓಡಾಡಿರುವ ಕುರಿತು ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಯಾವುದೇ ಅನುಮಾನಸ್ಪದ ವಾಹನ ಕಂಡರೂ ತೀವ್ರ ತಪಾಸಣೆ ನಡೆಸುತ್ತಿದ್ದು ಎಲ್ಲಾ ವಾಹನಗಳ ಕುರಿತು ಇಂಚಿಂಚು ಮಾಹಿತಿ ಸಂಗ್ರಹಕ್ಕೆ ಎರಡೂ ರಾಜ್ಯದ ಪೊಲೀಸರು ಮುಂದಾಗಿದ್ದಾರೆ

ಪ್ರಕರಣದ ಬಗ್ಗೆ ಕಾರಿನಲ್ಲಿ ಕೋಟಿ ಕೋಟಿ ಹಣ ಇದ್ದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಸದ್ಯ 1.5 ಲಕ್ಷ ಹಣ ದರೋಡೆ‌ ಬಗ್ಗೆ ಉದ್ಯಮಿಗಳು ದೂರು ನೀಡಿದ್ದು ಆದರೆ ಈ ಬಗ್ಗೆ ಪೊಲೀಸರಿಗೆ ಅನುಮಾನ ಕಾಡುತ್ತಿದೆ. 1.5 ಲಕ್ಷ ಹಣ ದೋಚಲು ಕಾರನ್ನು ತೆಗೆದುಕೊಂಡು ಹೋಗಿದ್ದು ಏಕೆ ? ಕಾರಿನಲ್ಲಿದ್ದ ಕೋಟ್ಯಾಂತರ ಹಣ ದರೋಡೆಕೋರರ ಟಾರ್ಗೆಟ್ ? ಈ ಬಗ್ಗೆ ಮೊದಲೆ ಮಾಹಿತಿ ಪಡೆದು ದರೋಡೆಗೆ ಮುಂದಾದರೇ? ಕಾರಿನಲ್ಲಿದ್ದ ಕೋಟಿ ಕೋಟಿ ಹಣಕ್ಕಾಗಿ ಕಾರಿನ ಸಮೇತ ಪರಾರಿಯಾಗಿದ್ದರಾ ಆರೋಪಿಗಳು ? ಎಂಬ ಪ್ರಶ್ನೆ ಉದ್ಭವಿಸಿದೆ.

ಹಾಗೆಯೇ ಇದೇ ಕಾರಣಕ್ಕೆ ಘಟನೆ ನಂತರ ಆರೋಪಿಗಳು ಕಾರು ಬಿಟ್ಟು ಪರಾರಿಯಾಗಿದ್ದು, ಉದ್ಯಮಿಗಳು ಸರಿಯಾದ ಮಾಹಿತಿ ನೀಡುತ್ತಿಲ್ಲವಾ ಎಂಬ ಬಗ್ಗೆ ಸಾಕಷ್ಟು ಅನುಮಾನವನ್ನುಂಟು ಮಾಡಿದೆ.

Key words: Mysore road robbery, case, Police alert, strict inspection ,check post