ಮೈಸೂರು,ಆ,16,2019(www.justkannada.in): ಶ್ರೀ ಸರಸ್ವತಿ ಸಾಧನ ಸಂಶೋಧನಾ ಸಂಸ್ಥೆ, ವತಿಯಿಂದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಹಾ ಸತ್ ಸಂಘ ಕಾರ್ಯಕ್ರಮವನ್ನ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಜೈನಮುನಿಗಳು ಸುಮಾರು 200 ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ.
ಮೈಸೂರಿನ ಊಟಿ-ಮೈಸೂರು ರಸ್ತೆಯಲ್ಲಿರುವ ಶ್ರೀ ಸಚ್ಛದಾನಂದ ಆಶ್ರಮದಲ್ಲಿ ಆಗಸ್ಟ್ 18 ರಂದು ಈ ಮಹಾ ಷಟ್ವದನ್ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮವನ್ನ ಗುಜರಾತ್ ನಿಂದ ಬಂದಿರುವ ಅಜಿತ್ ಚಂದ್ರ ಸಾಗರ ಮಹರಾಜರು ಮತ್ತು ಚಂದ್ರಪ್ರಭಾ ಸಾಗರ್ ಜೀ ಅವರು ನಡೆಸಿಕೊಡಲಿದ್ದಾರೆ. ಮೈಸೂರಿನ ಶ್ರೀ ಸುಮತಿನಾಥ್ ಜೈನ್ ಶ್ವೇತಾಂಬರ್ ಮೂರ್ತಿಪೂಜಕ್ ಸಂಘ ಮತ್ತು ಮಹಾಶಾತವ್ದನ್ ಸಮಿತಿ ವತಿಯಿಂದ ಕಾರ್ಯಕ್ರಮ ಆಯೋಜನೆಗೊಂಡಿದೆ.
ಅಜಿತ್ ಚಂದ್ರ ಸಾಗರ ಮಹಾರಾಜರು ಆತ್ಮಸಂಶೋಧನೆ ಶ್ರದ್ಧೆಯಿಂದ ಜ್ಞಾನಾರ್ಜನೆ ಪಡೆದಿದ್ದು ಅಂದು ಕೇಳುವ 200 ಪ್ರಶ್ನೆಗಳಿಗೆ ತಮ್ಮ ನೆನಪಿನ ಶಕ್ತಿಯಿಂದ ಉತ್ತರ ನೀಡಲಿದ್ದಾರೆ. ಹಾಗೆಯೇ ತಮ್ಮ ಅನುಭವವನ್ನ ಹಂಚಿಕೊಳ್ಳಲಿದ್ದಾರೆ. ಕಾರ್ಯಕ್ರಮ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2 ಗಂಟೆವರೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಉಚಿತ ಪ್ರವೇಶವಿದೆ. ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.
Key words: mysore-SSRF-jainmuni’s-function- maha sath sangha