ಮೈಸೂರು,ಸೆಪ್ಟಂಬರ್,15,2021(www.justkannada.in): ವಿವೇಕ ಸ್ಮಾರಕ ಮತ್ತು ಎನ್ ಟಿಎಂ ಶಾಲೆ ವಿವಾದ ಸಂಬಂಧ ಜಾಗಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲನೆ ನಡೆಸದೇ ಇರುವುದು ಎಷ್ಟು ಸರಿ? ದಾಖಲೆ ಪರಿಶೀಲಿಸಿ ಜಾಗ ಯಾರಿಗೆ ಸೇರಿದ್ದು ಎಂಬುದನ್ನ ನಿರ್ಧರಿಸಲಿ. ಆದರೆ ಆ ಕೆಲಸವನ್ನು ಡಿಸಿ ಹಾಗೂ ಕಮಿಷನರ್ ಇಬ್ಬರೂ ಮಾಡ್ತಿಲ್ಲ. ಹೀಗಾಗಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರ ಮೇಲೆ ನ್ಯಾಯಾಂಗ ನಿಂದನೆ ಪ್ರಕರವನ್ನು ದಾಖಲು ಮಾಡಲಿದ್ದೇವೆ ಎಂದು ರಾಮಕೃಷ್ಣ ಆಶ್ರಮದ ಪರ ವಕೀಲ ಅರುಣ್ ಕುಮಾರ್ ತಿಳಿಸಿದರು.
ಈ ಕುರಿತು ಇಂದು ರಾಮಕೃಷ್ಣ ಆಶ್ರಮದ ಸ್ವಾಮೀಜಿ ಮುಕ್ತಿದಾನಂದ ಸ್ವಾಮೀಜಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದರು. ಈ ವೇಳೆ ಮಾತನಾಡಿದ ಆಶ್ರಮದ ಪರ ವಕೀಲ ಅರುಣ್ ಕುಮಾರ್, 1915 ನಲ್ಲಿ ಮಹಾರಾಜರ ಸಂಸ್ಥಾನವು ನಿರಂಜನ ಮಠ ವನ್ನು ಅಕ್ವೇರ್ ಮಾಡಿ ಶಾಂತಲಾ ಟಾಕೀಸ್ ಬಳಿ ಇರುವ ಅನಾಥಾಲಯ ಬಳಿ ಪರ್ಯಾಯ ವ್ಯವಸ್ಥೆ ನೀಡಿ ಅವಕಾಶ ಕಲ್ಪಿಸಲಾಯಿತು. ಇದನ್ನ ದಾಖಲೆಯ ವಿಶ್ಲೇಷಣೆ ಮಾಡಲಾಗಿದೆ. ನಿರಂಜನ ಮಠ ಎಲ್ಲಾ ಸಮಾಜದ ಅನಾಥಾಲಯ ಎಂಬುದರ ಬಗ್ಗೆ ದಾಖಲೆ ಇದೆ. 1972 ರಲ್ಲಿ ಅತಿಕ್ರಮಣ ಮಾಡಿದ್ದ ಒಬ್ಬ ವ್ಯಕ್ತಿಯ ಮೇಲೆ ಕೋರ್ಟ್ ನಲ್ಲಿ ದಂಡವನ್ನು ವಿಧಿಸಲಾಯಿತು. ಸರ್ಕಾರದ ನಿರ್ಧಿಷ್ಟ ಪಡಿಸಿರುವ ಚಕ್ ಬಂದಿ ಅಡಿಯಲ್ಲಿ ಆಶ್ರಮದ ಆಸ್ತಿ ಇದೆ. ಎಲ್ಲಾ ದಾಖಲೆಯನ್ನು ಇಟ್ಟು ಕೊಂಡಿದ್ದರೂ ಆಶ್ರಮದ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದೆ. ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ ನಾವು ಸ್ಮಾರಕ ನಿರ್ಮಾಣ ಕಾರ್ಯವನ್ನು ಮುಂದೆ ಹಾಕಿದ್ದೇ ತಪ್ಪ? ನಾವು ನುಗ್ಗಿ ಗಲಾಟೆ ಮಾಡುವುದಿರುವುದೇ ನಮ್ಮ ದೌರ್ಬಲ್ಯವೇ? ಎಂದು ಪ್ರಶ್ನಿಸಿದರು.
ನಂದಿ ವಿಗ್ರಹಗಳನ್ನು ನೋಡಿದರೆ ಒಂದು ಸಮಾಜಕ್ಕೆ ಮಾತ್ರ ಸೀಮಿತ ಅನ್ನುವುದು ತಪ್ಪು. ಮೈಸೂರು ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಕಮೀಷನರ್ ನಗರಕ್ಕೆ ಕಪ್ಪುಚುಕ್ಕಿ. ಜಾಗಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲನೆ ನಡೆಸದೇ ಇರುವುದು ಎಷ್ಟು ಸರಿ? ದಾಖಲೆ ಪರಿಶೀಲಿಸಿ ಜಾಗ ಯಾರಿಗೆ ಸೇರಿದ್ದು ಎಂಬುದನ್ನ ನಿರ್ಧರಿಸಲಿ. ಆದರೆ ಆ ಕೆಲಸವನ್ನು ಡಿಸಿ ಹಾಗೂ ಕಮಿಷನರ್ ಇಬ್ಬರೂ ಮಾಡ್ತಿಲ್ಲ. ಪ್ರತಿಭಟನಾಕಾರರ ಬಳಿ ದಾಖಲೆ ಪರಿಶೀಲನೆ ನಡೆಸದೆ ಪ್ರತಿಭಟನೆಗೆ ಅವಕಾಶ ನೀಡಿರುವುದು ಸರಿ ಅಲ್ಲ ಎಂದು ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಕ್ತಿದಾನಂದ ಸ್ವಾಮೀಜಿ, ರಾಮಕೃಷ್ಣ ಅಶ್ರಮ ಅನಾಥ ಇದೆ. ನಾವು ಸೇವೆಯೇ ಸತ್ಯ ಅಂತಾ ನಂಬಿದವರು. ನಾವು ಸ್ಮಾರಕ ನಿರ್ಮಾಣಕ್ಕೆ ಮುಂದಾದಾಗ ಇಷ್ಟೊಂದು ತೊಂದರೆ ನೀಡಿದ್ರು. ಅಲ್ಲಿದ್ದಂತಹ ದಕ್ಷಿಣಾ ಮೂರ್ತಿಗೆ ಮಂಟಪ ನಿರ್ಮಾಣ ಮಾಡಿದ್ದೇವೆ. ಅದರ ನಿರ್ಮಾಣಕ್ಕೆ ಮುಂದಾದಾಗ ಪೊಲೀಸರು ನಮ್ಮನ್ನು ತಡೆದಿದ್ದಾರೆ. ಪೊಲೀಸರ ಕಾನೂನು ನಮಗೆ ಮಾತ್ರ ಅನ್ವಯ ಆಗುತ್ತಾ..? ಎಂದು ಪ್ರಶ್ನಿಸಿದರು.
Key words: mysore-swami viveka smaraka-NTM school-ramakrisna asrama