ಮೈಸೂರಿನಲ್ಲಿ ಟೀ, ಬೋಂಡ, ಬಜ್ಜಿ ಮಾರಿ ಕೆ ಎಸ್ ಆರ್ ಟಿ ಸಿ ನೌಕರರಿಂದ ಪ್ರತಿಭಟನೆ

ಮೈಸೂರು,ಏಪ್ರಿಲ್,02,2021(www.justkannada.in) : ಆರನೇ ವೇತನ ಜಾರಿಯಾಗದಿದ್ದರೆ ನಮ್ಮ ಬದುಕು ಬೀದಿಗೆ ಬರುತ್ತದೆ ಎಂದು ಆರೋಪಿಸಿ ಸಮವಸ್ತ್ರ ಧರಿಸಿ ಟೀ, ಕಡ್ಲೆಕಾಯಿ, ಬೊಂಡ ಬಜ್ಜಿ ಮಾರಾಟ ಮಾಡಿ ವಿನೂತನ ರೀತಿಯಲ್ಲಿ ಕೆ ಎಸ್ ಆರ್ ಟಿ ಸಿ ನೌಕರರು ಪ್ರತಿಭಟನೆ ನಡೆಸಿದರು.

Illegally,Sand,carrying,Truck,Seized,arrest,driver

ನಗರದ ದೊಡ್ಡಗಡಿಯಾರ ಬಳಿ ಟೀ, ಬೋಂಡ, ಬಜ್ಜಿ ಮಾರಿದರು. ಸರ್ಕಾರ ಈ ಕೂಡಲೆ ನಮ್ಮ ಬೇಡಿಕೆ ಈಡೇರಿಸಬೇಕು. ನಾವು ಶಾಂತಿಯುತವಾಗಿ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಏಪ್ರಿಲ್ 6ವರೆಗೂ ಕಾಯುತ್ತೇವೆ. ನಂತರ ಯಾರೂ ಕರ್ತವ್ಯಕ್ಕೆ ಹಾಜರಾಗುವುದಿಲ್ಲ.

Mysore-Tea-Bonda,Bajji-Sale-K as r t c-employees-Protest

ಬಸ್ ಗಳನ್ನು ರಸ್ತೆಗೆ ಇಳಿಸುವುದಿಲ್ಲವೆಂದು ಸರ್ಕಾರಕ್ಕೆ  ಎಚ್ಚರಿಕೆ ನೀಡಿದರು. 6 ನೇ ವೇತನ ಕೂಡಲೆ ಜಾರಿ ಮಾಡುವಂತೆ ಆಗ್ರಹಿಸಿದರು.

key words : Mysore-Tea-Bonda,Bajji-Sale-K as r t c-employees-Protest