ಮೈಸೂರು,ಏಪ್ರಿಲ್,1,2025 (www.justkannada.in): ಮೈಸೂರಿನ ಅಶೋಕಪುರಂ ಬಳಿ ಇರುವ ಸಿಲ್ಕ್ ಫ್ಯಾಕ್ಟರಿಯಲ್ಲಿ ಇಲಾಖೆ ಅಧಿಕಾರಿಗಳು ಟೆಂಡರ್ ಬದಲಾವಣೆ ಮುಂದಾಗಿದ್ದು ಈ ಹಿನ್ನೆಲೆಯಲ್ಲಿ ಇಂದು ಒಂದು ದಿನದ ಕೆಲಸಕ್ಕೆ ಬ್ರೇಕ್ ಹಾಕಲಾಗಿದೆ.
ಟೆಂಡರ್ ಪ್ರಕ್ರಿಯೆ ಮುಗಿದಿದೆ. ಹೊರಗುತ್ತಿಗೆಯಲ್ಲಿ ಕೆಲಸ ಮಾಡುವವರಿಗೆ ಏಪ್ರಿಲ್ 1 ರಂದು ಕೆಲಸಕ್ಕೆ ಬಾರದಂತೆ ಅಧಿಕಾರಿಗಳು ರಜೆ ಘೋಷಣೆ ಮಾಡಿದ್ದು ಇದರಿಂದ 800 ಕ್ಕೂ ಹೆಚ್ಚು ಮಂದಿ ಕಾರ್ಮಿಕರಿಗೆ ಆತಂಕ ಶುರುವಾಗಿದೆ.
ಬೆಳಗ್ಗೆಯಿಂದ ಗೇಟ್ ಮುಂಭಾಗದಲ್ಲೇ ಕಾರ್ಮಿಕರು ಕುಳಿತಿದ್ದು, ಟೆಂಡರ್ ಪ್ರಕ್ರಿಯೆ ಮುಗಿದಿದೆ ಎಂದು ಒಂದು ದಿನದ ರಜೆ ನೀಡಿ ನಾಳೆಯಿಂದ ಮತ್ತೆ ಕೆಲಸ ನಿರ್ವಹಿಸುವಂತೆ ಅಧಿಕಾರಿಗಳು ಹೇಳಿದ್ದಾರೆ ಕಳೆದ 4 ವರ್ಷದಿಂದ ಒಬ್ಬ ವ್ಯಕ್ತಿಗೆ ಟೆಂಡರ್ ನೀಡಲಾಗಿತ್ತು. ಇದೀಗ ಟೆಂಡರ್ ಬದಲಾವಣೆಗೆ ಮುಂದಾಗಿದ್ದು ಗ್ರ್ಯಾಜುಯಿಟಿ, ಸರ್ವೀಸ್ ಬ್ರೇಕ್ ಆಗುವ, ಜೊತೆಗೆ ಹೊಸ ಟೆಂಡರ್ ಬಂದಾಗ ಸಂಬಳದಲ್ಲಿ ಏರುಪೇರು ಆಗುವ ಸಾಧ್ಯತೆ ಇದೆ ಎಂದು ಕಾರ್ಮಿಕ ಆತಂಕ ವ್ಯಕ್ತಪಡಿಸಿದ್ದಾರೆ
ಮೈಸೂರು, ಟಿ.ನರಸಿಪುರ, ಚನ್ನಪಟ್ಟಣದಲ್ಲಿ ಸಿಲ್ಕ್ ಫ್ಯಾಕ್ಟರಿಯಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಇನ್ನು ಸ್ಥಳಕ್ಕೆ ಕೆ ಆರ್ ಕ್ಷೇತ್ರದ ಶಾಸಕ ಶ್ರೀವತ್ಸ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿ ನಾಳೆಯಿಂದ ಕೆಲಸ ನೀಡುವಂತೆ ಸೂಚನೆ ನೀಡಿದರು.
ಒಂದು ದಿನದ ರಜೆಯಿಂದ ಗ್ರಾಚುಯಿಟಿ ತೊಂದರೆಯಾಗದಂತೆ ಸಿಎಂ ಬಳಿ ಮನವಿ ಮಾಡುತ್ತೇನೆ. ಯಾರನ್ನು ಕೆಲಸದಿಂದ ತೆಗೆಯಲು ಬಿಡುವುದಿಲ್ಲ. ಇಂದೇ ಸಿಎಂ ಭೇಟಿಯಾಗಿ ಸಮಸ್ಯೆ ಮುಂದಿಡುತ್ತೇನೆ ಎಂದು ಶಾಸಕ ಶ್ರೀವತ್ಸ ಭರವಸೆ ನೀಡಿದರು.
Key words: Tender change, Mysore, silk factory, workers, panic