ಮೈಸೂರು,ಜೂ,15,2020(www.justkannada.in): ವಿಧವೆ ವೇತನ, ವೃದ್ದಾಪ್ಯ ವೇತನ, ಅಂಗವಿಕಲರ ವೇತನ ರಿನವಲ್ ಗೆ ಟೋಕನ್ ಪಡೆಯಲು ಕಿತ್ತಾಟ, ಕೇಳೊರಿಲ್ಲ ವೃದ್ಧರು ಮತ್ತು ಅಂಗವಿಕಲರ ಗೋಳು, ಕೊರೋನಾ ಭೀತಿ ನಡುವೆ ಅವ್ಯವಸ್ಥೆ ಆಗರವಾದ ಮೈಸೂರು ತಾಲ್ಲೂಕು ಕಚೇರಿ…
ಹೌದು ಮೈಸೂರು ತಾಲ್ಲೂಕು ಕಚೇರಿ ಅವ್ಯವಸ್ಥೆ ತಾಣವಾಗಿ ಕಂಡು ಬಂದಿದೆ. ವಿಧವೆ ವೇತನ, ವೃದ್ದಾಪ್ಯ ವೇತನ, ಅಂಗವಿಕಲರ ವೇತನ ರಿನವಲ್ ಗಾಗಿ ಇಲ್ಲಿಗೆ ಬರುವವರು ಟೋಕನ್ ಪಡೆಯಲು ಹರಸಾಹಸಪಡುವಂತಾಗಿದೆ. ಪ್ರತಿದಿನ ತಾಲ್ಲೂಕು ಆಡಳಿತ ನೂರು ಮಂದಿಗೆ ಟೋಕನ್ ನೀಡುತ್ತಿದ್ದು, ವೃದ್ಧರು, ಅಂಗವಿಕಲರು, ವಿಧವೆಯರು ಈ ಟೋಕನ್ ಪಡೆಯುವುದಕ್ಕಾಗಿ ಬೆಳಗ್ಗೆ 5 ಗಂಟೆಯಿದಲೇ ಸಾಲುಗಟ್ಟಿ ನಿಂತಿರುತ್ತಾರೆ.
ಆದರೆ ಎಷ್ಟೇ ಹೊತ್ತು ಕಾದರೂ ಸಹ ಕಚೇರಿ ಓಪನ್ ಗೆ ಮೊದಲೇ ಈ ದಿನದ ಟೋಕನ್ ನೀಡಲಾಗಿದೆ ಎಂಬ ಬೊರ್ಡ್ ಹಾಕಲಾಗಿದ್ದು ಇದರಿಂದಾಗಿ ವೃದ್ಧರು, ಅಂಗವಿಕಲರು, ವಿಧವೆಯರು ನಿರ್ದಿಷ್ಟ ಮಾಹಿತಿ ಇಲ್ಲದೆ ಪರದಾಡುವಂತಾಗಿದೆ. ಈ ಮೂಲಕ ಕೊರೋನಾ ಭೀತಿ ನಡುವೆ ಮೈಸೂರು ತಾಲ್ಲೂಕು ಕಚೇರಿ ಅವ್ಯವಸ್ಥೆ ಆಗರವಾಗಿ ಮಾರ್ಪಟ್ಟಿದೆ.
Key words: mysore- taluk-office –untidiness-corona