ನಾಲ್ವಡಿ ಅವರಿಗೆ ಸಮನಾಗಿ ವಿಶ್ವೇಶ್ವರಯ್ಯ ಅವರ ಪ್ರತಿಮೆ ನಿರ್ಮಿಸಿದ್ರೆ ಹೋರಾಟ-ಎಚ್ಚರಿಕೆ ನೀಡಿದ ಇತಿಹಾಸ ತಜ್ಞ ಪ್ರೊ. ನಂಜರಾಜ ಅರಸು..

ಮೈಸೂರು,ಜೂ,3,2020(www.justkannada.in): ಕೆ.ಆರ್.ಎಸ್. ಡ್ಯಾಂ ಎದುರು ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್.ಎಂ ವಿಶ್ವೇಶ್ವರಯ್ಯ ಇಬ್ಬರ ಪ್ರತಿಮೆ ಸಮನಾಗಿ ನಿರ್ಮಿಸಲು ನಮ್ಮ ವಿರೋಧವಿದೆ ಎಂದು ಇತಿಹಾಸ ತಜ್ಞ ಪ್ರೊ. ನಂಜರಾಜ ಅರಸು ತಿಳಿಸಿದ್ದಾರೆ.

ಕೆ.ಆರ್.ಎಸ್. ಡ್ಯಾಂ ಎದುರು ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್‌ ಎಂ. ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣ ಪ್ರಸ್ತಾಪ ವಿಚಾರಕ್ಕೆ ಸಂಬಂಧಿಸಿದಂತೆ  ಮೈಸೂರಿನಲ್ಲಿ ಮಾತನಾಡಿದ ಇತಿಹಾಸ ತಜ್ಞ ಪ್ರೊ. ನಂಜರಾಜ ಅರಸು ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣಕ್ಕೆ ನಮ್ಮ ವಿರೋಧವಿದೆ. ಕನ್ನಂಬಾಡಿ ಕಟ್ಟಿಸಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್. ವಿಶ್ವೇಶ್ವರಯ್ಯ ಒಂದೂವರೆ ವರ್ಷ ಇಂಜಿನಿಯರ್ ಆಗಿ ಕೆಲಸ ಮಾಡಿದ್ದರು. ಅದರ ಹೊರತಾಗಿ ಯಾವುದೇ ಮಹತ್ವದ ಕೊಡುಗೆ ಇಲ್ಲ. ಹೀಗಾಗಿ ಇಬ್ಬರ ಪ್ರತಿಮೆಯನ್ನೂ ಸಮಾನಾಗಿ ನಿರ್ಮಿಸುವುದಕ್ಕೆ ನಮ್ಮ ವಿರೋಧವಿದೆ ಎಂದು ಹೇಳಿದರು.

ಹಾಗೆಯೇ ಪ್ರತಿಮೆ ನಿರ್ಮಾಣದ ವಿಚಾರ ಗೊತ್ತಾಗುತ್ತಿದ್ದಂತೆ ನಾವು ಸಭೆ ಸೇರಿ ಚರ್ಚೆ ಮಾಡಿದ್ದೇವೆ. ಆ ವಿಚಾರವನ್ನು ಮನವಿ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ. ವಿಶ್ವೇಶ್ವರಯ್ಯ ಅವರ ಪ್ರತಿಮೆಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಮನಾಗಿ ನಿರ್ಮಿಸಿದರೆ ಹೋರಾಟ ಮಾಡುತ್ತೇವೆ ಎಂದು ಪ್ರೊ. ನಂಜರಾಜ ಅರಸು ಎಚ್ಚರಿಕೆ ನೀಡಿದ್ದಾರೆ.

Key words: mysore-  statue –Sir- M. Vishweshwaraiah – Nalwadi Krishnaraj wodeyar-history expert- Pro Nanjaraje aras