ಮೈಸೂರು,ಫೆಬ್ರವರಿ,12,2025 (www.justkannada.in): ಮೈಸೂರಿನ ಉದಯಗಿರಿ ಪೋಲಿಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು, 8 ಮಂದಿಯನ್ನ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ಸಿಸಿ ಟಿವಿ ಫೋಟೇಜ್ ಆಧರಿಸಿ ಪೋಲಿಸರು ಆರೋಪಿಗಳಿಗೆ ಬಲೆ ಬೀಸಿದ್ದರು. ಇದೀಗ ಕಲ್ಲು ತೂರಾಟದ ಸಮಯದಲ್ಲಿದ್ದವರನ್ನ ಪೊಲೀಸರು ಪತ್ತೆ ಮಾಡಿದ್ದು 8 ಮಂದಿಯನ್ನ ಬಂಧಿಸಿದ್ದಾರೆ. ಬಂಧಿತರ ಹೆಸರು ಈ ಕೆಳಕಂಡಂತಿದೆ.
1) ಸುಹೇಲ್ ಅಲಿಯಾಸ್ ಸೈಯದ್ ಸುಹೇಲ್ ಬಿನ್ ಸೈಯದ್ ಶಾಂತಿನಗರ,
2) ರಹೀಲ್ ಪಾಶಾ S/O ಕಲೀಲ್ ಪಾಶಾ, ಶಾಂತಿನಗರ
3)ಸೈಯದ್ ಸಾದಿಕ್ ಬಿನ್ ನವೀದ್, ಗೌಸಿಯಾ ನಗರ,
4)ಅಯಾನ್ ಬಿನ್ ಜಬೀವುಲ್ಲಾ, ಶಾಂತಿ ನಗರ,
5) ಏಜಾಜ್ ಬಿನ್ ಅಬ್ದುಲ್ ವಾಜೀದ್, ಸತ್ಯನಗರ,
6)ಸಾದಿಕ್ ಪಾಶಾ ಅ;ಲಿಯಾಸ್ ಸಾದಿಕ್ ಬಿನ್ ಖಾಲಿದ್ ಪಾಷಾ ,ರಾಜೀವ್ ನಗರ,
7)ಅರ್ಬಾಜ್ ಷರೀಫ್ s/o ಇಕ್ಬಾಲ್ ಶರೀಫ್, ರಾಜೀವ್ ನಗರ
8)ಶೋಹೇಬ್ ಪಾಷಾ s/o ಮಜೀದ್ ಪಾಷಾ, ಗೌಸಿಯಾ ನಗರ
ಇನ್ನು ಪ್ರಕರಣ ಸಂಬಂಧ ಮತ್ತಷ್ಟು ಆರೋಪಿಗಳ ಗುರುತು ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
Key words: Mysore, police station, Stone pelting, case, 8 arrested