ಮೈಸೂರು,ಸೆಪ್ಟಂಬರ್,28,2024 (www.justkannada.in): ಫಲಾನುಭವಿಗಳು ಗ್ಯಾರಂಟಿಗಳ ವಿರುದ್ಧ ಮಾತನಾಡಿದಾಗ ಸುಮ್ಮನೆ ಕೂರಬೇಡಿ ಗಟ್ಟಿ ಧ್ವನಿಯಿಂದ ಹೇಳಿ ಅವರ ಬಾಯಿ ಮುಚ್ಚಿಸಿ ಎಂದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ಕರೆ ನೀಡಿದರು.
ಮೈಸೂರು ವಿಶ್ವವಿದ್ಯಾನಿಲಯ ಮಾನಸಗಂಗೋತ್ರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ “ಗ್ಯಾರಂಟಿ ಯೋಜನೆಗಳು: ಬಡವರ ಸುರಕ್ಷತೆ ಮತ್ತು ಕಲ್ಯಾಣ” ಕೃತಿ ಬಿಡುಗಡೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ ಮಹದೇವಪ್ಪ, ಸಿಎಂ ಅವರು ಸುಮ್ಮನೆ ಎಲ್ಲವನ್ನ ಆಲಿಸುತ್ತ ಕೂತಿದ್ದಾರೆ. ಅವರು ನಿದ್ರೆ ಮಾಡುತ್ತಾ ಇದ್ದಾರೆ ಅಂತ ತಿಳಿದುಕೊಳ್ಳಬೇಡಿ. ಬೇಕಾದರೆ ಏನು ನಡಿಯುತು ಅಂತ ಕೇಳಿದ್ರೆ ಎಲ್ಲವನ್ನೂ ಹೇಳುತ್ತಾರೆ. ಅವರೊಬ್ಬ ಅಪ್ಪಟ ಚಿನ್ನ ಯಾವುದೇ ಆಸೆ ಆಮಿಷಗಳಿಗೆ ಒಳಗಾಗೋರಲ್ಲ. ನೇರ ನುಡಿಯ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ ನಮ್ಮ ಸಿದ್ದರಾಮಯ್ಯನವರು. ಅವರ ಬಗ್ಗೆ ನನಗೆ ಗೊತ್ತು. ಕೆಲವರಿಗೆ ಸಿದ್ದರಾಮಯ್ಯ ಅವರನ್ನ ಕಂಡರೆ ಹೊಟ್ಟೆ ಉರಿ. ಇವರು ಇರುವವರಗೆ ಖುರ್ಚಿ ನಮಗೆ ಸಿಗಲ್ಲ ಅಂತ ಹೊಟ್ಟೆ ಉರಿ. ಮಾತಾಡುತ್ತಾರೆ ಮಾತಾಡಿಕೊಳ್ಳಲಿ . ಆನೆ ಹೋಗ್ತಾ ಇರುತ್ತೆ ನರಿ ಕಾಯ್ತಾ ಇರುತ್ತೆ ಬೀಳುತ್ತೆ ಅಂತ ಎಂದು ಹೇಳುವ ಮೂಲಕ ವಿರೋಧಿಗಳಿಗೆ ಟಾಂಗ್ ಕೊಟ್ಟರು.
ಹಿಂದೆ ಅನ್ನಕ್ಕಾಗಿ ಭಾರಿ ಕಷ್ಟಪಡುತ್ತಿದ್ದರು. ಉಳ್ಳವರ ಮನೆಗೆ ಹೋಗಿ ನನ್ನ ಮಗುಗೆ ಒಂದಿಷ್ಟು ಅನ್ನಕೊಡಿ ಅಂತ ಕೇಳುತ್ತಿದ್ದರು. ನೊಂದ ಜನರಿಗೆ ಮುಕ್ತಿ ಕೊಡಬೇಕು ಅಂತ ಮೊದಲ ಬಾರಿಗೆ ಸಿಎಂ ಆದ ತಕ್ಷಣದಲ್ಲೇ ಅನ್ನಭಾಗ್ಯ ಘೋಷಣೆ ಮಾಡಿದರು. ಬಡವರಿಗೆ, ಶೋಷಿತರಿಗೆ ಸ್ವಾಭಿಮಾನದ ಬದುಕನ್ನ ಕಟ್ಟಿಕೊಳ್ಳವ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳನ್ನ ಸಿದ್ದರಾಮಯ್ಯ ಕೊಟ್ಟಿರುವುದು. ಗ್ಯಾರಂಟಿಗಳನ್ನ ಯಾರು ಬೇಡ ಎನ್ನುತ್ತಿದ್ದರು ಅವರೇ ಈಗ ಬೇರೆ ರಾಜ್ಯಗಳಲ್ಲೂ ಜಾರಿ ತರಲು ಮುಂದಾಗಿದ್ದಾರೆ. ಗ್ಯಾರಂಟಿ ಬಂದಾಗ ಬಹಳಷ್ಟು ಜನ ಹೇಳಿದರು. ನೀವೀಗ ಮಾಡಿದ್ರೆ ಕೂಲಿ ಕಂಬಳಕ್ಕೆ ಯಾರೂ ಬರಲ್ಲ ನೀವು ಮಾಡಬಾರದಿತ್ತು ಎಂದರು. ಅದಕ್ಕೆ ಸಿದ್ದರಾಮಯ್ಯ ಅವರು ಹೇಳಿದರು ಹೌದು ನಾನು ಕೊಟ್ಟಿದ್ದೇನೆ ಅವರು ಕೂತು ತಿನ್ನಲಿ ನೀವು ಹೋಗಿ ಕೆಲಸ ಮಾಡಿ ಎಂದು ಗಡಸು ಧ್ವನಿಯಲ್ಲೇ ಉತ್ತರಿದರು ಎಂದು ಹೇಳಿದರು.
ಸಿದ್ದರಾಮಯ್ಯ ಒಬ್ಬ ಅಪರೂಪದ, ಪ್ರಾಮಾಣಿಕ ರಾಜಕಾರಣಿ. ಅವರ ಜೊತೆ ನಾನು 40 ವರ್ಷಗಳಿಂದ ಇದ್ದೇನೆ. ಅವರು ಎಂದೂ ಸಂಸಾರ, ಕುಟುಂಬ ಅಂತ ಮೀಸಲಿಟ್ಟಿಲ್ಲ. ದಿನ ಪೂರ್ತಿ ಸಾರ್ವಜನಿಕರ ಸೇವೆಯಲ್ಲೇ ಕಾಲ ಕಳೆಯುತ್ತಾರೆ ಎಂದು ಹೆಚ್.ಸಿ ಮಹದೇವಪ್ಪ ನುಡಿದರು.
Key words: mysore, speak, guarantees, Minister, HC Mahadevappa