ಮೈಸೂರು,ಆ,22,2020(www.justkannada.in): ನಂಜನಗೂಡು ಟಿಹೆಚ್ ಒ ನಾಂಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಅವರ ಅಮಾನತಿಗೆ ಆಗ್ರಹಿಸಿ ಆರೋಗ್ಯ ಇಲಾಖೆಯಿಂದ ಕರ್ತವ್ಯ ಬಹಿಷ್ಕಾರ ಹಾಕಿ ಪ್ರತಿಭಟನೆ ಮುಂದುವರೆದಿದೆ.
ಸರ್ಕಾರದ ಮೇಲೆ ವೈದ್ಯರ ಒತ್ತಡ ಹೆಚ್ಚಾಗಿದ್ದು, ಜಿಲ್ಲಾ ಪಂಚಾಯಿತಿ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನ ಸಸ್ಪೆಂಡ್ ಮಾಡುವಂತೆ ಆಗ್ರಹಿಸಿ ಇಂದಿನಿಂದ ಡಿಎಚ್ಒ ಕಚೇರಿ ಎದುರು ವೈದ್ಯರು ಧರಣಿ ನಡೆಸುತ್ತಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ.ದೇವಿ ಆನಂದ್, ಪ್ರಕರಣ ಸಂಬಂಧ ಸೋಮವಾರದಿಂದ ರಾಜ್ಯಾದ್ಯಂತ ಕೆಲಸಕ್ಕೆ ಗೈರಾಗಲು ನಿರ್ಧಾರ ಮಾಡಲಾಗಿದೆ. ಡಾ.ನಾಗೇಂದ್ರ ಸಾವಿಗೆ ನ್ಯಾಯ ಕೇಳುತ್ತಿದ್ದೇವೆ. ಜಿಲ್ಲಾ ಪಂಚಾಯಿತಿ ಸಿಇಒ ಸಸ್ಪೆಂಡ್ ಮಾಡಬೇಕು ಎಂಬುದು ನಮ್ಮ ಏಕೈಕ ಬೇಡಿಕೆ. ಇದಕ್ಕಾಗಿ ಕರ್ತವ್ಯ ಬಹಿಷ್ಕರಿಸಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದಿದ್ದಾರೆ.
ಆರೋಗ್ಯ ಇಲಾಖೆಯ ಗ್ರೂಪ್-ಎ ನಿಂದ ಗ್ರೂಪ್-ಡಿ ವರೆಗೆ ಎಲ್ಲರೂ ಒಂದಾಗಿದ್ದೇವೆ. ನಿನ್ನೆ ಸರ್ಕಾರಕ್ಕೆ ಕೋವಿಡ್ ವರದಿ ಕಳುಹಿಲ್ಲ. ನಾಳೆ ಸಂಘದ ರಾಜ್ಯ ಸಮಿತಿಯ ತುರ್ತು ಸಭೆ ಮೈಸೂರಿನಲ್ಲಿ ನಡೆಯಲಿದೆ. ಸಭೆಯಲ್ಲಿ ರಾಜ್ಯಾದ್ಯಂತ ಪ್ರತಿಭಟನೆಯ ರೂಪುರೇಷೆಗಳನ್ನು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ವೈದ್ಯಕೀಯ ಶಿಕ್ಷಣ ಇಲಾಖೆ, ಖಾಸಗಿ ವೈದ್ಯರು ನಮಗೆ ಬೆಂಬಲ ನೀಡಿದ್ದಾರೆ ಎಂದು ಡಾ.ದೇವಿ ಆನಂದ್ ತಿಳಿಸಿದ್ದಾರೆ.
Key words: mysore-THO -Nagendra –Suicide- Case-CEO –suspend-protests