ಮೈಸೂರು,ಮಾರ್ಚ್,1,2023(www.justkannada.in): ಪರಿಸರ ಸ್ನೇಹಿ ತಂಡ ಹಾಗೂ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ 2ತಿಂಗಳ ಕಾಲ ಮೂಕ ಸ್ಪಂದನೆ ಎಂಬ ‘ನೀರುಣಿಸಿ-ಜೀವವನ್ನುಳಿಸಿ, ಅಭಿಯೋಜನೆಯನ್ನು ಮೈಸೂರು ನಗರದಲ್ಲಿ ಹಮ್ಮಿಕೊಂಡಿದ್ದು ನಗರದ ಚಾಮುಂಡಿಪುರಂನಲ್ಲಿರುವ ಟ್ರಸ್ಟ್ ಕಚೇರಿಯಲ್ಲಿ ಮೂಕ ಸ್ಪಂದನ ಅಭಿಯಾನದ ಸಾಮಗ್ರಿಗಳನ್ನು ಮುಡಾ ಮಾಜಿ ಅಧ್ಯಕ್ಷ ಎಚ್. ವಿ ರಾಜೀವ್ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಹೆಚ್.ವಿ ರಾಜೀವ್, ಮನುಷ್ಯನ ಒಡನಾಡಿಯಾಗಿರುವ ಪ್ರಾಣಿ ಪಕ್ಷಿಗಳ ಜೀವ ಸಂಕುಲವನ್ನುಳಿಸಲು ಸಮಾಜದಲ್ಲಿರುವ ಸಹೃದಯಿ ನಾಗರಿಕರು ಮುಂದಾಗಬೇಕೆಂದು ಜನಸಾಮನ್ಯರಿಗೆ ಕರೆ ನೀಡಿದರು.
ಈ ವೇಳೆ ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್ , ಅಪೂರ್ವ ಸುರೇಶ್, ಜಿ ರಾಘವೇಂದ್ರ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕಡಕೋಳ ಜಗದೀಶ್, ವಿನಯ್ ಕಣಗಾಲ್, ಸಚಿಂದ್ರ,ಚಕ್ರಪಾಣಿ, ವಿದ್ಯಾರಣ್ಯ ಟ್ರಸ್ಟ್ ಅಧ್ಯಕ್ಷರಾದ ರವಿಶಂಕರ್, ರೇಡಿಯೋ ಜಾಕಿ ಆರ್ ಜೆ ಅವಿನಾಶ್, ಎಸ್ ಬಿ ವಾಸುದೇವಮೂರ್ತಿ, ಲಿಂಗರಾಜು, ಮಿರ್ಲೆ ಪನೀಶ್, ರಾಕೇಶ್, ರಘು,ಹಾಗೂ ಇನ್ನಿತರರು ಹಾಜರಿದ್ದರು.
Key words: Mysore –silent- vibration –campaign- save – animal -bird.