ಮೈಸೂರು,ಆ,7,2020(www.justkannada.in): ಕೇರಳದ ವೈನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಕಬಿನಿ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರು ಹೊರ ಬಿಡಲಾಗಿದ್ದು ಇದರಿಂದಾಗಿ ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿರುವ ಸೇತುವೆ ಮುಳುಗಡೆಯಾಗಿದೆ.
ಸುತ್ತೂರು ಸೇತುವೆ ಮುಳುಗಡೆ ಹಿನ್ನೆಲೆ ರಸ್ತೆ ಸಂಪರ್ಕವನ್ನ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಕಬಿನಿ ಜಲಾಶಯದಿಂದ ಹೆಚ್ಚು ನೀರು ಬಿಟ್ಟ ಪರಿಣಾಮ ಸುತ್ತೂರು ಸೇತುವ ಮುಳುಗಡೆಯಾಗಿದ್ದು, ರಸ್ತೆ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.
ಇನ್ನು ಸೇತುವೆ ಬಳಿ ಜನರ ಓಡಾಟಕ್ಕೂ ಬ್ರೇಕ್ ಹಾಕಲಾಗಿದ್ದು, ಪೋಲಿಸರನ್ನ ನಿಯೋಜಿಸಿ ಬಂದೋಬಸ್ತ್ ಮಾಡಲಾಗಿದೆ. ಈ ಹಿಂದೆಯೂ ಪ್ರವಾಹ ಬಂದಾಗ ಸುತ್ತೂರು ಸೇತುವೆ ಮುಳುಗಡೆಯಾಗಿತ್ತು. ಆ ವೇಳೆ ಸುತ್ತೂರು ಶ್ರೀಗಳಿಂದ ಪೊಜೆ ಕೂಡ ನೇರವೇರಿತ್ತು.
Key words: mysore- suttur- Bridge- sink.-Road -Temporary Bandh