ಎನ್ ಟಿಎಂ ಶಾಲೆ ಉಳಿವಿಗೆ ಮುಂದುವರೆದ ಹೋರಾಟ: ಸಂಸದ ಪ್ರತಾಪ್ ಸಿಂಹ ವಿರುದ್ಧ ಪ್ರೊ.ಮಹೇಶ್ ಚಂದ್ರಗುರು ಕಿಡಿ.   

ಮೈಸೂರು,ಜುಲೈ,3,2021(www.justkannada.in): ಮೈಸೂರಿನ ಎನ್ ಟಿಎಂ ಶಾಲೆ ಕೆಡವಿ ಸ್ವಾಮಿ ವಿವೇಕಾನಂದರ ಸ್ಮಾರಕ ನಿರ್ಮಾಣಕ್ಕೆ ಮುಂದಾದ ಹಿನ್ನೆಲೆ,  ಶಾಲೆ ಉಳಿವಿಗಾಗಿ ನಡೆಸುತ್ತಿರುವ ಹೋರಾಟ ಮುಂದುವರೆದಿದ್ದು ಹಲವು ಸಂಘಟನೆಗಳು ಬೆಂಬಲ ನೀಡಿವೆ.jk

ಈ ನಡುವೆ ಎನ್‌ ಟಿಎಂ ಶಾಲೆ ಉಳಿಸಿ ಹೋರಾಟದಲ್ಲಿ ಪಾಲ್ಗೊಂಡು ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದ ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು, ಜಿಲ್ಲೆಯ ಜನರು, ಸಂಸ್ಕಾರವನ್ನು ಪ್ರತಿನಿಧಿಸಬೇಕಾದ ಸಂಸದ ಪ್ರತಾಪ್‌ಸಿಂಹ ಪುರೋಹಿತಶಾಹಿಗಳು, ವಾಣಿಜ್ಯ, ಕಾರ್ಪೋರೇಟ್ ಪರವಾಗಿ ಪ್ರತಿನಿಧಿಸುತ್ತಿರುವುದು ನೋವಿನ ಸಂಗತಿ. ಅವರು, ರಾಮಕೃಷ್ಣ ಆಶ್ರಮದ ವಿಚಾರದಲ್ಲಿ ವಕಾಲತ್ತು ವಹಿಸುತ್ತಿರುವ ಸಂಸದ ಪ್ರತಾಪ್ ಸಿಂಹ ಅವರು ಜಿಲ್ಲೆಯ ಜನರನ್ನು ಪ್ರತಿನಿಧಿಸದೆ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.

ಇದೇ ವೇಳೆ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ವಿರುದ್ದವೂ ಹರಿಹಾಯ್ದ ಪ್ರೊ. ಮಹೇಶ್ ಚಂದ್ರ ಗುರು, ಸಂಸದ ವಿ.ಶ್ರೀನಿವಾಸಪ್ರಸಾದ್ ಅವರು ಮುತ್ಸದ್ಧಿಯಂತೆ ಮಾತನಾಡಬೇಕು. ಆದರೆ ಅವರು ಆ ರೀತಿ ಮಾತನಾಡುತ್ತಿಲ್ಲ. ಇತಿಹಾಸವನ್ನು ಸರಿಯಾಗಿ ತಿಳಿದುಕೊಂಡಂತೆ ಮಾತನಾಡದೆ ರಾಜಕಾರಣಿ ರೀತಿ ಮಾತನಾಡುತ್ತಿದ್ದಾರೆ. ಎನ್‌ಟಿಎಂ ಶಾಲೆಯ ವಿಚಾರದಲ್ಲಿ ಸುಮ್ಮನಿರಬೇಕು.  ಇಲ್ಲದಿದ್ರೆ ಜನರ ಮುಂದೆ ಅವಮಾನಕ್ಕೀಡಾಗುತ್ತೀರಿ ಎಂದು ಕಿಡಿಕಾರಿದರು.

ಪ್ರವಚನ ನೀಡಿದ ಜಾಗ ಸದ್ವಿದ್ಯಾಶಾಲೆ, ನಿರಂಜನ ಮಠದಲ್ಲಿ. ಎನ್‌ಟಿಎಂ ಶಾಲೆಗೂ-ಸ್ವಾಮಿ ವಿವೇಕಾನಂದರಿಗೂ ಸಂಬಂಧವೇ ಇಲ್ಲ.  ಆದರೆ, ಶಾಲೆಗೆ ಥಳುಕು ಹಾಕುವ, ಜಾಗ ಕಬಳಿಸುವ ಕೆಲಸ ನಡೆದಿದೆ.  ಹೆಣ್ಣು ಮಕ್ಕಳ ಶಾಲೆಯ ಗೋಡೆಯನ್ನು ಕೆಡವಿ ಸ್ಮಾರಕ ನಿರ್ಮಾಣ ಮಾಡಿದರೆ ಸ್ವಾಮಿ ವಿವೇಕಾನಂದರ ಆತ್ಮಕ್ಕೂ ಶಾಂತಿ ಸಿಗುವುದಿಲ್ಲ. ರಾಮಕೃಷ್ಣಾಶ್ರಮದ ಸ್ವಾಮೀಜಿಯವರು ಹೆಣ್ಣು ಮಕ್ಕಳ ಶಾಲೆಗೆ ಮುಕ್ತಿ ನೀಡಬೇಕಾಗಿದೆ  ಎಂದು ಪ್ರೊ. ಮಹೇಶ್ ಚಂದ್ರಗುರು ತಿಳಿಸಿದರು.

ಕನ್ನಡ ಶಾಲೆಯನ್ನು ಉಳಿಸಬೇಕು.ಸ್ಮಾರಕವನ್ನು ನಿರ್ಮಿಸಬೇಕು

ಹಾಗೆಯೇ ಕನ್ನಡ ಶಾಲೆಯನ್ನು ಉಳಿಸಬೇಕು.ಸ್ಮಾರಕವನ್ನು ನಿರ್ಮಿಸಬೇಕು. ಆದರೆ, ಶಾಲೆ ಕೆಡವುದಕ್ಕೆ ವಿರೋಧವಿದೆ. ನಗರದ ನಾನಾ ಕಡೆಗಳಲ್ಲಿ ಸ್ಮಾರಕ ನಿರ್ಮಾಣ ಮಾಡಲು ಜಾಗವಿದೆ.  ಆದರೆ, ಸ್ಮಾರಕದ ಹೆಸರಿನಲ್ಲಿ ವಾಣಿಜ್ಯ ಕೇಂದ್ರವನ್ನಾಗಿ ಮಾಡಿಕೊಳ್ಳಲು  ಹುನ್ನಾರ ನಡೆದಿದೆ ಎಂದು ಶಂಕೆ ವ್ಯಕ್ತಪಡಿಸಿದ ಪ್ರೊ. ಮಹೇಶ್ ಚಂದ್ರಗುರು, ಸ್ವಾಮಿ ವಿವೇಕಾನಂದರ ಪ್ರೇರಣೆಯಿಂದಲೇ ಅಂದಿನ ದೇವರಾಜ ಒಡೆಯರ್ ಅವರು ಶಾಲೆ ನಿರ್ಮಿಸಿದ್ದರು. ಲಕ್ಷ್ಮಮ್ಮಣ್ಣಿ ಒಡೆಯರ್ ಅವರು ತಮ್ಮ ತನು-ಮನ-ಧನವನ್ನು ಅರ್ಪಿಸಿ ಶಾಲೆ ಆರಂಭಿಸಿದ್ದಾರೆ. ಈ ಶಾಲೆಯಲ್ಲಿ ಅತ್ಯಂತ ಕಡುಬಡವರು, ಹೊಟ್ಟೆ ತುಂಬಿರದ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.

ಹೈಕೋರ್ಟ್‌ ನಲ್ಲಿ ರಾಜ್ಯ ಸರ್ಕಾರ ಸರಿಯಾಗಿ ವಾದ ಮಾಡದೆ ಇರುವ ಕಾರಣ ತೀರ್ಪು ಬಂದಿದೆ. ಶಾಲೆ ಉಳಿಸಿಕೊಂಡು ಸ್ಮಾರಕ ನಿರ್ಮಿಸುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ಮಾಡಲಿಲ್ಲ . ಆದರೆ ಎನ್‌ಟಿಎಂ ಶಾಲೆಯನ್ನು ಉಳಿಸಲು ಅಹಿಂಸಾತ್ಮಕ ಹೋರಾಟ ಮಾಡಲಾಗುತ್ತಿದೆ ಎಂದು ಪ್ರೊ.ಮಹೇಶ್ ಚಂದ್ರಗುರು ತಿಳಿಸಿದರು.

ಎನ್ ಟಿಎಂ ಶಾಲೆ ಉಳಿವಿಗೆ ಆಮ್ ಆದ್ಮಿ ಪಾರ್ಟಿ ಮತ್ತು ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಎನ್ ಟಿಎಂ ಶಾಲೆ ಉಳಿವಿಗೆ ಹೋರಾಟ ಮುಂದುವರೆದಿದ್ದು, ನರದ ಎನ್‌ ಟಿಎಂ ಶಾಲೆ ಆವರಣದಲ್ಲಿ ಆಮ್ ಆದ್ಮಿ ಪಾರ್ಟಿ ಹಾಗೂ ವಿವಿಧ ಸಂಘಟನೆಗಳು  ಪ್ರತಿಭಟನೆ ನಡೆಸಿ ಸರ್ಕಾರದ  ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ವಿವೇಕಾನಂದರು ಪ್ರಬಲ ಜಾತಿಯವರಾಗಿದ್ದರೆ ಈ ವಿವಾದ ಬರುತ್ತಿರಲಿಲ್ಲ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಸಂಸದ ಪ್ರತಾಪ್ ಸಿಂಹ ವಿರುದ್ದದ ದಿಕ್ಕಾರ ಕೂಗಿದರು. ವಿವೇಕಾನಂದರನ್ನು ನಾವು ವಿಶ್ವಮಾನವರಾಗಿ ಕಾಣುತ್ತಿದ್ದೇವೆ. ಒಂದು ಜಾತಿಗೆ ಸೀಮಿತ ಮಾಡುತ್ತಿರುವುದು ಪ್ರತಾಪ್ ಸಿಂಹ. ಪ್ರತಾಪ್ ಸಿಂಹ ಒಬ್ಬ  ಅವಿವೇಕಿ ಸಂಸದ ಎಂದ ಪ್ರತಿಭಟನಾಕಾರರು ಟೀಕಿಸಿದರು.

Key words: mysore-survival – NTM school- continuing-struggle -Prof. Mahesh Chandraguru -against -MP Pratap simha