ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ಅಭಿವೃದ್ಧಿ ಪಡಿಸುವ ಚಿಂತನೆ ಇದೆ-ಸಚಿವ ನಾರಾಯಣಗೌಡ…

ಮೈಸೂರು,ಫೆಬ್ರವರಿ,14,2021(www.justkannada.in): ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ಅಭಿವೃದ್ಧಿ ಪಡಿಸುವ ಚಿಂತನೆ ಇದೆ ಎಂದು ಯುವಜನ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ತಿಳಿಸಿದರು.jk

ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ನಾರಾಯಣಗೌಡ, ಬೆಂಗಳೂರಿನಲ್ಲಿ ಒಂದೂವರೆ ಸಾವಿರ ಕೋಟಿ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ. ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ಅಭಿವೃದ್ಧಿ ಪಡಿಸುವ ಚಿಂತನೆ ಇದೆ. ಬೆಂಗಳೂರನ್ನ ಬಿಟ್ಟರೆ ಮೈಸೂರು ಹುಬ್ಬಳ್ಳಿ ಮುಂಚೂಣಿ ನಗರಗಳು. ಪ್ರತಿ ಜಿಲ್ಲೆಗಳಲ್ಲೂ ಕ್ರೀಡಾಂಗಣ ಅಭಿವೃದ್ಧಿ ಪಡಿಸುವ ಕೆಲಸ ಆಗಲಿದೆ. ಪಿಪಿಪಿ ಯೋಜನೆಯಡಿ ಕ್ರೀಡಾಯೋಜನೆಗಳನ್ನ ಕೈಗೆತ್ತಿಕೊಳ್ಳಲಿದ್ದೇವೆ ಎಂದರು.Mysore - thinking - developing - international stadium-Minister -Narayana Gowda.

ಈ ಬಾರಿ ಬಜೆಟ್ ನಲ್ಲಿ ಕ್ರೀಡಾ ಇಲಾಖೆಗೂ ಸಾಕಷ್ಟು ಅನುದಾನ ಸಿಗಲಿದೆ. ಹಾಸ್ಟೆಲ್ ಗಳು ಸೇರಿದಂತೆ ಕ್ರೀಡಾ ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆಗೆ ಪ್ರಯತ್ನಿಸುತ್ತೇನೆ ಎಂದು ಸಚಿವ ನಾರಾಯಣಗೌಡ ನುಡಿದರು.

Key words: Mysore – thinking – developing – international stadium-Minister -Narayana Gowda.