ಮೈಸೂರು,ಸೆಪ್ಟಂಬರ್,19,2020(www.justkannada.in): ಮೈಸೂರು ಜಿಲ್ಲೆಯ ಸರಗೂರು ಸಮೀಪದ ಕಾಡಂಚಿನ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗುತ್ತಿದ್ದು, ಜನರು ಪ್ರತಿದಿನ ಭಯದ ವಾತಾವರಣದಲ್ಲಿ ದಿನ ಕಳೆಯುವ ಪರಿಸ್ಥಿತಿ ನಿರ್ಮಾಣ ಆಗಿದೆ.
ಸರಗೂರು ತಾಲ್ಲೂಕಿನ ಹಳೇಹೆಗ್ಗಡಿಲು ಹಾಗೂ ಸುತ್ತ ಮುತ್ತ ಚಿರತೆ ಹಾವಳಿ ಇದ್ದು, ರಾತ್ರಿ ವೇಳೆ ಗ್ರಾಮಕ್ಕೆ ನುಗ್ಗಿ ಕುರಿ ,ಮೇಕೆ ರಕ್ತ ಹೀರಿ ಪರಾರಿಯಾಗುತ್ತಿದೆ.
ನಿನ್ನೆ ರಾತ್ರಿ ಕೂಡ ಹಳೇಹೆಗ್ಗುಡಿಲು ಗ್ರಾಮದ ನಂಜಯ್ಯ ಎಂಬವರಿಗೆ ಸೇರಿದ ಮೇಕೆ ಕೊಂದಿದೆ. ಪ್ರತಿದಿನ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿದ್ದು, ಇದನ್ನು ನಿಯಂತ್ರಿಸಿ ಜನರಲ್ಲಿನ ಭಯ ನಿರ್ಮೂಲನೆ ಮಾಡಬೇಕು ಎಂದು ಅರಣ್ಯ ಇಲಾಖೆಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
Key words: mysore-saragur-Daily – wild animals- villagers – fear.