ಮೈಸೂರು,ಮಾರ್ಚ್,4,2021(www.justkannada.in): ಕಲಿಯುಗ ಆರಾಧ್ಯ ಪುರುಷ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಗುರುವೈಭವೊತ್ಸವ ಕಾರ್ಯಕ್ರಮ ಇದೇ ತಿಂಗಳ 15ನೇ ತಾರೀಖಿನಿಂದ ಆರಂಭವಾಗಿ 20ರವರೆಗೆ ನಗರದ ಸುಬ್ಬರಾಯನ ಕೆರೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನೆರವೇರಲಿದೆ.
ರಾಘವೇಂದ್ರ ಸ್ವಾಮಿಗಳ 400ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವ ಅಂಗವಾಗಿ 15ನೇ ತಾರೀಖಿನಂದು ಬೆಳಗ್ಗೆ 8 ಗಂಟೆಗೆ ಸಹಸ್ತ್ರ ಕಳಸ ಕ್ಷೀರಾಭಿಷೇಕ, 9 ಗಂಟೆಗೆ ನವಗ್ರಹ ಸಹಿತ ಮೃತ್ಯುಂಜಯ ಹೋಮ, 16ರಂದು ಬೆಳಗ್ಗೆ 9 ಗಂಟೆಗೆ ಪವಮಾನ ಹೋಮ, 17ರಂದು ಬೆಳಗ್ಗೆ 9 ಗಂಟೆಗೆ ಶ್ರೀ ಸೂಕ್ತ ಹೋಮ, 18ರಂದು ಬೆಳಗ್ಗೆ ಒಂಬತ್ತು ಗಂಟೆಗೆ ಶ್ರೀ ಲಕ್ಷ್ಮೀ ನಾರಾಯಣ ಹೋಮ, 20ರಂದು 8 ಗಂಟೆಗೆ ಪಂಚಾಮೃತ, 9 ಗಂಟೆಗೆ ಪುಷ್ಪಾರ್ಚನೆ ಮತ್ತು ಸುದರ್ಶನ ಹೋಮ, 11 ಗಂಟೆಗೆ ರಥೋತ್ಸವ ಕಾರ್ಯಕ್ರಮ ನೆರವೇರಲಿದೆ.
ರಾಘವೇಂದ್ರ ಸ್ವಾಮಿಗಳ 400ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, 21ರಂದು ಬೆಳಗ್ಗೆ ಎಂಟು ಗಂಟೆಗೆ ನಡೆಯಲಿರುವ ಶ್ರೀನಿವಾಸ ಕಲ್ಯಾಣ ಮಂಗಳ ಮಹೋತ್ಸವ ಕಾರ್ಯಕ್ರಮಕ್ಕೆ ಸೇವೆ ಸಲ್ಲಿಸಲು ಇಚ್ಚಿಸುವವರು ಶ್ರೀಮಠದ ವ್ಯವಸ್ಥಾಪಕರನ್ನು ಸಂಪರ್ಕಿಸಬಹುದು ಎಂದು ಮಠದ ಮುಖ್ಯಸ್ಥರಾದ ಬದ್ರಿನಾಥ್ ಅವರು ತಿಳಿಸಿದ್ದಾರೆ.
ಗುರುಸಾರ್ವಭೌಮರ ವರ್ಧಂತಿ ಮಹೋತ್ಸವದ ಅಂಗವಾಗಿ ಅಷ್ಟು ದಿನಗಳ ಕಾಲ ಅನ್ನದಾನ ಸೇವೆ ಏರ್ಪಡಿಸಲಾಗಿದೆ. ಅಲ್ಲದೆ, ಪ್ರತಿದಿನ ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಇದಲ್ಲದೆ, ಉದಯಾಸ್ತಮಾನ ಸಹಿತ ಅನ್ನದಾನ ಸೇವೆ, ಉದಯಾಸ್ತಮಾನ ಸಹಿತ ಹೋಮ , ಸಹಸ್ರ ಕಲಶ ಕ್ಷೀರಾಭಿಷೇಕ ಸೇವಾ, ಒಂದು ಕಲಶ ಕ್ಷೀರಾಭಿಷೇಕ, ಸಂಪೂರ್ಣ ಲಕ್ಷ ಪುಷ್ಪಾರ್ಚನೆ, ಹೂವಿನ ಅಲಂಕಾರ, ಫಲಪಂಚಾಮೃತ ಸಹಿತ ಅರ್ಚನೆ, ಶ್ರೀ ಗುರುರಾಯರಿಗೆ ಹಸ್ತೋದಕ ಸೇವೆಗಳನ್ನು ಸಲ್ಲಿಸಲು ಅವಕಾಶವಿದೆ ಎಂದು ತಿಳಿಸಿದ್ದಾರೆ.
Key words: mysore- Sri Raghavendra Swamy’s- Guru Vaibhavotsavam – March 15 to 20