ಮೈಸೂರಿನಲ್ಲಿ ಚಿತ್ರಮಂದಿರಕ್ಕೆ ನಟ ಶಿವಣ್ಣ ಭೇಟಿ: ಪಟಾಕಿ ಸಿಡಿಸಿ ಅಭಿಮಾನಿಗಳಿಂದ ಸಂಭ್ರಮ.

ಮೈಸೂರು,ಮಾರ್ಚ್,17,2022(www.justkannada.in):  ನಟ ದಿ. ಪುನೀತ್ ರಾಜ್ ಕುಮಾರ್ ಅವರ ಹುಟ್ಟಹಬ್ಬ ಇಂದೇ ಅವರ ಕೊನೆಯ ಚಿತ್ರ ಜೇಮ್ಸ್ ಬಿಡುಗಡೆಯಾಗಿದ್ದು, ಭರ್ಜರಿ ವೆಲ್ ಕಮ್ ಸಿಕ್ಕಿದೆ. ಅಭಿಮಾನಿಗಳು ತನ್ನ ನೆಚ್ಚಿನ ನಟ ಚಿತ್ರವನ್ನ ನೋಡಿ ಕಣ್ತುಂಬಿಕೋಳ್ಳುತ್ತಿದ್ದಾರೆ.

ಈ ನಡುವೆ ಗಾಯತ್ರಿ ಚಿತ್ರಮಂದಿರಕ್ಕೆ ನಟ ಶಿವರಾಜ್ ಕುಮಾರ್ ಭೇಟಿ ನೀಡಿದ್ದು, ಶಿವಣ್ಣನನಕ್ಕ ಕಂಡು ಅಭಿಮಾನಿಗಳು ಹರ್ಷೋದ್ಗಾರ ವ್ಯಕ್ತಪಡಿಸಿದರು. ಈ ವೇಳೆ ಅಭಿಮಾನಿಗಳು ನೀಡಿದ ಪುನೀತ್ ಭಾವಚಿತ್ರಕ್ಕೆ  ಮುತ್ತಿಟ್ಟ ನಟ ಶಿವಣ್ಣ ಮುತ್ತಿಕ್ಕಿದರು. ಇದೇ ವೇಳೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಈ ವೇಳೆ ಮಾತನಾಡಿದ ನಟ ಶಿವಕುಮಾರ್, ಡಬ್ಬಿಂಗ್ ಮಾಡುವ ವೇಳೆ ನನಗೆ ತುಂಬಾ ನೋವಾಗ್ತಾ ಇತ್ತು. ಅಪ್ಪು ಇಲ್ಲದ ಹುಟ್ಟುಹಬ್ಬ ಆಚರಣೆ ತುಂಬಾ ದುಃಖದ ವಿಚಾರ. ಏನ್ ಇದೆ ಅದನ್ನ ನೋಡಿಕೊಂಡು ಮುಂದೆ ಹೋಗ್ತಾ ಇರಬೇಕು. ಹುಟ್ಟುಹಬ್ಬಕ್ಕೆ ಇಬ್ಬರೂ ಗಿಫ್ಟ್ ಗಳನ್ನ ಶೇರ್ ಮಾಡ್ತಾ ಇದ್ದವು.  ಅಪ್ಪುಗೆ ಬ್ರಾಂಡ್ ವಾಚ್ ,ಬೆಲ್ಟ್, ಗಾಗಲ್ ಸಾಕಷ್ಟು ಕೊಟ್ಟಿದ್ದೇನೆ ಅಪ್ಪು ಎಲ್ಲರ ಹೃದಯದಲ್ಲಿ ಇದ್ದಾನೆ‌. ಅವನ ಸಿನಿಮಾ ಬಿಡುಗಡೆ ಆಗಿದೆ. ಅವನಿಲ್ಲದ ವೇಳೆ ಸಿನಿಮಾ ಬಿಡುಗಡೆ ಹೆಚ್ಚು ದುಃಖ ತರುತ್ತಿದೆ ಎಂದು ಸ್ಮರಿಸಿದರು.

ಫಿಲ್ಮ್ ಸಿಟಿಗೆ ಪುನೀತ್ ರಾಜ್ ಕುಮಾರ್ ಹೆಸರಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ನಟ ಶಿವಣ್ಣ, ಪುನೀತ್ ರಾಜ್ ಕುಮಾರ್ ಹೆಸರಿಟ್ಟರೆ ಸಂತೋಷನೆ ಆಗುತ್ತೆ. ಕುಟುಂಬ ಸದಸ್ಯನಾಗಿ ನಾನು ಆ ರೀತಿಯ ಒತ್ತಾಯ ಮಾಡಲ್ಲ. ಅಭಿಮಾನಿಗಳು ಅಭಿಮಾನದಿಂದ ಹೇಳ್ತಿದ್ದಾರೆ. ಅದರಂತೆ ಪುನೀತ್ ರಾಜ್ ಕುಮಾರ್ ಹೆಸರಿಟ್ಟರೂ ಸಂತೋಷ‌. ಚಿತ್ರರಂಗಕ್ಕೆ ದುಡಿದವ್ರು ಸಾಕಷ್ಟು ಮಂದಿ ಇದ್ದಾರೆ ಅವ್ರ ಹೆಸರನ್ನೂ ಇಡಬಹುದು ಎಂದು ತಿಳಿಸಿದರು.

Key words: mysore-shivarajkumar-film theater

ENGLISH SUMMARY….

Actor Shivrajkumar visits cinema hall in Mysuru: Fans celebrate
Mysuru, March 17, 2022 (www.justkannada.in): Late actor Puneeth Rajkumar’s last movie ‘James’ has been released today on his first birth anniversary. The movie has received an overwhelming response.
The late actor’s elder brother, actor Shivrajkumar visited the Gayathri Cinema, in Mysuru today, making Appu’s fans happy. The fans celebrated the release of Appu’s last movie ‘James’, by firing crackers.
Speaking on the occasion, Shivrajkumar shared that it was very hurtful for him when he gave voice dubbing to the movie. “I just can’t imagine Appu’s birthday without him. It is very sad. However, we have to move on. We used to exchange gifts on our birthdays. Appu lives in the hearts of all of us. I feel sad to see his movie release without him,” he said.
In his reply to a question on naming the Film City after the late actor’s name, he said, “of course, we feel happy if it is named after Appu. But being a family member, I won’t force anyone for it. But it is the desire of his fans. We feel happy if it is named after Puneeth, according to the desire of his fans. I also would like to say that there are so many others who have contributed immensely to the growth of Sandalwood. I feel happy if it is named after them also.”
Keywords: James/ Puneeth Rajkumar/ Shivrajkumar/ Gayathri cinema/ film release/ fans celebrate