ಮೈಸೂರು ರಾಜಮನೆತನದಲ್ಲಿ ಸಂತಾನ ಸಂಭ್ರಮ: ಗಂಡು ಮಗುವಿಗೆ ಜನ್ಮವಿತ್ತ ತ್ರಿಷಿಕಾ ಕುಮಾರಿ

ಮೈಸೂರು,ಅಕ್ಟೋಬರ್,11,2024 (www.justkannada.in):  ಮೈಸೂರು ರಾಜಮನೆತನದಲ್ಲಿ ಸಂತಾನ ಸಂಭ್ರಮ. ಅರಮನೆಯಲ್ಲಿ ಶರನವರಾತ್ರಿ ಸಂಭ್ರಮವಿರುವಾಗಲೇ ತ್ರಿಷಿಕಾ ಕುಮಾರಿ ಅವರು ಗಂಡು ಮಗುವಿಗೆ ಜನ್ಮವಿತ್ತಿದ್ದಾರೆ.

ರಾಜವಂಶಸ್ಥ ಹಾಗೂ ಸಂಸದ ಯದುವೀರ್ ಗೆ ಎರಡನೇ ಪುತ್ರನ ಆಗಮನವಾಗಿದ್ದು, ಇತ್ತ ಅರಮನೆಯ ಖಾಸಗಿ ದರ್ಬಾರ್ ಗಾಗಿ ಯದುವೀರ್ ಕೃಷ್ಣದತ್ತ ಒಡೆಯರ್ ಕಂಕಣಧಾರಿಗಳಾಗಿದ್ದು , ಅತ್ತ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ತ್ರಿಷಿಕಾ ಕುಮಾರಿ ಅವರಿಗೆ ಗಂಡು ಮಗು ಜನಿಸಿದೆ. ಆದ್ಯವೀರ್ ಒಡೆಯರ್ ಹಿರಿಯ ಪುತ್ರ ಆಗಿದ್ದಾರೆ.

Key words: Mysore,  royal family, Yadhuveer, Trishika Kumari, birth, baby