ಮೈಸೂರು,ಆ,30,2019(www.justkannada.in): ಶಾಲೆಯ ಪಡಸಾಲೆಯೇ ಆಯ್ತು ಬಾರ್…..ಅಲ್ಲೇ ಕುಡಿದು ತಿಂದು ತೇಗುವ ಮದ್ಯವೆಸನಿಗಳು….ಶಾಲೆಯಲ್ಲಿಯೇ ಮದ್ಯಪಾನ ಮಾಡಿ ಬಾಟಲ್ ಪ್ಯಾಕ್ ಗಳನ್ನ ಬೀಸಾಡಿರುವ ಪುಂಡ ಪೋಕರಿಗಳು…ಇದೆಲ್ಲಾ ಕಂಡು ಬಂದಿದ್ದು ಮೈಸೂರಿನ ದೊಡ್ಡಮಾರಗೌಡನಹಳ್ಳಿ ಗ್ರಾಮದ ಶಾಲೆಯಲ್ಲಿ…
ಹೌದು, ಶಾಲೆ ಎಂದರೇ ಮಕ್ಕಳನ್ನ ತಿದ್ದಿ ತೀಡಿ ಭವಿಷ್ಯ ರೂಪಿಸುವ ದೇವಾಲಯವಿದ್ದಂತೆ ಎಂಬ ಭಾವನೆ ಇದೆ. ಆದರೆ ಇಂತಹ ಪವಿತ್ರವಾದ ಶಾಲೆಯಲ್ಲಿಯೇ ಪುಂಡ ಪೋಕರಿಗಳು ಬಾರ್ ಮಾಡಿಕೊಂಡು ಕುಡಿದು ತಿಂದು ತೇಗುತ್ತಿದ್ದಾರೆ. ಶಾಲೆಯ ಅವರಣದಲ್ಲೇ ಮದ್ಯಪಾನ ಮಾಡಿ ಎಲ್ಲೆಂದರಲ್ಲೇ ಬಾಟಲ್ ಗಳನ್ನ ಬಿಸಾಡಿರುವ ದೃಶ್ಯಕ್ಯಾಮರಾದಲ್ಲಿ ಸೆರೆಯಾಗಿದೆ.
ನೂರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಶಾಲೆಯ ಆವರಣವನ್ನೇ ಮದ್ಯಪಾನ, ಜೂಜು ಅಡ್ಡೆಯಾಗಿ ಮಾಡಿಕೊಂಡು ದೂರ್ತಪುಂಡರು ಹಾವಳಿ ನಡೆಸುತ್ತಿದ್ದು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ರೂ ಯಾವುದೇ ಪ್ರಯೋಜವಿಲ್ಲ ಎನ್ನುತ್ತಿದ್ದಾರೆ ಗ್ರಾಮಸ್ಥರು.
ಶಾಲಾ ಅವರಣದಲ್ಲಿ ಮದ್ಯಪಾನ ಮಾಡುವ ಕುಡುಕರ ಹಾವಳಿ ತಪ್ಪಿಸುವಂತೆ ಶಾಲೆಯ ಶಿಕ್ಷಕರು ಮತ್ತು ಗ್ರಾಮಸ್ಥರು ಇಲವಾಲ ಪೊಲೀಸ್ ಠಾಣೆಗೆ ದೂರು ನೀಡಿದ್ರೂ ಪೊಲೀಸರು ಮಾತ್ರ ಯಾವುದೇ ಕ್ರಮಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಪೊಲೀಸರು ನಡೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Key words: mysore-school-drink- Gambler-Complaining -police