SSLC ವಿದ್ಯಾರ್ಥಿಗಳ ಮನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ: ವಿದ್ಯಾರ್ಥಿಗಳಿಗೆ ಕಿವಿಮಾತು

ಮೈಸೂರು,ಫೆಬ್ರವರಿ,5,2025 (www.justkannada.in):  ಎಸ್ ಎಸ್ ಎಲ್ ಸಿ ಪರೀಕ್ಷೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ತಾಲ್ಲೂಕು ವ್ಯಾಪ್ತಿಯ ಶಾಲೆಗಳ SSLC  ವಿದ್ಯಾರ್ಥಿಗಳ ಫಲಿತಾಂಶವನ್ನು ಉನ್ನತೀಕರಿಸುವ ಅಭಿಯಾನದ ಅಂಗವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ  ಪ್ರಕಾಶ್ ಅವರು ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಸಲಹೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ  ಪ್ರಕಾಶ್ ಅವರು  ಮೈಸೂರು ತಾಲ್ಲೂಕಿನ  ಹಿನಕಲ್ ಸರ್ಕಾರಿ ಪ್ರೌಢಶಾಲೆಯ SSLC ವಿದ್ಯಾರ್ಥಿಗಳ ಮನೆ ಮನೆಗೆ ಭೇಟಿ ಕೊಟ್ಟು ಅವರ ಕಲಿಯುವಿಕೆಯ ಬಗ್ಗೆ ಪರಿಶೀಲಿಸಿ, ಕಲಿಕೆಯಲ್ಲಿ ತೊಡರುಗಳಿದ್ದಲ್ಲಿ ಶಾಲಾ ಮುಖ್ಯ ಶಿಕ್ಷಕರೊಂದಿಗೆ ಮತ್ತು  ಸಹಶಿಕ್ಷಕರೊಂದಿಗೆ ಚರ್ಚಿಸಿ ಅದನ್ನು ಬಗೆಹರಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ  ಕಿವಿಮಾತು ಹೇಳಿದರು.

ಅಲ್ಲದೆ ಪರೀಕ್ಷಾ ಸಮಯದಲ್ಲಿ ಅಧ್ಯಯನ, ಆರೋಗ್ಯ ಮತ್ತು ಸೇವಿಸುವ ಆಹಾರದ ಕಡೆ ಹೆಚ್ಚು ಗಮನಹರಿಸಿ SSLC ಪರೀಕ್ಷೆಗೆ ತಯಾರಿ ನಡೆಸುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ವಲಯ ಸಂಪನ್ಮೂಲ ವ್ಯಕ್ತಿ  ಶಿವಣ್ಣ, ಸಂಯೋಜಕರಾದ ಸುಬ್ಬಶೆಟ್ಟಿ, ಸದರಿ ಶಾಲೆಯ ಶಿಕ್ಷಕ ರಾಘವೇಂದ್ರ, ಜನಾರ್ಧನ್ ಹಾಗೂ ಇತರರು ಹಾಜರಿದ್ದರು.

Key words: Mysore, BEO, visits, SSLC students, homes