ಮೈಸೂರು,ಜ,3,2019(www.justkannada.in): ತಡೆಹಿಡಿದ ಅನುದಾನ ಬಿಡುಗಡೆಯಾಗುವವರೆಗೂ ಯಾವುದೇ ಸಭೆಗಳಿಗೆ ಭಾಗಿಯಾಗುವುದಿಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ ಕೆ.ಆರ್ ನಗರ ಶಾಸಕ ಸಾ.ರಾ ಮಹೇಶ್ ಬಹಿರಂಗ ಪತ್ರ ಬರೆದಿದ್ದಾರೆ.
ಇಂದು ಉಸ್ತುವಾರಿ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಗೆ ಶಾಸಕ ಸಾರಾ ಮಹೇಶ್ ಗೈರಾಗಿದ್ದರು. ಈ ಸಂಬಂಧ ಸಚಿವ ವಿ.ಸೋಮಣ್ಣಗೆ ಪತ್ರ ಬರೆದಿರುವ ಮಾಜಿ ಸಚಿವ ಸಾ.ರಾ ಮಹೇಶ್, ಮೈತ್ರಿ ಸರ್ಕಾರದಲ್ಲಿ ಕೆ.ಆರ್ ನಗರ ಕ್ಷೇತ್ರಕ್ಕೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 7 ಕೋಟಿ, ಪೌರಾಡಳಿತ ಇಲಾಖೆಯಿಂದ 10ಕೋಟಿ, ಲೋಕೋಪಯೋಗಿ ಇಲಾಖೆಯಿಂದ 11.50ಕೋಟಿ, ಪ್ರವಾಸೋದ್ಯಮ ಇಲಾಖೆಯಿಂದ 18 ಕೋಟಿ ಅನುದಾನವನ್ನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಂಜೂರು ಮಾಡಲಾಗಿತ್ತು. ಆದ್ರೆ ಬಿಜೆಪಿ ಸರ್ಕಾರ ಅನುದಾನಗಳೆಲ್ಲವನ್ನೂ ತಡೆಹಿಡಿದಿದ್ದು, ದ್ವೇಷದ ರಾಜಕಾರಣ ಮಾಡ್ತಿದೆ. ಹಿಂದೆ ನಿಮಗೆ ಪತ್ರ ಮೂಲಕ ಈ ಬಗ್ಗೆ ತಿಳಿಸಿ ಮೈಸೂರು ದಸರಾ ಕಾರ್ಯಕ್ರಮದಿಂದ ದೂರ ಉಳಿದಿದ್ದೆ. ಅನುದಾನ ತಡೆಹಿಡಿದ ವಿಚಾರ ನಿಮ್ಮ ಗಮನಕ್ಕೆ ಬಂದರೂ ಯಾವದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಪ್ರಸ್ತುತ ಕೆಡಿಪಿ ಸಭೆಯಲ್ಲಿ ಭಾಗಿಯಾಗಿ ಅದೇ ವಿಚಾರ ಚರ್ಚೆ ಮಾಡಿ ನಿಮಗೆ ನೋವುಂಟು ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಕಾರಣಕ್ಕಾಗಿಯೇ ನಾನು ಈ ಸಭೆಯಿಂದ ದೂರ ಉಳಿದಿದ್ದು ಅನುದಾನ ಬಿಡುಗಡೆಗೊಳಿಸುವವರೆಗೆ ಯಾವದೇ ಸಭೆಗೆ ಹಾಜರಾಗುವುದಿಲ್ಲ ಎಂದು ಸಾ.ರಾ ಮಹೇಶ್ ಪತ್ರದ ಮೂಲಕ ಸಚಿವ ಸೋಮಣ್ಣಗೆ ತಿಳಿಸಿದ್ದಾರೆ.
key words: mysore-.sa. Ra Mahesh-letter – Minister Somanna- grant -released.