ಗಣರಾಜ್ಯೋತ್ಸವದಂದು ಗಮನ ಸೆಳೆದ ಮೈಸೂರು ಟಾಂಗವಾಲ..!

 

ಮೈಸೂರು, ಜ.26, 2020 : (www.justkannada.in news  ) ಇಂದು ದೇಶದೆಲ್ಲೆಡೆ ಗಣರಾಜ್ಯೋತ್ವಸದ ಸಡಗರ ಸಂಭ್ರಮ. ರಾಜಕಾರಣಿಗಳು ಧ್ವಜ ಹಾರಿಸಿ ಆಶ್ವಾಸನೆಗಳನ್ನು ನೀಡುವುದರಲ್ಲಿ ನಿರತರಾದ್ರೆ, ಶಾಲಾ ಮಕ್ಕಳಿಗೆ ಸಿಹಿ ತಿಂದು ಸಂಭ್ರಮಿಸುವ ಸಡಗರದ ದಿನ.

ಆದರೆ, ನಗರದಲ್ಲಿ  ಜಟಕಾ ಕುದುರೆ ಗಾಡಿ ಓಡಿಸುವ ಸಾಧಿಕ್ ಪಾಷಗೆ ಮಾತ್ರ ಹಬ್ಬದ ಸಂಭ್ರಮ. ಈತ ತಾನು ನಿತ್ಯ ಪ್ರವಾಸಿಗರನ್ನು ಕೂರಿಸಿಕೊಂಡು ಮೈಸೂರು ಸುತ್ತಿಸುವ ಟಾಂಗಾ ಕುದುರೆಗೆ ಸಿಂಗಾರ ಮಾಡಿ ಗಣರಾಜ್ಯೋತ್ಸವ ಆಚರಿಸಿದ್ದು ವಿಶೇಷ.

ನಗರದ ಗಣರಾಜ್ಯೋತ್ಸವದ ವಿಶೇಷತೆಗಾಗಿ  ಜಸ್ಟ್ ಕನ್ನಡ – ‘ ಕ್ಯಾಮೆರಾ ಕಣ್ಣು ‘ ಹುಡುಕುತ್ತಿರುವಾಗ ಮೈಸೂರಿನ ಪುರಭವನದ ಬಳಿ ಸಿಕ್ಕವನೇ ಸಾಧಿಕ್ ಪಾಷ. ಲಷ್ಕರ್ ಮೊಹಲ್ಲ ನಿವಾಸಿಯಾದ 35 ವರ್ಷದ ಈತ  ಎರಡು ಹೆಣ್ಣು, ಒಂದು ಗಂಡು ಮಗುವಿನ ತಂದೆ. ವಿದ್ಯಾಭ್ಯಾಸ ವಂಚಿತನಾದ ಸಾಧಿಕ್ ಗೆ ಮಕ್ಕಳನ್ನು ಚೆನ್ನಾಗಿ ಓದಿಸುವ ಆಸೆ. ನಾನಂತು ಓದಲಿಲ್ಲ, ನನ್ನ ಮಕ್ಕಳಾದ್ರು ನಾಲ್ಕಕ್ಷರ ಕಲಿಯಲಿ ಎಬುದು ಆತನ ಬಯಕೆ. ಆದ್ದರಿಂದಲೇ ನಿತ್ಯ ಟಾಂಗ ಓಡಿಸುವ ಕಾಯಕದಲ್ಲಿ ನಿರತ.

ಇಂದು ಗಣರಾಜ್ಯೋತ್ಸವದ ವಿಶೇಷ. ಆದ್ದರಿಂದಲೇ ಸಾದಿಕ್ ಮುಂಜಾನೆ 5 ಕ್ಕೆ ಎದ್ದು ತನ್ನ ಟಾಂಗಾ ಗಾಡಿಯ ಕುದುರೆಗಳಿಗೆ ರಾಷ್ಟ್ರ ಧ್ವಜ ನೆನಪಿಸುವಂತೆ ‘  ಕೆಸರಿ-ಬಿಳಿ-ಹಸಿರು ‘  ಬಣ್ಣಗಳಿಂದ ಸಿಂಗರಿಸಿ ಆಮೂಲಕ ಪ್ರವಾಸಿಗರಿಗೆ ಜ.26 ಮಹತ್ವವನ್ನು ನೆನೆಪಿಸುವ ಹಂಬಲ.

ಸಾದಿಕ್ ಪಾಷರ ಈ ಪ್ರಯತ್ನ ಬಹುತೇಕ  ಯಶಸ್ವಿಯಾಯಿತು ಎನ್ನಲೇ ಬೇಕು. ಕಾರಣ, ನಗರದ ಹೃದಯಭಾಗದಲ್ಲಿ ಟಾಂಗಾ ಕುದುರೆಗಳಿಗೆ ಸಿಂಗಾರ ಮಾಡುತ್ತಿದ್ದ ಕಾರಣ ಅದು ದಾರಿಹೋಕರನ್ನು ಕೆಲ ಕ್ಷಣ  ನಿಲ್ಲುವಂತೆ ಆಕರ್ಷಿಸುತ್ತಿತ್ತು. ಯುವಕ-ಯುವತಿಯರು ಸಿಂಗಾರಗೊಂಡ ಟಾಂಗಾ ಕುದುರೆ ಜತೆ ಫೋಟೋ ಕ್ಲಿಕ್ಕಿಸಿ ಸಂಭ್ರಮಿಸುತ್ತಿದ್ದರು.

 

Key words : mysore-tangawala-horse-coloured-republic.day-celebration