ಮೈಸೂರು,ಡಿಸೆಂಬರ್,5,2023(www.justkannada.in): ಕಾಲೇಜು ವಿದ್ಯಾರ್ಥಿಯೊಬ್ಬ ಪ್ಲಾಸ್ಟಿಕ್ ಕವರ್ ನಿಂದ ಉಸಿರುಗಟ್ಟಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೈಸೂರಿನ ಮಾನಸಗಂಗೋತ್ರಿಯ ಪ್ರಾದೇಶಿಕ ಶಿಕ್ಷಣ ಸಂಸ್ಥೆ (RIE) ಸಂಸ್ಥೆಯ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ 17 ವರ್ಷದ ಅಕ್ಷಜ್ ಮೃತ ವಿದ್ಯಾರ್ಥಿ. ಶಿಕ್ಷಣ ಸಂಸ್ಥೆಯ ವಸತಿ ಗೃಹ-ಕಾವೇರಿ ಬ್ಲಾಕ್ ನ ರೂಂ ನಂ.11ರಲ್ಲಿ ಇಂದು ಸಂಜೆ ಘಟನೆ ಬೆಳಕಿಗೆ ಬಂದಿದೆ.
ಮೃತ ವಿದ್ಯಾರ್ಥಿ ಮೂಲತಃ ಹೈದರಾಬಾದ್ ನಿವಾಸಿ. ಈತ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎಂದು ಶಂಕಿಸಲಾಗಿದೆ. ಇದಕ್ಕೆ ಪೂರಕವಾಗಿ ವಿದ್ಯಾರ್ಥಿಯ ಕಾಲಲ್ಲಿ ಬ್ಲೇಡಿನಿಂದ ಕುಯ್ದುಕೊಂಡ ಹಳೆಯ ಗಾಯದ ಕಲೆಗಳು ಪತ್ತೆಯಾಗಿವೆ.
ನೋಡಲು ದೃಢಕಾಯನಾದ ಈ ವಿದ್ಯಾರ್ಥಿ ಪ್ಲಾಸ್ಟಿಕ್ ಕವರ್ ನಿಂದ ಮುಖ ಸುತ್ತಿಕೊಂಡು ಅದನ್ನು ಕತ್ತಿಗೆ ಬಿಗಿಯಾಗಿ ಕಟ್ಟಿ ಉಸಿರು ಕಟ್ಟಿಸಿಕೊಂಡು(self strangulation by using plastic cover) ಮೃತಪಟ್ಟರುವುದು ಹಲವು ಶಂಕೆಗೆ ಎಡೆ ಮಾಡಿದೆ.
Key words: Mysore- Student -commits -suicide