- ಮೈಸೂರು,ಆ,13,2019(www.justkannada.in): ಮೈಸೂರಿನಲ್ಲಿ ಸರಣಿ ಅಪಘಾತ ಮಾಡಿ ಪರಾರಿಯಾಗುತ್ತಿದ್ದ ಇಬ್ಬರು ಅಪ್ರಾಪ್ತ ಯುವಕರನ್ನ ಸಾರ್ವಜನಿಕರು ಹಿಡಿದು ಗೂಸಾ ನೀಡಿದ್ದಾರೆ. ಕುಟುಂಬದವರ ಜೊತೆ ತಲಾಕಾಡಿಗೆ ಹೋಗಲು ಮಂಜುನಾಥ್ ಎಂಬುವವರು ವಾಹನ ಪಡೆದಿದ್ದರು. ಇವರು ಮಂಜುನಾಥ್ ಅವರ ಬಳಿ ಕಾರು ಪಕ್ಕಕ್ಕೆ ನಿಲ್ಲಿಸುವುದಾಗಿ ಹೇಳಿ ಪಡೆದ ಬಾಲಕ ನಂತರ ಯುವರಾಜ ಕಾಲೇಜಿನಲ್ಲಿದ್ದ ಗೆಲೆಯನನ್ನು ಕರೆತಂದು ಕಾರಿನಲ್ಲಿ ತೆರಳಿದ್ದರು.
ಈ ನಡುವೆ ಇಂದು ಬೆಳಿಗ್ಗೆ ಮುಡಾ ವೃತ್ತದಲ್ಲಿ ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಯರಿಗೆ ಕಾರು ಡಿಕ್ಕಿಯಾಗಿದೆ. ಮಹಾರಾಣಿ ಕಾಲೇಜಿನ ವಿದ್ಯಾರ್ಥಿಗಳಾದ ಪ್ರೇಮ ಹಾಗೂ ಅಶ್ವಿನಿ ಎಂಬ ವಿದ್ಯಾರ್ಥಿನಿಯರಿಗೆ ಕಾರು ಡಿಕ್ಕಿಯಾಗಿದ್ದು ಡಿಕ್ಕಿ ಹೊಡೆದ ರಭಸಕ್ಕೆ ಅಶ್ವಿನಿ ಎಂಬ ವಿದ್ಯಾರ್ಥಿನಿ ಸ್ಥಳದಲ್ಲೇ ಪ್ರಜ್ಞೆ ತಪ್ಪಿದ್ದು ಅಪಘಾತಕ್ಕೆ ತುತ್ತಾದ ವಿದ್ಯಾರ್ಥಿನಿಯರನ್ನ ಕೆ.ಆರ್. ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ. ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅಪಘಾತ ನಡೆಸಿ ಕಾರು ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಮುಡಾ ಇಲಾಖೆಯ ಬುಲೆರೋ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ನಂತರ ಇವರನ್ನ ಸಾರ್ವಜನಿಕರು ಬೆನ್ನಟ್ಟಿ ಮಹಾರಾಜ ಕಾಲೇಜಿನ ಬಳಿ ಅಡ್ಡ ಗಟ್ಟಿದ್ದಾರೆ. ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಪಕ್ಕದ ರಸ್ತೆಯಲ್ಲಿ ಈ ಇಬ್ಬರು ಸಿಕ್ಕಿಬಿದ್ದಿದ್ದು ಸಾರ್ವಜನಿಕರು ಸಖತ್ ಗೂಸಾ ನೀಡಿದ್ದಾರೆ. ಜತೆಗೆ ಕಾರನ್ನ ಸಾರ್ವಜನಿಕರು ಜಖಂಗೊಳಿಸಿದ್ದು ಸ್ಥಳಕ್ಕೆ ಆಗಮಿಸಿ ಕೆ.ಆರ್. ಟ್ರಾಫಿಕ್ ಪೋಲಿಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
ಕಾರು ಚಾಲನೆ ಮಾಡುತ್ತಿದ್ದ ಆರೋಪಿಯ ವಿರುದ್ದ ಸೆಕ್ಸನ್ 279 ,338 ಅಡಿಯಲ್ಲಿ ವೇಗದ ಚಾಲನೆ ಹಾಗೂ ಹಿಟ್ ಅಂಡ್ ರನ್ ಕೇಸುಗಳು ದಾಖಲಾಗಿದೆ.
Key words: mysore-series – accidents – Mysore-Car -collides