ಸಂಗೊಳ್ಳಿರಾಯಣ್ಣ ಪ್ರತಿಮೆಗೆ ಅವಮಾನ ಖಂಡಿಸಿ ನಾಳೆ ಮೈಸೂರಿನಲ್ಲಿ ಪ್ರತಿಭಟನೆ…

ಮೈಸೂರು, ಆಗಸ್ಟ್, 25, 2020(www.justkannada.in) ; ಕ್ರಾಂತಿವೀರ  ಸಂಗೊಳ್ಳಿರಾಯಣ್ಣ  ಪ್ರತಿಮೆಗೆ ಅವಮಾನ ಖಂಡಿಸಿ ನಾಳೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ,ರಾಜ್ಯ ಕುರುಬ ಸಂಘಟನೆಗಳ ಒಕ್ಕೂಟದ ಸದಸ್ಯ ಗೋಪಿ ತಿಳಿಸಿದರು.

jk-logo-justkannada-logo

ಜಿಲ್ಲಾ ಪತ್ರಕರ್ತರ ಭವನದಲ್ಲಿ  ಸೋಮವಾರ ನಡೆದ ಸುದ್ದಿಗೋಷ್ಠಿ ಅವರು ಮಾತನಾಡಿ, ಬ್ರೀಟಿಷರ ವಿರುದ್ಧ ಹೋರಾಡಿದ ಅಪ್ರತಿಮ ಹೋರಾಟಗಾರ ಸಂಗೊಳ್ಳಿ ರಾಯಣ್ಣ. ಅಪ್ರತಿಮ ದೇಶಪ್ರೇಮಿಗೆ ಅವಮಾನ ಮಾಡುತ್ತಿರುವುದು ಖಂಡನೀಯ ಎಂದರು.

ರಾಯಣ್ಣನ ಪ್ರತಿಮೆ ಸ್ಥಳಾಂತರಗೊಳಿಸಿರುವುದು ಅಪರಾಧ. ರಾಜ್ಯ ಸರ್ಕಾರವೇ ರಾಯಣ್ಣನಿಗೆ ಅಪಮಾನ ಮಾಡುತ್ತಿದೆ. ಈ ಹಿನ್ನೆಲೆ ನಾಳೆ ಮೈಸೂರಿನ  ಡಿಸಿ ಕಚೇರಿ ಬಳಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ರಾಜ್ಯ ರೈತಸಂಘ, ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಕನ್ನಡ ಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಜೊತೆಗೂಡಲಿದ್ದಾರೆ. ಕೂಡಲೇ ರಾಜ್ಯ ಸರಕಾರ ಎಚ್ಚೆತ್ತುಕೊಂಡು ಪ್ರತಿಮೆ ಪುನರ್ ಪ್ರತಿಷ್ಠಾಪನೆ ಮಾಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

Key words: mysore-statue-Sangolli-Raiyanna-Protest-DC office