ಮೈಸೂರು,ಮೇ,4,2019(www.justkannada.in): ಮನೆಯಲ್ಲಿ ಬಿದ್ದು ಸೊಂಟ ಮುರಿತದಿಂದ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಗಾನಕೋಗಿಲೆ ಎಸ್.ಜಾನಕಿ ಅವರು ಇಂದು ಆಸ್ಪತ್ರೆಯಿಂದ ಡಿಸ್ವಾರ್ಜ್ ಆಗಿದ್ದಾರೆ.
ಮೈಸೂರಿನಲ್ಲಿ ಸಂಬಂಧಿಕರ ಮನೆಗೆ ಬಂದಿದ್ದ ಸಂದರ್ಭದಲ್ಲಿ ಎಸ್ ಜಾನಕಿ ಅವರು ಮನೆಯಲ್ಲಿ ಬಿದ್ದು ಸೊಂಟ ಮುರಿದುಕೊಂಡು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಇದೀಗ ಏಳು ದಿನಗಳ ಚಿಕಿತ್ಸೆ ನಂತರ ಇಂದು ಎಸ್. ಜಾನಕಿ ಅವರು ಡಿಸ್ಚಾರ್ಜ್ ಆಗಿದ್ದಾರೆ.
ಡಿಸ್ಚಾರ್ಜ್ ಬಳಿಕ ಮಾತನಾಡಿದ ಅವರು, ಕನ್ನಡ ಮಕ್ಕಳ ಕೃಪೆಯಿಂದ ನಾನು ಚೆನ್ನಾಗಿದ್ದೇನೆ. ಇಡೀ ಕನ್ನಡ ಮಕ್ಕಳು ನನ್ನ ಅತ್ಯಂತ ಪ್ರೀತಿಯಿಂದ ಕಾಣ್ತಾರೆ. ಅವರ ಪ್ರೀತಿಯಿಂದ ಚೆನ್ನಾಗಿಯೇ ಇರ್ತಿನಿ. ನಾನು ಸ್ನೇಹಿತರ ಮನೆಗೆ ಬಂದಿದ್ದೆ. ಅಲ್ಲಿ ಬಾಗಿಲ ಹೊಸೆಲು ದಾಟುವಾಗ ಜಾರಿ ಬಿದ್ದಿದ್ದೆ. ಆಗ ತುಂಬಾ ನೋವಾಯ್ತು. ನಂತರ ಆಸ್ಪತ್ರೆಗೆ ಕರೆದುಕೊಂಡು ಆಪರೇಷನ್ ಮಾಡಿದ್ದಾರೆ. ಇಲ್ಲಿ ಅದೇನೋ ಬದಲಾಯಿಸಿದ್ದಾರೆ. ಹಳೆದು ಮುರಿದುಹೋಯ್ತು ಎಂದು ಶಸ್ತ್ರಚಿಕಿತ್ಸೆ ಬಗ್ಗೆ ಸ್ವತಹ ವಿಶ್ಲೇಷಣೆ ಮಾಡಿದರು.
ನನಗೆ ಮೈಸೂರು ತುಂಬಾ ಇಷ್ಟ. ಯಾಕೇ ಅಂತ ಗೊತ್ತಿಲ್ಲ ನನಗೆ ಮೈಸೂರಿನ ಜೊತೆ ಜನ್ಮಂತರದ ಋಣ ಇದೆ. ಅದಕ್ಕೆ ಈ ಊರೆಂದರೇ ನನಗೆ ಇಷ್ಟ. ಡಿಸ್ಚಾರ್ಜ್ ಆಗಿ ಮೈಸೂರಿನಲ್ಲಿ ವಿಶ್ರಾಂತಿ ಪಡೆಯುತ್ತೇನೆ ಎಂದು ಗಾನಕೋಗಿಲೆ ಎಸ್.ಜಾನಕಿ ತಿಳಿಸಿದರು.
ಇನ್ನು ಖಾಸಗಿ ಆಸ್ಪತ್ರೆ ವೈದ್ಯ ನಿತೀನ್ ಅವರು ಮಾತನಾಡಿ, ಎಸ್.ಜಾನಕಿಯವರಿಗೆ ಜಾಯಿಂಟ್ ರಿಪ್ಲೇಸ್ಮೆಂಟ್ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇನ್ನು ಮೂರು ವಾರಗಳ ಕಾಲ ಅವರು ವಿಶ್ರಾಂತಿ ಪಡೆಯಬೇಕು. ಅವರು ಕಾಲು ಜಾರಿ ಬಿದ್ದು ನಮ್ಮ ಆಸ್ಪತ್ರೆಗೆ ಆಗಮಿಸಿದ್ದರು. ಕಳೆದ ಭಾನುವಾರದಿಂದ ಅವರು ನಮ್ಮಲ್ಲಿ ಚಿಕಿತ್ಸೆ ಪಡೆಯಿತ್ತಿದ್ದರು. ಅವರಿಗೆ ಜಾಯಿಂಟ್ ರಿಪ್ಲೇಸ್ಮೆಂಟ್ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮೂರು ವಾರಗಳ ನಂತರ ಅವರ ಆರೋಗ್ಯ ಚೇತರಿಕೆ ಕಾಣಲಿದೆ.ಈ ವಯಸ್ಸಿನಲ್ಲಿ ಇದು ಸಹಜವಾಗಿ ಆಗುತ್ತದೆ. ಹೀಗಾಗಿ ಗಾಬರಿ ಪಡುವಂತದ್ದು ಏನು ಇಲ್ಲ ಎಂದು ಮಾಹಿತಿ ನೀಡಿದರು.
Key words: mysore-S. Janaki -discharged – hospital.