ಮೈಸೂರು,ಮೇ,18,2019(www.justkannada.in): ಮೈಸೂರಿನಲ್ಲಿ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಧೆಕೋರರು ನೋಟು ಎಕ್ಸ್‌ಚೇಂಜ್ ಅಕ್ರಮ ದಂಧೆ ನಡೆಸಲು ಶಿಸ್ತಿನ ಅಗ್ರಿಮೆಂಟ್ ಮಾಡಿಕೊಂಡಿದ್ದ ವಿಚಾರ ಇದೀಗ ಬಹಿರಂಗವಾಗಿದೆ.
ಇತ್ತೀಚೆಗೆ ಮನಿಡಬ್ಲಿಂಗ್ ಆರೋಪದಲ್ಲಿ ಆರೋಪಿಗಳನ್ನ ಬಂಧಿಸಲು ಹೋದ ವೇಳೆ ಮೈಸೂರಿನ ವಿಜಯನಗರದಲ್ಲಿ ಪೊಲೀಸರು ಶೂಟೌಟ್ ನಡೆಸಿದ್ದರು. ಹಳೆ ರದ್ದಾದ ನೋಟು ಬದಲಾವಣೆ ದಂಧೆಯಲ್ಲಿ ತೊಡಗಿದ್ದ ಸುಖವಿಂದರ್ ಎಂಬಾತ ಶೂಟೌಟ್ ಗೆ ಬಲಿಯಾಗಿದ್ದನು. ಉಳಿದ ಆರೋಪಿಗಳು ಪರಾರಿಯಾಗಿದ್ದರು.
ಈ ದಂಧೆಕೋರರು ನೋಟು ಎಕ್ಸ್‌ಚೇಂಜ್ ಇಲ್ಲಿಗಲ್ ದಂಧೆ ನಡೆಸೋಕೆ ಶಿಸ್ತಿನ ಅಗ್ರಿಮ್ಮೆಂಟ್ ಮಾಡಿಕೊಂಡಿದ್ದರು ಎನ್ನಲಾಗಿದೆ. ಅಗ್ರಿಮೆಂಟ್ ನಲ್ಲಿ ದಿನಾಂಕ, ಸಮಯ, ಸ್ಥಳವನ್ನ ಉಲ್ಲೇಖ ಮಾಡಿದ್ದರು. ದಂಧೆ ಪ್ಲಾನ್ ಫೇಲಾದ್ರೆ 50 ಲಕ್ಷ ಹಣ ಕೊಡಬೇಕು ಎಂದು ದಂಧೆಕೋರರು ಹಾಗೂ ರದ್ದಾದ ನೋಟುಗಳನ್ನ ಸರಬರಾಜು ಮಾಡುವ ವ್ಯಕ್ತಿ ನಡುವೆಯೂ ಅಗ್ರೀಮೆಂಟ್ ಆಗಿತ್ತು.
Work of C to C transaction ಎಂಬ ಹೆಡ್ಡಿಂಗ್ ಬಳಸಿ ಅಗ್ರೀಮೆಂಟ್ ಮಾಡಲಾಗಿದ್ದು, ಅಗ್ರಿಮೆಂಟ್ ನಲ್ಲಿ 500 ಕೋಟಿ ಮೊತ್ತ ಪ್ರಸ್ತಾಪಿಸಲಾಗಿತ್ತು. ಡೀಲ್ ಕುದುರದಿದ್ದಲ್ಲಿ 50 ಲಕ್ಷ ನೀಡಬೇಕೆಂಬ ಕಂಡೀಷನ್ ಹಾಕಲಾಗಿತ್ತು. ಈ ವ್ಯವಹಾರ 16 ನೇ ತಾರೀಖು ಬೆಳಿಗ್ಗೆ 9 ರಿಂದ 10 ಗಂಟೆ ಒಳಗೆ ಮುಗಿಯಬೇಕು. ಯಾವುದೇ ಕಾರಣಕ್ಕೂ ಸಮಯ ಮುಂದೂಡುವಂತಿಲ್ಲ ಎಂಬ ಒಪ್ಪಂದವಾಗಿತ್ತು.
ವ್ಯವಹಾರ ನಡೆಯುವ ಒಂದು ದಿನಕ್ಕೂ ಮುಂಚಿತವಾಗಿ ಭೇಟಿಯಾಗಬೇಕು. ಭೇಟಿ ಸ್ಥಳಕ್ಕೂ ವ್ಯವಹಾರ ನಡೆಯುವ ಸ್ಥಳಕ್ಕೂ 1.5 ಕಿಲೋಮೀಟರ್ ಅಂತರ ಇರಬೇಕು. ಜತೆಗೆ ಅಗ್ರಿಮೆಂಟ್ ನಲ್ಲಿ ಮೂವರು ಸಾಕ್ಷಿಗಳು ಇರಬೇಕು ಸೇರಿದಂತೆ ಹಲವು ಕಂಡಿಷನ್ ಗಳನ್ನ ಅಕ್ರಮ ದಂಧೆಕೋರರು ಹಾಕಿದ್ದರು ಎನ್ನಲಾಗಿದೆ.
Key words: Mysore shootout case. illegal fraud on disciplinary agreement.
#crimenews #mysore #police # illegal