ಮೈಸೂರು, 31 ಡಿಸೆಂಬರ್ 2021 (www.justkannada.in): ಟ್ರಾವೆಲ್ಸ್ ಉದ್ಯಮದಲ್ಲಿ ಸಾಕಷ್ಟು ಅನುಭವ ಇಲ್ಲದಿದ್ದರೂ ಅರಮನೆ ನಗರಿ ಮೈಸೂರಿನಲ್ಲಿ ಮಂಗಳೂರಿನ ಯುವಕನೊಬ್ಬ ಆರಂಭಿಸಿದ ‘ಮೈಸೂರು ಟ್ಯಾಕ್ಸಿವಾಲ’ ಹದಿನೈದು ವಸಂತಕ್ಕೆ ಕಾಲಿಡುತ್ತಿದೆ.
ಹೌದು. ಮೈಸೂರಿನಲ್ಲಿ 2007 ಆರಂಭವಾದ ‘ಮೈಸೂರು ಟ್ಯಾಕ್ಸಿವಾಲ’ ಹದಿನೈದನೇ ವರ್ಷದ ಸಂಭ್ರಮದಲ್ಲಿದೆ. ಮೂಲತಃ ಮಂಗಳೂರಿನವರಾದ ಎಲ್.ಚೇತನ್ ಕುಮಾರ್ 2004ರಲ್ಲಿ ಪಾರ್ಟ್ ಟೈಮ್ ಕೆಲಸವೆಂದು ಆರಂಭಿಸಿದ್ದ ಟ್ರಾವೆಲ್ಸ್ ಉದ್ಯಮದತ್ತ ಹೆಜ್ಜೆ ಇಟ್ಟಿದ್ದರು. ಸ್ನೇಹಿತರ ಕಾರೊಂದರಲ್ಲಿ ಆರಂಭಿಸಿದ್ದ ಉದ್ಯೋಗ ಈಗ ಉದ್ಯಮವಾಗಿ ಬದಲಾಗಿದೆ. ಬಳಿಕ ಇದಕ್ಕೆ ಒಂದು ಸ್ಪಷ್ಟ ರೂಪ ಕೊಟ್ಟು 2007ರಲ್ಲಿ ‘ಮೈಸೂರು ಟ್ಯಾಕ್ಸಿವಾಲ’ ಎಂದು ನಾಮಕರಣ ಮಾಡಿದ್ದರು. ಉದ್ಯಮದ ಮತ್ತೊಂದು ಮಗ್ಗಲಿಗೆ ಹೊರಳಿದ್ದರು. ಅದೀಗ ಮೈಸೂರು ಟ್ಯಾಕ್ಸಿವಾಲಾ ಮೈಸೂರು ಮಾತ್ರವಲ್ಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೇವೆ ಸಲ್ಲಿಸುತ್ತಿದೆ.
ಮೈಸೂರಿನ ಹೆಸರು ಎಲ್ಲೆಡೆ…
ಆರಂಭದಲ್ಲಿ ಮೈಸೂರಿನಲ್ಲಿ ಮಾತ್ರ ಸೇವೆ ಆರಂಭಿಸಿದ್ದ ಮೈಸೂರು ಟ್ಯಾಕ್ಸಿವಾಲ ಇದೀಗ ಕರ್ನಾಟಕದ ಹಲವು ಜಿಲ್ಲೆಗಳಿಗೆ ಸೇವೆ ವಿಸ್ತರಿಸಿದೆ. ಬೆಂಗಳೂರು, ಮಂಡ್ಯ, ಚಿಕ್ಕಮಗಳೂರು, ಮಂಗಳೂರು, ಉಡುಪಿ, ಮಣಿಪಾಲ್, ಬೆಳಗಾವಿ, ಗದಗ ಸೇರಿದಂತೆ ಉತ್ತರ ಕರ್ನಾಟಕದಲ್ಲೂ ಸೇವಾ ಕ್ಷೇತ್ರವನ್ನು ವಿಸ್ತರಿಸಲಾಗಿದೆ. ಇದರ ಜತೆಗೆ ಮುಂದಿನ ದಿನಗಳಲ್ಲಿ ದೆಹಲಿ, ಚೆನ್ನೈ, ಕೊಚ್ಚಿನ್, ಮುಂಬೈ ಸೇರಿದಂತೆ ಹೊರ ರಾಜ್ಯಗಳಿಗೂ ವಿಸ್ತರಣೆ ಮಾಡುವ ಯೋಜನೆ ಎನ್ನುತ್ತಾರೆ ಮೈಸೂರು ಟ್ಯಾಕ್ಸಿವಾಲ ಸಂಸ್ಥಾಪಕ ಚೇತನ್ ಕುಮಾರ್.
ಎಲ್ಲೆಡೆ ಒಂದೇ ದರ, 1.5 ಲಕ್ಷ ಗ್ರಾಹಕರಿಗೆ ಸೇವೆ
ರಾಜ್ಯದ ಹಲವು ಜಿಲ್ಲೆಗಳಲ್ಲಿಯೂ ಮೈಸೂರು ಟ್ಯಾಕ್ಸಿವಾಲ ಹೆಸರಿನಲ್ಲೇ ಸೇವೆ ಸಲ್ಲಿಸುತ್ತಿರುವ ಈ ಸಂಸ್ಥೆ ವಿಶೇಷ ಎಂದರೆ ಎಲ್ಲ ಕಡೆ ಒಂದೇ ದರ. ಬೇರೆ ಬೇರೆ ಜಿಲ್ಲೆಗಳಲ್ಲಿ ದರದಲ್ಲಿ ಸಾಕಷ್ಟು ಬದಲಾವಣೆ ಇದೆ. ಆದರೆ ಮೈಸೂರು ಟ್ಯಾಕ್ಸಿವಾಲ ಎಲ್ಲ ಜಿಲ್ಲೆಗಳ ಗ್ರಾಹಕರಿಗೆ ಒಂದೇ ರೀತಿಯ ದರದಲ್ಲಿ ಸೇವೆ ಒದಗಿಸುತ್ತಿದೆ. ಒಂದು ವಾಹನದಿಂದ ಆರಂಭವಾದ ಸೇವೆ ಸದ್ಯ 90ಕ್ಕೂ ಹೆಚ್ಚು ವಾಹನಗಳನ್ನು ಒಳಗೊಂಡಿದೆ. 1.5 ಲಕ್ಷ ಗ್ರಾಹಕರಿಗೆ ಸೇವೆ ಒದಗಿಸಿರುವ ಟ್ಯಾಕ್ಸಿ ವಾಲಾ ರಾಜ್ಯದ ವಿವಿಧೆಡೆ 2 ಕೋಟಿ ಕಿಮೀಗೂ ಹೆಚ್ಚು ದೂರವನ್ನು ಕ್ರಮಿಸಿದೆ.
ಕೇಂದ್ರಿಕೃತ ಕಾಲ್ ಸೆಂಟರ್ ಸೇವೆ
ಗ್ರಾಹಕರ ಅನುಕೂಲಕ್ಕಾಗಿ ಕೇಂದ್ರಿಕೃತ ಕಾಲ್ ಸೆಂಟರ್ ಸೇವೆಯನ್ನು ಕಲ್ಪಿಸಿರುವ ಮೈಸೂರು ಟ್ಯಾಕ್ಸಿವಾಲ, ಮಲ್ಟಿಪಲ್ ಬುಕ್ಕಿಂಗ್ ಮಾಡಲು ಅವಕಾಶ ನೀಡಿದೆ. ಎಲ್ಲ ವಾಹನಗಳಲ್ಲಿ ಜಿಪಿಎಸ್ ವ್ಯವಸ್ಥೆ ಸೇರಿದಂತೆ ಪ್ರಸ್ತುತ ಕೋವಿಡ್ ಮಾರ್ಗಸೂಚಿ ಪಾಲಿಸಿ, ಸ್ಯಾನಿಟೈಸ್, ಲಸಿಕೆ ಹಾಕಿಸಿರುವ ಚಾಲಕರನ್ನು ಸೇವೆ ನೀಡುತ್ತಿದೆ.
ಸೆಲೆಬ್ರೆಷನ್ ಇಯರ್!
ಮೈಸೂರು ಟ್ಯಾಕ್ಸಿವಾಲ 15ನೇ ವಾರ್ಷಿಕೋತ್ಸವದ ಪ್ರಯುಕ್ತ 2022ರಲ್ಲಿ ವರ್ಷಪೂರ್ತಿ ಗ್ರಾಹಕರಿಗೆ ಹಲವಾರು ರಿಯಾಯಿತಿ ನೀಡಲು ತೀರ್ಮಾನಿಸಲಾಗಿದೆ ಎನ್ನುತ್ತಾರೆ ಸಂಸ್ಥಾಪಕ ಚೇತನ್, ಸಂಸ್ಥೆ ವೆಬ್ ಸೈಟ್ ನಲ್ಲಿ ಹೆಸರು ನೋಂದಣಿ ಮಾಡಿದ ಗ್ರಾಹಕರಿಗೆ ವಿಶೇಷ ರಿಯಾಯಿತಿ ನೀಡಲಾಗುತ್ತದೆ. ಇದರ ಜತೆಗೆ ಹಲವಾರು ಟೂರಿಂಗ್ ಪ್ಯಾಕೇಜ್ ಗಳನ್ನು ಕಲ್ಪಿಸಲಾಗಿದೆ. ಶಿರಡಿಗೆ ಅತೀ ಕಡಿಮೆ ದರದಲ್ಲಿ ಟೂರಿಂಗ್ ಪ್ಯಾಕೇಜ್ ಕಲ್ಪಿಸಿರುವ ಸಂಸ್ಥೆ ಮೈಸೂರು ಟ್ಯಾಕ್ಸಿವಾಲ ಎನ್ನುತ್ತಾರೆ ಚೇತನ್.
‘ಮೈಸೂರು ಟ್ಯಾಕ್ಸಿವಾಲ’ ಟೂರಿಂಗ್ ಪ್ಯಾಕೇಜ್ ಸೇರಿದಂತೆ ಹೆಚ್ಚಿನ ಮಾಹಿತಿಗೆ www.mysoretaxiwala.com ವೆಬ್ ಸೈಟ್ ಗೆ ಭೇಟಿ ನೀಡಬಹುದು.