ಮೈಸೂರು,ಸೆಪ್ಟಂಬರ್, 15,2020(www.justkannada.in): ದೇಶದಲ್ಲಿ ಇರುವ ಭಾರತದ ಇಂಜಿನಿಯರ್ ಗಳು, ವಿಜ್ಞಾನಿಗಳು ಇವರೆಲ್ಲರಿಗೂ ಆದರ್ಶ ಪುರುಷ ಹಾಗೂ ರೈತರಿಗೆ ಜೀವನಾಡಿಯಾದ ವ್ಯಕ್ತಿತ್ವ ಸರ್ ಎಂ. ವಿಶ್ವೇಶರಯ್ಯ ರವರದ್ದು. ಯಾವುದೋ ಜಾತಿ, ಮತ ಇಂತಹ ವಿಷಯಗಳ ಆಧಾರದ ಮೇಲೆ ಅವರ ಬಗ್ಗೆ ವಿಮರ್ಶೆ ಮಾಡುವುದು ಬಹಳ ನೋವಿನ ಸಂಗತಿ. ಸರ್ ಎಂ. ವಿಶ್ವೇಶರಯ್ಯ ರವರನ್ನು ಒಬ್ಬ ವ್ಯಕ್ತಿಯಾಗಿ ನೋಡದೇ ದೈವ ಶಕ್ತಿಯಾಗಿ ನೋಡಬೇಕು ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು ಶಾಸಕ ಎಸ್.ಎ ರಾಮದಾಸ್ ತಿಳಿಸಿದರು.
ಸಮಾಜ ಸುಧಾರಕ ಮೋಕ್ಷಗುಂಡಂ ವಿಶ್ವೇಶ್ವರಯ್ಯ ನವರ ಜನ್ಮದಿನಾಚರಣೆಯ ಅಂಗವಾಗಿ ಶಾಸಕರು ಹಾಗೂ ಮಾಜಿ ಸಚಿವರಾದ ಎಸ್.ಎ.ರಾಮದಾಸ್ ಅವರು ನಗರದ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ನಲ್ಲಿ ಇರುವ ಸರ್ ಎಂ. ವಿಶ್ವೇಶರಯ್ಯ ರವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಮಾಲಾರ್ಪಣೆ ನಂತರ ಶಾಸಕರಾದ ಎಸ್.ಎ.ರಾಮದಾಸ್ ರವರು ಮಾತನಾಡಿ ಸರ್ ಎಂ. ವಿಶ್ವೇಶರಯ್ಯ ರವರು ಕೇವಲ ಒಬ್ಬ ಇಂಜಿನಿಯರ್ ಅಂತ ಮಾತ್ರ ಕರಿಯದೆ A Man of Vision ಎಂದರೆ ತಪ್ಪಾಗಲಾಗದು. ತಮ್ಮ ಜೀವತಾವಧಿಯಲ್ಲಿ ಕೋಟ್ಯಾಂತರ ಜನರಿಗೆ ಸೇವೆ ಮಾಡಿದ ಮಹಾತ್ಮ. 101 ವರ್ಷಗಳ ಕಾಲ ಸಾರ್ಥಕತೆ ಬದಕನ್ನು ಕಂಡಂತಹ ಸರ್ ಎಂ. ವಿಶ್ವೇಶರಯ್ಯ ರವರು ಪ್ರಪಂಚಕ್ಕೆ ಒಂದು ಮಾದರಿ. ಪ್ರಪಂಚಾಧ್ಯಂತ ಹಲವಾರು ದೇಶಗಳು ಅವರ ಕಾರ್ಯವೈಖರಿ ಹಾಗೂ ದೂರದೃಷ್ಠಿಯನ್ನು ಮೆಚ್ಚಗೆ ವ್ಯಕ್ತಪಡಿಸಿದ್ದಾರೆ.
ಒಂದು ವಿಸ್ಮಯವೆಂದರೆ ಅವರ ಮೆದುಳಿನ ಬಗ್ಗೆ ಸಂಷೋಧನೆ ನಡೆಸಬೇಕೆಂದು ಹಲವಾರು ದೇಶಗಳು ಅವರ ಮೆದುಳು ಬೇಕೆಂದು ಬೇಡಿಕೆಯಿಟ್ಟಿದ್ದರು. ದೇಶಾಧ್ಯಂತ ಅವರ ಹುಟ್ಟು ಹಬ್ಬವನ್ನು Engineer’s Day ಎಂದು ಹೇಳಿ ಆಚರಿಸುತ್ತಿದ್ದೇವೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆಯಂತೆ ಸರ್ ಎಂ. ವಿಶ್ವೇಶರಯ್ಯ ರವರು ಕೆಲಸ ನಿರ್ವಹಿಸಿದ ಕ್ಷೇತ್ರವಿಲ್ಲ. ಸರ್ ಎಂ. ವಿಶ್ವೇಶರಯ್ಯ ರವರು ಹಲವಾರು ವಿಷಯಗಳನ್ನು ಪ್ರಾಂಭಿಸಿದ ಮಹಾತ್ಮ. ಏಷ್ಯಾ ಖಂಡದಲ್ಲೇ ಪ್ರಪ್ರಥಮ ಬಾರಿಗೆ ವಿದ್ಯುತ್ ತಯಾರು ಮಾಡುವುದರ ಜೊತೆಗೆ ಅತಿ ಉದ್ದವಾದ ಪ್ರಸರಣ ಮಾರ್ಗವನ್ನು ಪ್ರಾರಂಭಿಸಿದರಲ್ಲದೆ Transmission ಮತ್ತು Distribution loss ಅನ್ನು ಪ್ರಪಂಚದಲ್ಲೇ ಅತೀ ಕಡಿಮೆ ರೀತಿಯಲ್ಲಿ ಕೊಟ್ಟಂತಹ ಪುಣ್ಯ ಪುರುಷ ಎಂದು ರಾಮದಾಸ್ ಗುಣಗಾನ ಮಾಡಿದರು.
ಅವರ ಸಾಧನೆಯ ಪಟ್ಟಿಯಲ್ಲಿ ಕೆ.ಆರ್.ಎಸ್, ಮೈಸೂರಿನ ಸ್ಯಾಂಡಲ್ ಫ್ಯಾಕ್ಟರಿ, ರೈಲ್ವೇ ವರ್ಕ್ ಶಾಪ್ ನ ಬೆಳವಣಿಗೆಗಳಿರಬಹುದು, ವಿಶ್ವೇಶ್ವರಯ್ಯ ಐರನ್ ಸ್ಟೀಲ್ ಇಂಡಸ್ಟ್ರಿ, ಸ್ಟೇಟ್ ಬ್ಯಾಂಕ್ ಆಫ ಮೈಸೂರು, ಮೈಸೂರು ವಿಶ್ವವಿದ್ಯಾಲಯ ಹೀಗೆ ಒಂದಲ್ಲಾ ಎರೆಡಲ್ಲಾ ನಿರಂತರವಾಗಿ ಯಾವುದೇ ಕ್ಷೇತ್ರವನ್ನು ನೋಡಿದಾಗ ಪ್ರಾರಂಭ ಮಾಡಿದ ಮೊದಲಿಗರಾಗಿ ಇವತ್ತು ಸಾರ್ಥಕವಾದ ಬದುಕನ್ನು ಕೊಟ್ಟವರು ನಮಗೆಲ್ಲರಿಗೆ ಆದರ್ಶ ಪುರುಷ.
ದೇಶದಲ್ಲಿ ಇರುವ ಭಾರತದ ಇಂಜಿನಿಯರ್ ಗಳು, ವಿಜ್ಞಾನಿಗಳು ಇವರೆಲ್ಲರಿಗೂ ಆದರ್ಶ ಪುರುಷ ಹಾಗೂ ರೈತರಿಗೆ ಜೀವನಾಡಿಯಾದ ವ್ಯಕ್ತಿತ್ವ ಸರ್ ಎಂ. ವಿಶ್ವೇಶರಯ್ಯ ರವರದ್ದು. ಯಾವುದೋ ಜಾತಿ, ಮತ ಇಂತಹ ವಿಷಯಗಳ ಆಧಾರದ ಮೇಲೆ ಅವರ ಬಗ್ಗೆ ವಿಮರ್ಶೆ ಮಾಡುವುದು ಬಹಳ ನೋವಿನ ಸಂಗತಿ. ಸರ್ ಎಂ. ವಿಶ್ವೇಶರಯ್ಯ ರವರನ್ನು ಒಬ್ಬ ವ್ಯಕ್ತಿಯಾಗಿ ನೋಡದೇ ದೈವ ಶಕ್ತಿಯಾಗಿ ನೋಡಬೇಕು ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು ಎಸ್.ಎ ರಾಮದಾಸ್ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕರಾದ ಎಂ.ಆರ್.ಬಾಲಕೃಷ್ಣ, ಮೈಸೂರು ಜಿಲ್ಲಾ ನಗರ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ.ಪ್ರಕಾಶ್, ಕೃಷ್ಣರಾಜ ಕ್ಷೆತ್ರ ಬಿಜೆಪಿ ಅಧ್ಯಕ್ಷರಾದ ಎಂ.ವಡಿವೇಲು, ಉಪಾಧ್ಯಕ್ಷ ಓಂಶ್ರೀನಿವಾಸ್, ಕಾರ್ಯದರ್ಶಿ ಪ್ರಸಾದ್ ಬಾಬು, ಬಂಗಾರಿ ಸುರೇಶ್, ಆದರ್ಶ್ ಉಪಸ್ಥಿತರಿದ್ದರು.
Key words: mysore- Sir M. Vishweswaraiah-A Man of Vision-MLA-SA Ramadas