ಮೈಸೂರು,ಜೂನ್,2,2021(www.justkannada.in): ರಾಜ್ಯದಲ್ಲಿ ಕೋರೊನಾ 2ನೇ ಅಲೆ ನಗರ ಪ್ರದೇಶಗಳ ಜತೆ ಗ್ರಾಮೀಣ ಭಾಗಕ್ಕೂ ಹೆಚ್ಚಾಗಿ ವ್ಯಾಪಿಸಿದೆ. ಹಳ್ಳಿಗಳಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಈ ಮಧ್ಯೆ ಮೈಸೂರು ತಾಲ್ಲೂಕಿನ 14 ಹಳ್ಳಿಗಳು ಮಾತ್ರ ಕೊರೋನಾಗೆ ಪ್ರವೇಶ ನೀಡಿಲ್ಲ.
ಹೌದು, ಮೈಸೂರು ತಾಲ್ಲೂಕಿನ 14 ಗ್ರಾಮಗಳಲ್ಲಿ ಈಗಲೂ ಶೂನ್ಯ ಕೋವಿಡ್ ಪ್ರಕರಣ ಕಂಡು ಬಂದಿದ್ದು, ಇತರೆ ಹಳ್ಳಿಗಳಿಗೆ ಮಾದರಿಯಾಗಿವೆ. ಮೈಸೂರು ತಾಲ್ಲೂಕಿನ ಗ್ರಾಮೀಣ ಭಾಗದಲ್ಲೇ ಹೆಚ್ಚು ಕೊರೋನಾ ಪ್ರಕರಣ ಕಂಡು ಬಂದಿರೂ ಸಹ ತಾಲ್ಲೂಕು ವ್ಯಾಪ್ತಿಯ 37 ಗ್ರಾ.ಪಂಗಳಲ್ಲಿ 11 ಗ್ರಾಮ ಪಂಚಾಯತಿಗೆ ಸೇರುವ 14 ಗ್ರಾಮಗಳಲ್ಲಿ ಶೂನ್ಯ ಪ್ರಕರಣ ಕಂಡು ಬಂದಿದೆ.
ಮಾದಗಳ್ಳಿ, ರಾಯನಕೆರೆ, ಕಟ್ಟೆಹುಂಡಿ, ಕುಂಬ್ರಳ್ಳಿ, ಚಿಕ್ಕೇಗೌಡನಹುಂಡಿ, ಕೃಷ್ಣಪುರ, ರಾಮನಹಳ್ಳಿ, ಗುಡುಮಾದನಹಳ್ಳಿ, ಇನಮ್ ಉತ್ತನಹಳ್ಳಿ, ಲಕ್ಷ್ಮೀಪುರ, ಮಾಕನಹುಂಡಿ, ಹಂಚ್ಯಾಹುಂಡಿ, ಹೊಸಹುಂಡಿ, ಗುರುಕಾರಪುರ ಗ್ರಾಮಗಳು ಕೋವಿಡ್-19 ಗೆ ಪ್ರವೇಶ ನೀಡದ ಹಳ್ಳಿಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ.
Key words: Mysore Taluk- 14 villages -covid case -zero