ಮೈಸೂರು, ನವೆಂಬರ್,2,2020(www.justkannada.in): ರೈತರ ಎರಡು ತರಕಾರಿ ಗಾಡಿಗಳನ್ನು ವಶಪಡಿಸಿಕೊಂಡ ಹಿನ್ನೆಲೆ ಆರ್.ಟಿ ಓ ಅಧಿಕಾರಿಗಳ ವಿರುದ್ಧ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ನಗರದ ಆರ್.ಟಿ.ಓ ಕಛೇರಿ ಮುಂಭಾಗ ತರಕಾರಿ ಸುರಿದು ರೈತರು ಪ್ರತಿಭಟನೆ ನಡೆಸಿದರು. ಓವರ್ ಲೋಡ್ ಮಾಡಿದ್ದಾರೆಂದು ರೈತರ ತರಕಾರಿ ಗಾಡಿಗಳನ್ನು ಆರ್ಟಿಓ ಅಧಿಕಾರಿಗಳು ವಶಕ್ಕೆ ಪಡೆದು ತಂದು ನಿಲ್ಲಿಸಿಕೊಂಡಿದ್ದಾರೆ. ಹೀಗಾಗಿ ವಶಪಡಿಸಿಕೊಂಡ ಗಾಡಿಗಳನ್ನು ಕೂಡಲೇ ಬಿಡುವಂತೆ ಆಗ್ರಹಿಸಿ ರೈತರು ಧರಣಿ ನಡೆಸಿದರು.
ಸಾರ್ವಜನಿಕರಿಗೆ ತೊಂದರೆ ಕೊಡಲು ಗೂಂಡಾಗಳನ್ನು ಸಾಕಿಕೊಂಡಿದ್ದಾರೆ ಎಂದು ಘೋಷಣೆ ಕೂಗಿ ಪ್ರತಿಭಟನಾನಿರತ ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಮರಂಕಯ್ಯ ಹಾಗೂ ರೈತ ಮುಖಂಡ ಹೊಸಕೋಟೆ ಬಸವರಾಜು ಸೇರಿದಂತೆ ಇನ್ನಿತರ ರೈತರು ಭಾಗಿಯಾಗಿದ್ದರು.
Key words: Mysore -RTO office -protests – farmers – vegetables -Outrage -against -officers.