ಮೈಸೂರು, ಜೂ.10, 2021 : (www.justkannada.in news ) ರೋಹಿಣಿ ಸಿಂಧೂರಿ ಮಾಡಿರುವ ಆರೋಪ ಸುಳ್ಳಾದರೆ ಅವರನ್ನು ಐಎಎಸ್ ಹುದ್ದೆಯಿಂದ ಅಮಾನತು ಮಾಡಬೇಕು. ಮಕ್ಕಳನ್ನು ಆಡಿಸಿಕೊಂಡು, ಅಡಿಗೆ ಮಾಡಿಕೊಂಡಿರಲು ಅವರನ್ನು ಆಂಧ್ರಕ್ಕೆ ಕಳುಹಿಸಬೇಕು ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದ್ದಾರೆ.
ಪ್ರಾದೇಶಿಕ ಆಯುಕ್ತರ ಕಚೇರಿ ಆವರಣದಲ್ಲಿ ಗುರುವಾರ ಪ್ರತಿಭಟನೆಗೆ ಮುಂದಾಗಿದ್ದ ಶಾಸಕ ಸಾ.ರಾ.ಮಹೇಶ್, ಬಳಿಕ ಮಾಧ್ಯಮಗಳ ಜತೆ ಮಾತನಾಡಿ ಹೇಳಿದಿಷ್ಟು..
ಮೈಸೂರಿನ ದಟ್ಟಗಳ್ಳಿಯಲ್ಲಿನ ಸಾರಾ ಕನ್ವೆನ್ಷನ್ ಹಾಲ್ ರಾಜ ಕಾಲುವೆ ಮೇಲೆ ನಿರ್ಮಾಣವಾಗಿದೆ ಎಂದು ಮೈಸೂರಿನ ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ದಾಖಲೆ ಬಿಡುಗಡೆ ಮಾಡಿದ್ದಾರೆ.
ರೋಹಿಣಿ ಸಿಂಧೂರಿ ಅವರ ದಾಖಲೆ ಪ್ರಕಾರ ಅದು ನಿಜವೇ ಅಗಿದ್ರೆ ಇಡೀ ಕನ್ವೆನ್ಷನ್ ಹಾಲ್ ಗವರ್ನರ್ ಹೆಸರಿಗೆ ಬರೆದುಕೊಡ್ತೇನೆ. ಕಾನೂನು ವಿರುದ್ದವಾಗಿ ನಾನು ಏನೇ ಮಾಡಿದ್ರೂ ಕ್ರಮ ಕೈಗೊಳ್ಳಿ. ನನ್ನ ಒಡೆತನದಲ್ಲಿರುವ ಸಾ.ರಾ. ಚೌಲ್ಟ್ರಿ ರಾಜಕಾಲುವೆ ಮೇಲೆ ನಿರ್ಮಾಣ ಆಗಿಲ್ಲ. ಆದ್ದರಿಂದಲೇ ಈ ಏಕಾಂಕಿ ಪ್ರತಿಭಟನೆ ಶುರು ಮಾಡಿದ್ದೇನೆ.
ಉನ್ನತ ಮಟ್ಟದ ಅಧಿಕಾರಿಗಳು ಜಾಗದ ಸರ್ವೇ ಮಾಡಲಿ. ರಾಜಕಾಲುವೆ ಮೇಲೆ ನಿರ್ಮಾಣ ಆಗಿದ್ದರೆ ಅದನ್ನು ಸಾರ್ವಜನಿಕರ ಬಳಕೆಗಾಗಿ ರಾಜ್ಯಪಾಲರಿಗೆ ನಾನೆ ಖುದ್ದು ಹಸ್ತಾಂತರ ಮಾಡುತ್ತೇನೆ. ಮಾತ್ರವಲ್ಲ, ನಾನು ಸಾರ್ವಜನಿಕ ಜೀವನದಿಂದಲೇ ನಿವೃತ್ತಿ ಹೊಂದುತ್ತೇನೆ. ಒಂದು ವೇಳೆ ರೋಹಿಣಿ ಸಿಂಧೂರಿ ಅವರು ಮಾಡಿರುವ ಆರೋಪ ಸುಳ್ಳಾದರೆ, ಅವರನ್ನು ಐಎಎಸ್ ಹುದ್ದೆಯಿಂದ ಅಮಾನತು ಮಾಡಬೇಕು. ಜತೆಗೆ ಮಕ್ಕಳನ್ನು ಆಡಿಸಿಕೊಂಡು, ಅಡಿಗೆ ಮಾಡಿಕೊಂಡು ಇರಲು ಅವರನ್ನು ಆಂಧ್ರಕ್ಕೆ ಕಳುಹಿಸಬೇಕು ಎಂದು ಪ್ರತಿಭಟನೆ ವೇಳೆ ಶಾಸಕ ಸಾ.ರಾ.ಮಹೇಶ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
key words : mysore-sa.ra.mahesh-dattagalli-convention-hall-protest-r.c.office-rohini-sindhuri